Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ-ದ.ಆಫ್ರಿಕಾ 2ನೇ ಟೆಸ್ಟ್: ಟಾಸ್ ಗೆದ್ದ ದ.ಆಫ್ರಿಕಾ ಬ್ಯಾಟಿಂಗ್

India v/s South Africa 2nd test match report

ಸೆಂಚೋರಿಯನ್, ಜನವರಿ 13; ಭಾರತ-ದಕ್ಷಿಣ ಆಫ್ರಿಕಾ ನಡುವೆ ಸೆಂಚುರಿಯನ್‌ನಲ್ಲಿ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಮೊದಲ ಪಂದ್ಯ ಸೋತಿರುವ ಭಾರತ, ಸರಣಿಯನ್ನು ಗೆಲ್ಲಲು ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಎರಡನೇ ಟೆಸ್ಟ್ ಪಂದ್ಯಕ್ಕೆ ತಂಡದಲ್ಲಿ ಅಲ್ಪ ಬದಲಾವಣೆ ಮಾಡಿದ್ದು, ಶಿಖರ್ ಧವನ್ ಬದಲಿಗೆ ಕರ್ನಾಟಕ ಕೆಎಲ್ ರಾಹುಲ್ ಅವರಿಗೆ ಸ್ಥಾನ ನೀಡಲಾಗಿದೆ, ವೇಗಿ ಭುವನೇಶ್ವರ್ ಕುಮಾರ್ ಬದಲಿಗೆ ಇಶಾಂತ್ ಶರ್ಮಾ ಅವರಿಗೆ ಅವಕಾಶ ನೀಡಲಾಗಿದೆ.

ಟಾಸ್ ಬಳಿಕ ಮಾತನಾಡಿದ ಭಾರತದ ತಂಡದ ನಾಯಕ ವಿರಾಟ್ ಕೋಹ್ಲಿ, 'ನಾವೂ ಸಹ ಮೊದಲು ಬ್ಯಾಟ್ ಮಾಡುವ ಉದ್ದೇಶ ಹೊಂದಿದ್ದೆವು, ಆದರೆ ಟಾಸ್ ನಿಂದ ನಿರಾಶರಾಗಿಲ್ಲ' ಎಂದಿದ್ದಾರೆ.

ಕಳೆದ ಟೆಸ್ಟ್ ಪಂದ್ಯವನ್ನು ಬ್ಯಾಟಿಂಗ್ ವೈಫಲ್ಯದಿಂದಾಗಿ ಸೋತ ಕಾರಣ ಈ ಪಂದ್ಯದಲ್ಲಿ ಬ್ಯಾಟಿಂಗ್ ವಿಭಾಗ ಬಲ ಪಡಿಸುವ ಬಗ್ಗೆ ಹೆಚ್ಚಿನ ಗಮನವನ್ನು ನೀಡಲಾಗಿದೆ, ಹಾಗಾಗಿ ಉತ್ತಮ ಟೆಸ್ಟ್ ಆಟಗಾರ ಎನಿಸಿಕೊಂಡಿರುವ ರಾಜ್ಯದ ಕೆ.ಎಲ್.ರಾಹುಲ್‌ಗೆ ಅವಕಾಶ ನೀಡಲಾಗಿದೆ. ವೇಗಿಗಳಿಗೆ ನೆರವು ನೀಡುವ ಪಿಚ್ ಇದಾಗಿದ್ದು, ಹೆಚ್ಚಿನ ಭೌನ್ಸ್ ಮಾಡುವ ಕ್ಷಮತೆ ಉಳ್ಳ ಇಶಾಂತ್ ಶರ್ಮಾ ಅವರಿಗೆ ಅವಕಾಶ ನೀಡಲಾಗಿದೆ.

Story first published: Saturday, January 13, 2018, 13:42 [IST]
Other articles published on Jan 13, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+