ಭಾರತ vs ಆಸ್ಟ್ರೇಲಿಯಾ: ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್‌ಗೆ ದಂಡ

ಸಿಡ್ನಿ ಟೆಸ್ಟ್ ಪಂದ್ಯ ರೋಚಕ ಹಂತವನ್ನು ತಲುಪಿದೆ. ಆಸ್ಟ್ರೇಲಿಯಾ ಟೀಮ್ ಇಂಡಿಯಾಗೆ ಕಠಿಣ ಸವಾಲನ್ನು ಒಡ್ಡಿದ್ದು ಅಂತಿಮ ದಿನ ಭಾರತ ತಂಡ ಗೆಲ್ಲಲು 309 ರನ್‌ಗಳ ಅವಶ್ಯಕತೆಯಿದೆ. 8 ವಿಕೆಟ್‌ಗಳನ್ನು ಹೊಂದಿರುವ ಭಾರತ ಪಂದ್ಯವನ್ನು ಗೆಲುವು ಸಾಧಿಸಲಿದೆಯಾ ಅಥವಾ ಕನಿಷ್ಠ ಡ್ರಾ ಮಾಡಿಕೊಂಡು ಸೋಲಿನಿಂದ ತಪ್ಪಿಸಿಕೊಳ್ಳಲಿದೆಯಾ ಎಂಬುದು ಅಭಿಮಾನಿಗಳನ್ನು ಕಾಡುತ್ತಿದೆ. ಈ ಮಧ್ಯೆ ಅಂತಿಮ ದಿನ ಉಳಿದ 8 ವಿಕೆಟ್‌ಗಳನ್ನು ಕಿತ್ತು ಗೆಲುವು ಸಾಧಿಸುವ ಉತ್ಸಾಹದಲ್ಲಿರುವ ಆಸಿಸ್ ನಾಯಕ ಟಿಮ್ ಪೈನ್‌ಗೆ ದಂಡದ ಬರೆ ಬಿದ್ದಿದೆ.
ಅಂಪಾಯರ್ ನಿರ್ಣಯಗೆ ಅಗೌರವ ತೋರಿದ ಕಾರಣಕ್ಕೆ ಪಂದ್ಯದ ಸಂಭಾವನೆಯ ಶೇಕಡಾ 15ರಷ್ಟು ದಂಡವನ್ನು ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೈನ್ ಪಾವತಿಸಬೇಕಿದೆ. ಸಿಡ್ನಿ ಟೆಸ್ಟ್ ಪಂದ್ಯದ ಮೂರನೇ ದಿನ ಟಿಮ್ ಪೈನ್ ಅಂಪಾಯರ್ ನಿರ್ಣಯಕ್ಕೆ ಅಗೌರವ ತೋರಿ ಫೀಲ್ಡ್ ಅಂಪಾಯರ್‌ಗಳ ಜೊತೆಗೆ ಮಾತಿನ ಚಕಮಕಿ ನಡೆಸಿದ್ದರು.
ಐಸಿಸಿ ನೀತಿಸಂಹಿತೆಯ 2.8ನೇ ವಿಧಿಯನ್ನು ಟಿಮ್ ಪೈನ್ ಉಲ್ಲಂಘಿಸಿರುವುದು ಸಾಭೀತಾಗಿದೆ. ಹೀಗಾಗಿ ಆಸ್ಟ್ರೇಲಿಯಾ ನಾಯಕನಿಗೆ ಈ ದಂಡವನ್ನು ಮ್ಯಾಚ್ ರೆಫ್ರಿ ವಿಧಿಸಿದ್ದಾರೆ. ಇದರ ಜೊತೆಗೆ ಒಂದು ಡಿಮೆರಿಟ್ ಅಂಕ ಟಿಮ್ ಪೈನ್ ಖಾತೆಗೆ ಬಿದ್ದಿದೆ.
ಭಾರತದ ಮೊದಲ ಇನ್ನಿಂಗ್ಸ್‌ನ ಬ್ಯಾಟಿಂಗ್‌ನ 56ನೇ ಓವರ್‌ನಲ್ಲಿ ಚೇತೇಶ್ವರ್ ಪೂಜಾರ ವಿರುದ್ಧ ಸಲ್ಲಿಸಿದ್ದ ಡಿಸಿಶನ್ ರಿವ್ಯೂ ಸಿಸ್ಟಮ್(ಡಿಆರ್ಎಸ್) ಯಶಸ್ವಿಯಾಗದನ್ನು ಅಂಪೈರ್ ಬಳಿ ಬಂದು ಟೀಕಿಸಿದ್ದರು. ಈ ಆರೋಪವನ್ನು ಪೈನ್ ಒಪ್ಪಿಕೊಂಡಿದ್ದು ದಂಡಕ್ಕೆ ಗುರಿಯಾಗಿದ್ದಾರೆ.
ಸಿಡ್ನಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯ ಸಾಕಷ್ಟು ಬೇಡದ ಕಾರಣಕ್ಕೆ ಚರ್ಚೆಯಾಗುತ್ತಿದೆ. ಪಂದ್ಯದ ಮೂರನೇ ಹಾಗೂ ನಾಲ್ಕನೇ ದಿನ ಸಿಡ್ನಿ ಪ್ರೇಕ್ಷಕರ ವಲಯದಿಂದ ಭಾರತೀಯ ಆಟಗಾರರತ್ತ ನಿಂದನಾತ್ಮಕ ಮಾತುಗಳು ಬಂದಿದ್ದು ಈ ಬಗ್ಗೆ ದೂರು ದಾಖಲಿಸಲಾಗಿದೆ. ಆಸಿಸ್ ಪ್ರೇಕ್ಷಕರ ಈ ವರ್ತನೆಗೆ ಸಾಕಷ್ಟು ಖಂಡನೆ ವ್ಯಕ್ತವಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications