ಭಾರತ vs ಆಸ್ಟ್ರೇಲಿಯಾ: ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಬೇಡದ ದಾಖಲೆ ಬರೆದ ಚಾಹಲ್

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಿ ಬೃಹತ್ ಗುರಿಯನ್ನು ಟೀಮ್ ಇಂಡಿಯಾ ಮುಂದಿಟ್ಟಿತು. ಆಸ್ಟ್ರೇಲಿಯಾದ ಬ್ಯಾಟಿಂಗ್ ಪಡೆ ಟೀಮ್ ಇಂಡಿಯಾ ಬೌಲರ್‌ಗಳನ್ನು ಸಿಡ್ನಿ ಅಂಗಳದಲ್ಲಿ ಅಕ್ಷರಶಃ ಕಾಡಿದರು. ಅದರಲ್ಲೂ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಕೆಟ್ಟ ದಾಖಲೆಯನ್ನು ಬರೆದರು.
ಯುಜುವೇಂದ್ರ ಚಾಹಲ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭರ್ಜರಿಯಾಗಿ ದಂಡನೆಗೆ ಒಳಗಾದರು. 10 ಓವರ್‌ಗಳನ್ನು ಎಸೆದ ಚಾಹಲ್ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು ಆದರೆ 89 ಎನ್ ಬಿಟ್ಟುಕೊಟ್ಟು ಅತ್ಯಂತ ದುಬಾರಿಯಾಗಿ ಪರಿಣಮಿಸಿದರು. ಟೀಮ್ ಇಂಡಿಯಾದ ಉಳಿದ ಬೌಲರ್‌ಗಳು ಕೂಡ ದುಬಾರಿಯಾಗಿ ಪರಿಣಮಿಸಿದ್ದು ಮೊಹಮ್ಮದ್ ಶಮಿ ಮಾತ್ರ ನಿಯಂತ್ರಣ ಸಾಧಿಸಿದುವಲ್ಲಿ ಯಶಸ್ವಿಯಾದರು, ಮಾತ್ರವಲ್ಲಿ ಶಮಿ ಆಸ್ಟ್ರೇಲಿಯಾದ ಮೂರು ವಿಕೆಟ್ ಕೂಡ ಪಡೆದುಕೊಂಡಿದ್ದಾರೆ.

ಹೆಚ್ಚು ರನ್ ಬಿಟ್ಟುಕೊಟ್ಟ ಭಾರತೀಯ ಸ್ಪಿನ್ನರ್
ಯುಜುವೇಂದ್ರ ಚಾಹಲ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಈ ಪ್ರಮಾಣದಲ್ಲಿ ದುಬಾರಿಯಾಗುವ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತೀಯ ಸ್ಪಿನ್ ಬೌಲರ್‌ಗಳ ಪೈಕಿ ಅತ್ಯಂತ ಹೆಚ್ಚು ರನ್ ಬಿಟ್ಟುಕೊಟ್ಟ ಆಟಗಾರ ಎನಿಸಿದರು.

ಚಾವ್ಲಾ ಹೆಸರಿನಲ್ಲಿದ್ದ ದಾಖಲೆ
ಈ ಕೆಟ್ಟ ದಾಖಲೆ ಈ ಹಿಂದೆ ಪಿಯೂಷ್ ಚಾವ್ಲಾ ಹೆಸರಿನಲ್ಲಿ ಇತ್ತು. ಪಿಯೂಷ್ ಚಾವ್ಲಾ 2008ರಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಈ ಬೇಡದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದರು. ಅಂದು ಪಿಯೂಷ್ ಚಾವ್ಲಾ 85ರನ್ ಬಿಟ್ಟುಕೊಟ್ಟಿದ್ದರು.

ಭುವನೇಶ್ವರ್ ಅತ್ಯಂತ ದುಬಾರಿ ಭಾರತೀಯ ಬೌಲರ್
ಇನ್ನು ಭಾರತೀಯ ಬೌಲರ್‌ಗಳ ಪೈಕಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ದಾಖಲೆ ಭುವನೇಶ್ವರ್ ಕುಮಾರ್ ಹೆಸರಿನಲ್ಲಿದೆ. 2015 ರಲ್ಲಿ ಮುಂಬೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯದಲ್ಲಿ 105 ರನ್ ಗಳನ್ನು ಬಿಟ್ಟುಕೊಟ್ಟಿದ್ದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟ ದಾಖಲೆ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟಾರೆಯಾಗಿ ಈ ಕೆಟ್ಟ ದಾಖಲೆಯನ್ನು ಆಸ್ಟ್ರೇಲಿಯಾದ ಬೌಲರ್ ಮೈಕ್ ಲೀವಿಸ್ ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. 2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 0/113 ರನ್‌ಗಳನ್ನು ನೀಡಿದ್ದರು. ಎರಡನೇ ಸ್ಥಾನದಲ್ಲಿ ಪಾಕಿಸ್ತಾನದ ವಾಹಬ್ ರಿಯಾಜ್ ಹಾಗೂ ರಶೀದ್ ಖಾನ್ ಇದ್ದು ರಿಯಾಜ್2016ರಲ್ಲಿ ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲಿ 10 ಓವರ್‌ಗಳಲ್ಲಿ 110 ರನ್‌ಗಳನ್ನು ನೀಡಿದ್ದರೆ ಅಪ್ಘಾನಿಸ್ತಾನದ ರಶೀದ್ ಖಾನ್ 2019ರಲ್ಲಿ ಇಂಗ್ಲೆಂಡ್ ವಿರುದ್ಧ 9 ಓವರ್‌ಗಳಲ್ಲಿ 110 ರನ್ ನೀಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications