For Quick Alerts
ALLOW NOTIFICATIONS  
For Daily Alerts
 

ಏಕದಿನ: ಜಾಧವ್-ಧೋನಿ ಸಾಹಸ, ಆಸೀಸ್ ವಿರುದ್ಧ ಗೆದ್ದು ಬೀಗಿದ ಭಾರತ

India vs Australia, 1st ODI, live cricket score

ಹೈದರಾಬಾದ್, ಮಾರ್ಚ್ 2: ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ (ಮಾರ್ಚ್ 2) ನಡೆದ ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ತಂಡಗಳ ನಡುವಣ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 6 ವಿಕೆಟ್ ಗೆಲುವನ್ನಾಚರಿಸಿದೆ. ಈ ಗೆಲುವಿನೊಂದಿಗೆ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-0ಯ ಮುನ್ನಡೆ ಸಾಧಿಸಿದೆ.

ರೋಹಿತ್ ಶರ್ಮಾ 37, ನಾಯಕ ವಿರಾಟ್ ಕೊಹ್ಲಿ 44, ಎಂಎಸ್ ಧೋನಿ ಅಜೇಯ 59, ಕೇದಾರ್ ಜಾಧವ್ ಅಜೇಯ 81 ರನ್ ಬೆಂಬಲದೊಂದಿಗೆ ಭಾರತ ತಂಡ 48.2 ಓವರ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 240 ರನ್ ಬಾರಿಸುವುದರೊಂದಿಗೆ ವಿಜಯದ ನಗು ಬೀರಿತು.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
45585

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾವನ್ನು ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ, ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದು ಕಾಡಿದರು. ಆರಂಭಿಕ ಆಟಗಾರ, ಆಸೀಸ್ ನಾಯಕ ಆ್ಯರನ್ ಫಿಂಚ್ ಅವರನ್ನು ವೇಗಿ ಬೂಮ್ರಾ ಸೊನ್ನೆಗೆ ಪೆವಿಲಿಯನ್‌ಗೆ ಅಟ್ಟಿದರು. ಮಾರ್ಕಸ್ ಸ್ಟೋಯ್ನಿಸ್ ಕೂಡ 37 ರನ್ನಿಗೆ ನಿರ್ಗಮಿಸಿದರು.

ಆದರೆ ಆಸೀಸ್ ಪರ ಆರಂಭಿಕ ಆಟಗಾರ ಉಸ್ಮಾನ್ ಖವಾಜ 50, ಗ್ಲೆನ್ ಮ್ಯಾಕ್ಸ್‌ವೆಲ್ 40 (ಬಿ ಶಮಿ), ಆ್ಯಷ್ಟನ್ ಟರ್ನರ್ 21, ಅಲೆಕ್ಸ್ ಕ್ಯಾರಿ ಅಜೇಯ 36, ನಾಥನ್ ಕೌಲ್ಟರ್-ನೈಲ್ 28 ರನ್ ಬಾರಿಸಿದ್ದು ತಂಡವನ್ನು ರನ್ ಕುಸಿತದಿಂದ ಪಾರು ಮಾಡಿತು. ಆಸ್ಟ್ರೇಲಿಯಾ 50 ಓವರ್‌ಗೆ 7 ವಿಕೆಟ್ ಕಳೆದು 236 ರನ್ ಪೇರಿಸಿತು.

ಟಿ20 ಸರಣಿ ಸೋತಿದ್ದ ಭಾರತ ಈ ಗೆಲುವಿನೊಂದಿಗೆ ಸೇಡು ತೀರಿಸಿಕೊಂಡಂತಾಗಿದೆ. ಕೇದಾರ್ ಜಾಧವ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಈ ಪಂದ್ಯಕ್ಕಾಗಿ ಮೈದಾನಕ್ಕಿಳಿಯುವಾಗ ಟೀಮ್ ಇಂಡಿಯಾ ನೂತನ ಜೆರ್ಸಿ ಧರಿಸಿದ್ದುದು ಗಮನ ಸೆಳೆಯಿತು.

ಆಸ್ಟ್ರೇಲಿಯಾ ತಂಡ: ಆ್ಯರನ್ ಫಿಂಚ್ (ಸಿ), ಉಸ್ಮಾನ್ ಖವಾಜಾ, ಮಾರ್ಕಸ್ ಸ್ಟೊಯಿನಿಸ್, ಪೀಟರ್ ಹ್ಯಾಂಡ್ಸ್‌ಕಾಂಬ್, ಗ್ಲೆನ್ ಮ್ಯಾಕ್ಸ್‌ವೆಲ್, ಆಷ್ಟನ್ ಟರ್ನರ್, ಅಲೆಕ್ಸ್ ಕ್ಯಾರಿ (ವಿಕೆ), ನಾಥನ್ ಕೌಲ್ಟರ್-ನೈಲ್, ಪ್ಯಾಟ್ ಕಮ್ಮಿನ್ಸ್, ಆಡಮ್ ಝಂಪಾ, ಜಾಸನ್ ಬೆಹ್ರೆನ್ಡಾರ್ಫ್.

ಭಾರತ ತಂಡ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ಸಿ), ಅಂಬಾಟಿ ರಾಯುಡು, ಎಂಎಸ್ ಧೋನಿ (ವಿಕೆ), ಕೇದಾರ್ ಜಾಧವ್, ವಿಜಯ್ ಶಂಕರ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ.

Story first published: Saturday, March 2, 2019, 21:54 [IST]
Other articles published on Mar 2, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+