India vs Australia 1st T20I : ಮೊಹಾಲಿ ಸ್ಟೇಡಿಯಂ ಹವಾಮಾನ ವರದಿ ಹಾಗೂ ಅಂಕಿ ಅಂಶ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ಮೇಲೆ ಈಗ ಎಲ್ಲರ ಚಿತ್ತ ನೆಟ್ಟಿದೆ. ಟಿ20 ವಿಶ್ವಕಪ್‌ನ ಸನಿಹದಲ್ಲಿಯೇ ಈ ಸರಣಿ ಆಯೋಜನೆಯಾಗುತ್ತಿರುವ ಕಾರಣ ಕುತೂಹಲ ಕೆರಳಿಸಿದೆ. ಮೂರು ಪಂದ್ಯಗಳ ಸರಣಿ ಇದಾಗಿದ್ದು ಈ ಸರಣಿಗಾಗಿ ಆಸಿಸ್ ಪಡೆ ಭಾರತ ಪ್ರವಾಸವನ್ನು ಕೈಗೊಂಡಿದೆ. ಈ ಸರಣಿಯ ಮೊದಲ ಪಂದ್ಯ ಮೊಹಾಲಿಯಲ್ಲಿ ನಡೆಯಲಿದ್ದು ಸೆಪ್ಟೆಂಬರ್ 20ರಂದು ಈ ಪಂದ್ಯ ಆಯೋಜನೆಯಾಗಲಿದೆ.
ಮೊಹಾಲಿ ಸ್ಟೇಡಿಯಂನಲ್ಲಿ ಸರಣಿಯ ಮೊದಲ ಪಂದ್ಯ ನಡೆಯಲಿದ್ದು ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಸ್ಟೇಡಿಯಂನಲ್ಲಿ ಸಾಕಷ್ಟು ಟಿ20 ಪಂದ್ಯಗಳು ನಡೆದಿದ್ದು ಇಲ್ಲಿನ ಕೆಲ ಕುತೂಹಲಕಾರಿ ಅಂಕಿಅಂಶಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ವರದಿಯಲ್ಲಿ ನೋಡೋಣ. ಮುಂದೆ ಓದಿ..

ಮೊಹಾಲಿಯಲ್ಲಿ ಟಿ20 ಫಲಿತಾಂಶ
ಭಾರತ ಈ ಮೊಹಾಲಿ ಸ್ಟೇಡಿಯಂನಲ್ಲಿ 3 ಟಿ20 ಪಂದ್ಯಗಳನ್ನು ಆಡಿದೆ. ಈ ಮೂರು ಪಂದ್ಯಗಳನ್ನು ಕುಡ ಗೆದ್ದುಕೊಂಡಿದ್ದು ಮೊಹಾಲಿ ಕ್ರೀಡಾಂಗಣದಲಲ್ಇ ಟಿ20 ಮಾದರಿಯಲ್ಲಿ ಅಜೇಯ ಸಾಧನೆ ಮಾಡಿದಂತಾಗಿದೆ. ಮತ್ತೊಂದೆಡೆ ಆಸ್ಟ್ರೇಲಿಯ ಇಲ್ಲಿ 2 ಪಂದ್ಯಗಳನ್ನು ಆಡಿದ್ದುಈ ಪೈಕಿ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದ್ದರೆ ಮತ್ತೊಂದು ಪಂದ್ಯದಲ್ಲಿ ಸೋಲು ಅನುಭವಿಸಿದ.

ಮೊಹಾಲಿ T20I ಅಂಕಿಅಂಶಗಳು (ಬ್ಯಾಟಿಂಗ್)
ಗರಿಷ್ಠ ಮೊತ್ತ: ಭಾರತ: 211/4
ಗರಿಷ್ಠ ಮೊತ್ತ: ಆಸ್ಟ್ರೇಲಿಯಾ: 193/4
ಕಡಿಮೆ ಮೊತ್ತ: ದಕ್ಷಿಣ ಆಫ್ರಿಕಾ: 149/5
ಅತಿ ಹೆಚ್ಚು ರನ್: ವಿರಾಟ್ ಕೊಹ್ಲಿ: 154
ಗರಿಷ್ಠ ಸ್ಕೋರ್: ವಿರಾಟ್ ಕೊಹ್ಲಿ: 82
ಅತಿ ಹೆಚ್ಚು ಸಿಕ್ಸರ್: ಯುವರಾಜ್ ಸಿಂಗ್: 6
ಅತ್ಯಧಿಕ ಜೊತೆಯಾಟ: ಸನತ್ ಜಯಸೂರ್ಯ/ ಕುಮಾರ್ ಸಂಗಕ್ಕಾರ: 81
ಭಾರತದ ಪರ ಅತ್ಯಧಿಕ ಜೊತೆಯಾಟ: ಎಂಎಸ್ ಧೋನಿ / ಯುವರಾಜ್ ಸಿಂಗ್: 80

ಮೊಹಾಲಿ ಟಿ20ಐ ಬೌಲಿಂಗ್ ಅಂಕಿಅಂಶಗಳು
ಅತಿ ಹೆಚ್ಚು ವಿಕೆಟ್: ಜೇಮ್ಸ್ ಫಾಕ್ನರ್: 6
ಭಾರತದ ಪರ ಹೆಚ್ಚು ವಿಕೆಟ್: ಯುವರಾಜ್ ಸಿಂಗ್: 4
ಅತ್ಯುತ್ತಮ ಬೌಲಿಂಗ್ ಸಾಧನೆ: ಜೇಮ್ಸ್ ಫಾಕ್ನರ್: 5/27
ಭಾರತದ ಪರ ಅತ್ಯುತ್ತಮ ಬೌಲಿಂಗ್ ಸಾಧನೆ: ಯುವರಾಜ್ ಸಿಂಗ್: 4/23
ಅತ್ಯುತ್ತಮ ಎಕಾನಮಿ: ದೀಪಕ್ ಚಹಾರ್: 5.50
ಹೆಚ್ಚು ಕ್ಯಾಚ್ ಪಡೆದ ಫೀಲ್ಡರ್: ಮಾರ್ಟಿನ್ ಗಪ್ಟಿಲ್ / ರವೀಂದ್ರ ಜಡೇಜಾ: 3
ಹೆಚ್ಚು ಬಲಿ ಪಡೆದ ವಿಕೆಟ್ ಕೀಪರ್: ಎಂಎಸ್ ಧೋನಿ 3

ಹವಾಮಾನ ವರದಿ
ಸೆಪ್ಟೆಂಬರ್ 20 ರಂದು (ಮಂಗಳವಾರ) ಮೊಹಾಲಿ ಹವಾಮಾನವು 35 ಡಿಗ್ರಿಗಳ ಗರಿಷ್ಠ ಮಟ್ಟದಲ್ಲಿರಲಿದೆ. ಜೊತೆಗೆ ಶೇಕಡಾ 30ರಷ್ಟು ಮೋಡ ಕವಿದ ವಾತಾವರಣವಿರಲಿದೆ. ರಾತ್ರಿಯಲ್ಲಿ ತಾಪಮಾನವು 28 ಡಿಗ್ರಿಗಳಿಗೆ ಇಳಿಯಲಿದೆ. ಆದರೆ ಪಂದ್ಯದ ದಿನದಂದು ಕನಿಷ್ಠ ಒಂದು ಗಂಟೆಯವರೆಗೆ ಶೇ.25 ರಷ್ಟು ಮಳೆ ಬೀಳುವ ಸಾಧ್ಯತೆ ಇದೆ. ಆದರೆ ಮಧ್ಯಾಹ್ನದ ವೇಳೆಗೆ ಮಳೆ ಸುರಿಯುವ ಸಾಧ್ಯತೆಯಿರುವ ಕಾರಣ ಈ ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆಯಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications