Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಆಸ್ಟ್ರೇಲಿಯಾ, 1st ಟೆಸ್ಟ್: ಆಸ್ಟ್ರೇಲಿಯಾವನ್ನು 191 ರನ್‌ಗಳಿಗೆ ಆಲೌಟ್ ಮಾಡಿದ ಭಾರತ

India vs Australia Live Score, 1st Test Day 2, Adelaide Test

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಹಿಡಿತವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಭಾರತೀಯ ಬೌಲಿಂಗ್ ವಿಭಾಗ ತೊರಿದ ಅದ್ಭುತ ಪ್ರದರ್ಶನದಿಂದಾಗಿ ಆಸ್ಟ್ರೇಲಿಯಾ ತಂಡವನ್ನು 191 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಭಾರತ 53 ರನ್‌ಗಳ ಮುನ್ನಡೆಯನ್ನು ಪಡೆದುಕೊಂಡಿದೆ.

ಭಾರತೀಯ ಬೌಲರ್‌ಗಳು ಆರಂಭದಿಂದಲೂ ಮೇಲುಗೈ ಸಾಧಿಸಿಕೊಂಡು ಬಂದರು. ಆರಂಭಿಕ ಆಟಗಾರರಿಬ್ಬರಿಗೂ ಜಸ್ಪ್ರೀತ್ ಬೂಮ್ರಾ ಫೆವಿಲಿಯನ್ ಹಾದಿ ತೋರಿಸಿದರು. ಅದಾದ ಬಳಿಕ ಅಪಾಯಕಾರಿ ಆಟಗಾರ ಸ್ಟೀವ್ ಸ್ಮಿತ್ ಅವರನ್ನು ಆರ್ ಅಶ್ವಿನ್ ಬಲಿ ಪಡೆದುಕೊಂಡರು.

ಮರ್ನಾಸ್ ಲ್ಯಾಬುಶೈನ್ ಕೆಲ ಜೀವದಾನಗಳನ್ನು ಪಡೆದುಕೊಂಡರಾದರೂ ಅದನ್ನು ಅತ್ಯುತ್ತಮ ರೀತಿಯಲ್ಲಿ ಬಳಸಿಕೊಳ್ಳಲು ವಿಫಲರಾದರು. ತುಂಬಾ ಹೊತ್ತು ಕ್ರೀಸ್‌ನಲ್ಲಿ ಉಳಿದರಾದರೂ 47 ರನ್‌ಗಳಿಗೆ ಉಮೇಶ್‌ ಯಾದವ್‌ಗೆ ಬಲಿಯಾದರು. ಟ್ರೇವಿಸ್ ಹೆಡ್, ಕ್ಯಾಮರೂನ್ ಗ್ರೀನ್ ಕೂಡ ಹೆಚ್ಚು ಹೊತ್ತು ಉಳಿಯಲಿಲ್ಲ. ಅಶ್ವಿನ್ ಈ ಆಟಗಾರರ ವಿಕೆಟ್ ಕೂಡ ಪಡೆದುಕೊಂಡರು.

ಆದರೆ ನಾಯಕ ಟಿಮ್ ಪೈನ್ ಮಾತ್ರ ತಂಡ ಉತ್ತಮ ಪ್ರತಿರೋಧವನ್ನು ತೋರುವಲ್ಲಿ ಯಶಸ್ವಿಯಾದರು. ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ನೆರವಿನೊಂದಿಗೆ ಅರ್ಧ ಶತಕವನ್ನು ಬಾರಿಸಿ ತಂಡದ ಮೊತ್ತವನ್ನು ಹೆಚ್ಚುವಲ್ಲಿ ಕಾರಣರಾದರು. 73 ರನ್‌ಗಳಿಸಿದ ಪೈನ್ ಅಜೇಯವಾಗಿ ಉಳಿದರು. ಭಾರತದ ಪರವಾಗಿ ಅಶ್ವಿನ್ 4 ವಿಕೆಟ್ ಪಡೆದು ಮಿಂಚಿದರೆ ಉಮೇಶ್ ಯಾದವ್ 3 ಹಾಗೂ ಜಸ್ಪ್ರೀತ್ ಬೂಮ್ರಾ ಎರಡು ವಿಕೆಟ್ ಪಡೆದರು.

ಇನ್ನು ಇದಕ್ಕೂ ಮುನ್ನ ಭಾರತ ಭಾರತ 244 ರನ್ ಗಳಿಸಿ ಆಲೌಟ್ ಆಯಿತು. 233 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡು ಎರಡನೇ ದಿನದಾಟವನ್ನು ಆರಂಭಿಸಿದ್ದ ಭಾರತ ಎರಡನೇ ದಿನದಾಟ ಆರಂಭವಾದ ಕೆಲವೇ ಹೊತ್ತಿನಲ್ಲಿ ಉಳಿದ ನಾಲ್ಕು ವಿಕೆಟ್ ಕಳೆದುಕೊಂಡಿತು.

ಆಸ್ಟ್ರೇಲಿಯಾ ತಂಡದ ವೇಗಿಗಳು ಕೂಡ ಮೊದಲ ದಿನದ ಗೌರವವನ್ನು ಸಂಪಾದಿಸಿದ್ದಾರೆ. ತೀಕ್ಷ್ಣವಾದ ದಾಳಿಯನ್ನು ಸಂಘಟಿಸುವಲ್ಲಿ ಆಸಿಸ್ ಬೌಲರ್‌ಗಳು ಯಶಸ್ವಿಯಾಗಿದ್ದು ಪ್ರಮುಖ ವಿಕೆಟ್‌ಗಳನ್ನು ಪಡೆದಿದ್ದಾರೆ. ಆರಂಭಿಕರನ್ನು ಶೀಘ್ರದಲ್ಲೇ ವಿಕೆಟ್ ಪಡೆಯುವಲ್ಲಿ ಆಸಿಸ್ ಬೌಲರ್‌ಗಳು ಯಶಸ್ವಿಯಾದರು. ಬಳಿಕ ಚೇತೇಶ್ವರ್ ಪೂಜಾರ ಹಾಗೂ ವಿರಾಟ್ ಕೊಹ್ಲಿ ನಿಧಾನಗತಿಯಲ್ಲಿ ಇನ್ನಿಂಗ್ಸ್ ಕಟ್ಟಲು ಆರಂಬಿಸಿದ್ದರು. ಈ ಸಂದರ್ಭದಲ್ಲಿ ಪೂಜಾರ ವಿಕೆಟ್ ಕೆಡವುವಲ್ಲಿಯೂ ಆಸಿಸ್ ಬೌಲರ್‌ಗಳು ಯಶಸ್ವಯಾದರು.

Live ಸ್ಕೋರ್ ಕಾರ್ಡ್ ಇಲ್ಲಿದೆ:

1
48440

ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಹಾಗೂ ಹನುಮ ವಿಹಾರಿ ತಮ್ಮ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿದ್ದಾರೆ. ಆಸ್ಟ್ರೇಲಿಯಾ ತಂಡದ ಪರವಾಗಿ ಮೊದಲ ದಿನ ಮಿಚೆಲ್ ಸ್ಟಾರ್ಕ್ 2 ವಿಕೆಟ್ ಪಡೆದರೆ ಜೋಶ್ ಹ್ಯಾಜಲ್‌ವುಡ್, ಪ್ಯಾಟ್ ಕಮ್ಮಿನ್ಸ್ ಹಾಗೂ ನಥನ್ ಲಿಯಾನ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.

ಟೀಮ್ ಇಂಡಿಯಾ ಆಡುವ ಬಳಗ: ಪೃಥ್ವಿ ಶಾ, ಮಾಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ಹನುಮಾ ವಿಹಾರಿ, ವೃದ್ಧಿಮಾನ್ ಸಹಾ (ವಿಕೆಟ್ಕೀಪರ್), ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ

ಆಸ್ಟ್ರೇಲಿಯಾ ಆಡುವ ಬಳಗ: ಜೋ ಬರ್ನ್ಸ್, ಮ್ಯಾಥ್ಯೂ ವೇಡ್, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಟಿಮ್ ಪೈನ್ (ನಾಯಕ/ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಜಲ್‌ವುಡ್

Story first published: Friday, December 18, 2020, 16:30 [IST]
Other articles published on Dec 18, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+