ಪುಣೆ, ಫೆಬ್ರವರಿ. 24 : ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ನ 2ನೇ ದಿನದ ಅಂತ್ಯಕ್ಕೆ ಆಸೀಸ್ 298 ರನ್ ಗಳ ಮುನ್ನಡೆ ಸಾಧಿಸಿದೆ.
ಮೊದಲ ಇನ್ನಿಂಗ್ಸ್ ನಲ್ಲಿ 260 ರನ್ ಗಳಿಸಿ ಆಲೌಟ್ ಆಗಿತ್ತು. ನಂತರ ತನ್ನ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ್ದ ಭಾರತ ಕೇವಲ 105 ರನ್ ಗಳಿಗೆ ಸರ್ವಪತನ ಕಂಡಿತು.
ಇದರಿಂದ 155 ರನ್ ಗಳ ಮುನ್ನಡೆ ಸಾಧಿಸಿದ್ದ ಆಸೀಸ್ ತನ್ನ 2ನೇ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಕಳೆದುಕೊಂಡು 143 ರನ್ ಗಳಿಸಿದೆ. ಒಟ್ಟಾಗಿ 2ನೇ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ 298 ರನ್ ಗಳ ಮುನ್ನಡೆ ಸಾಧಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.

ಆಸ್ಟ್ರೇಲಿಯಾವನ್ನು ಮೊದಲ ಇನ್ನಿಂಗ್ಸ್ ನಲ್ಲಿ 260 ರನ್ ಗಳಿಗೆ ಆಲೌಟ್ ಮಾಡಿದ್ದ ಭಾರತಕ್ಕೆ ಆಸೀಸ್ ತಿರುಗೇಟು ನೀಡಿದೆ. ಆಸೀಸ್ ಪರ ಸ್ಟೀವ್ ಓ ಕೀಫೆ 5 ವಿಕೆಟ್ ಪಡೆದು ಮಿಂಚಿದರು.
ಭಾರತ ಪರ ಕೆಲ್ ರಾಹುಲ್ (64) ಅರ್ಧ ಶತಕ ಬಾರಿಸಿದ್ದನ್ನು ಹೊರತು ಪಡಿಸಿದರೆ ಉಳಿದ ಆಟಗಾರರು ರನ್ ಗಳಿಸಲು ವಿಫಲರಾದರು.
ಆರಮಭದಲ್ಲಿಯೇ ಭಾರತ 20 ಓವರ್ ಗಳಲ್ಲಿ ಕೇವಲ 64 ರನ್ ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಮುರಳಿ ವಿಜಯ್ 10, ನಾಯಕ ವಿರಾಟ್ ಕೊಹ್ಲಿ 0 ರನ್ ಗಳಿಸಿ ನಿರಾಸೆ ಮೂಡಿಸಿದರು.
ಫೆಬ್ರವರಿ 23 ರಂದು ಆರಂಭವಾಗಿರುವ ಬಾರ್ಡರ್ ಗಾವಾಸ್ಕರ್ ಮೊದಲ ಟೆಸ್ಟ್ ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಕಾಂಗೂರು ಪಡೆ ಮೊದಲ ದಿನ ಭಾರತದ ಬೌಲರ್ ಗಳ ಎದುರು ರನ್ ಗಳಿಸಲು ತಿಣುಕಾಡಿದರು. ಮೊದಲ ದಿನದ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 256 ರನ್ ಗಳಿಸಿದ್ದ ಆಸೀಸ್ 2ನೇ ಶುಕ್ರವಾರ 260 ರನ್ ಗಳಿಗೆ ಆಲೌಟ್ ಆಗಿದೆ.[ಭಾರತ-ಆಸ್ಟ್ರೇಲಿಯಾ ಟೆಸ್ಟ್: ಉಮೇಶ್ ಯಾದವ್ ದಾಳಿಗೆ ತತ್ತರಿಸಿದ ಆಸೀಸ್]
ಮೊದಲ ದಿನ ಅರ್ಧಶತಕ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ವಿಚೆಲ್ ಸ್ಟಾರ್ಕ್ (61) ಅವರನ್ನು ಶುಕ್ರವಾರ ಬೆಳಗ್ಗೆ ಆರ್ ಅಶ್ವಿನ್ ಪೆವಿಲಿಯನ್ ಹಾದಿ ತೋರಿಸಿದರು.[ವಿಡಿಯೋ: ಸೂಪರ್ ಮ್ಯಾನ್ ನಂತೆ ಹಾರಿ ಕ್ಯಾಚ್ ಹಿಡಿದ ಸಹಾ!]
ಜೋಶ್ ಹೇಜಲ್ ವುಡ್ 01 ರನ್ ಮಾಡಿ ನಾಟೌಟ್ ಆಗಿ ಉಳಿದರು. ಅಶ್ವಿನ್ 63ಕ್ಕೆ 3, ಉಮೇಶ್ ಯಾದವ್ 4 ವಿಕೆಟ್ ಪಡದು ಮಿಂಚಿದರು. ಬ್ಯಾಟಿಂಗ್ ಆರಂಭಿಸಿದ ಭಾರತ 9.4 ಓವರ್ ಗಳಿಲ್ಲಿ 1 ವಿಕೆಟ್ ಕಳೆದುಕೊಂಡು 34 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದೆ.
ಮುರುಳಿ ವಿಜಯ್ 10 ರನ್ ಗಳಿಸಿ ಹೇಜಲ್ ವುಡ್ ಗೆ ವಿಕೆಟ್ ಒಪ್ಪಿಸಿದರು. ಕೆಲ್ ರಾಹುಲ್ ಮತ್ತು ಚೇತೇಶ್ವರ ಪೂಜಾರ ಬ್ಯಾಟಿಂಗ್ ಮಾಡುತ್ತಿದ್ದಾರೆ.