Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೋಲ್ಕತಾ ನಂತರ ಚೆನ್ನೈ ಪಂದ್ಯದ ಟಿಕೆಟ್ ಬೆಲೆ ಏರಿಕೆǃ

ಚೆನ್ನೈ, ಆಗಸ್ಟ್ 25:ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ) ಬಿಸಿ ಈ ಬಾರಿ ಕ್ರಿಕೆಟ್ ಅಭಿಮಾನಿಗಳಿಗೆ ಬಲವಾಗಿ ತಟ್ಟುತ್ತಿದೆ. ಆಸ್ಟ್ರೇಲಿಯಾ ತಂಡವು ಭಾರತ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ನಡೆಯುವ ಪಂದ್ಯದ ಟಿಕೆಟ್ ಬೆಲೆ ಏರಿಕೆಯಾಗುತ್ತಿದೆ.

ಕೋಲ್ಕತಾದ ಈಡೆನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುವ ಪಂದ್ಯದ ಟಿಕೆಟ್ ಬೆಲೆ ಏರಿಕೆ ಬಳಿಕ, ಚೆನ್ನೈ ನ ಚೇಪಾಕ್ ಮೈದಾನದ ನಡೆಯುವ ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಮೊದಲ ಏಕದಿನ ಟಿಕೆಟ್ ಬೆಲೆ ಏರಿಕೆಯಾಗಲಿದೆ ಎಂದು ತಮಿಳುನಾಡು ಕ್ರಿಕೆಟ್ ಸಂಸ್ಥೆ ಪ್ರಕಟಿಸಿದೆ.

India vs Australia 2017: Chepauk ODI ticket price raised by 53%


ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುವ ಏಕದಿನ ಪಂದ್ಯದ ಟಿಕೆಟ್ ಬೆಲೆ ಶೇ 28ರಷ್ಟು ಏರಿಕೆಯಾಗಿದೆ. ಈಗ ಚೆನ್ನೈನ ಪಂದ್ಯದ ಬೆಲೆ ಶೇ 53ರಷ್ಟು ಏರಿಕೆಯಾಗುತ್ತಿರುವ ಸುದ್ದಿ ಬಂದಿದೆ.

ಶೇ. 28 ರಷ್ಟು ಜಿ.ಎಸ್.ಟಿ. ಹಾಗೂ ಸ್ಥಳೀಯ ಮುನ್ಸಿಪಲ್ ತೆರಿಗೆ ಶೇ 25 ಸೇರಿಸಿದರೆ ಶೇ. 53 ರಷ್ಟು ಟಿಕೆಟ್ ಬೆಲೆ ಏರಿಕೆಯಾಗಿದೆ. 750 ರೂ. ಟಿಕೆಟ್ ಬೆಲೆ 1200 ರೂ ಆಗಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಈ ಮುಂಚೆ ಐಪಿಎಲ್ ಹಾಗೂ ಟಿಎನ್ ಪಿಎಲ್ ಪಂದ್ಯಗಳಿಗೆ ಮಾತ್ರ ಮುನ್ಸಿಪಲ್ ತೆರಿಗೆ ವಿಧಿಸಲಾಗುತ್ತಿತ್ತು, ಆದರೆ, ಈ ಬಾರಿ ಏಕದಿನ ಪಂದ್ಯ ಹಾಗೂ ಟೆಸ್ಟ್ ಪಂದ್ಯಗಳಿಗೂ ಶೇ 25ರಷ್ಟು ಹೆಚ್ಚುವರಿ ಸುಂಕ ಹಾಕಲಾಗುತ್ತಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+