For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ ಮೊದಲ ಟಿ20: ಸಮಯ, ಸಂಭಾವ್ಯ ತಂಡ, ನೇರಪ್ರಸಾರ

India vs Australia 2020 1st T20: Date, India Time, Probable 11, Live Streaming Details

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಭಾರತ 1-2 ಅಂತರದಿಂದ ಕಳೆದುಕೊಂಡರೂ ಅಂತಿಮ ಪಂದ್ಯದ ಗೆಲುವು ತಂಡಕ್ಕೆ ಕೊಂಚ ನಿರಾಳತೆಯನ್ನು ತಂದಿದೆ. ಈಗ ಎರಡು ತಂಡಗಳು ಕೂಡ ಟಿ20 ಸರಣಿಗೆ ಸಿದ್ದವಾಗಿದೆ. ಶುಕ್ರವಾರ ಟಿ20 ಸರಣಿಯ ಮೊದಲ ಪಂದ್ಯ ನಡೆಯಲಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಈ ಬಾರಿಯ ಐಪಿಎಲ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಟಗಾರರಿಂದ ಅದ್ಭುತವಾದ ಪ್ರದರ್ಶನ ಬಂದಿರುವ ಕಾರಣ ಆಸ್ಟ್ರೇಲಿಯಾ ವಿರುದ್ಧ ಮೇಲುಗೈ ಸಾಧಿಸುವ ವಿಶ್ವಾಸ ಅಭಿಮಾನಿಗಳಲ್ಲಿ ಇದೆ. ಆದರೆ ಆಸ್ಟ್ರೇಲಿಯಾಗೆ ತವರಿನ ಲಾಭ ಇದ್ದೇ ಇದೆ. ಹೀಗಾಗಿ ಚುಟುಕು ಸರಣಿಯಲ್ಲಿ ಯಾರದ್ದು ಮೇಲುಗೈ ಆಗಲಿದೆ ಎಂಬುದು ಪ್ರಶ್ನೆಯಾಗಿದೆ.

ಏಕದಿನ ಸರಣಿಯ ಬಳಿಕ ಆರಂಭವಾಗುತ್ತಿರುವ ಟಿ20 ಸರಣಿಯ ಆರಂಭ, ನೇರ ಪ್ರಸಾರ ತಂಡಗಳ ಮಾಹಿತಿಯನ್ನು ಮುಂದೆ ಓದಿ..

ಅದ್ಭುತ ಹೋರಾಟದ ನಿರೀಕ್ಷೆ

ಅದ್ಭುತ ಹೋರಾಟದ ನಿರೀಕ್ಷೆ

ಶಿಖರ್ ಧವನ್, ವಿರಾಟ್ ಕೊಹ್ಲಿ ಹಾರ್ದಿಕ್ ಪಾಂಡ್ಯ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಯುಜುವೇಂದ್ರ ಚಾಹಲ್ ಐಪಿಎಲ್‌ನಲ್ಲಿ ಅತ್ಯುತ್ತಮವಾಗಿ ಆಡಿದ್ದಾರೆ. ಮತ್ತೊಂದೆಡೆ ಆಸ್ಟ್ರೇಲಿಯಾ ತಂಡದ ಸ್ಟೀವ್ ಸ್ಮಿತ್, ಮ್ಯಾಕ್ಸ್‌ವೆಲ್ ಫಿಂಚ್ ಐಪಿಎಲ್‌ನಲ್ಲಿ ಅದ್ಭುತವಾಗಿ ಕಾಣದಿದ್ದರೂ ಟೀಮ್ ಇಂಡಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರೀ ಪ್ರದರ್ಶನ ನೀಡಿ ಮಿಂಚಿದ್ದಾರೆ.

ಸಮಯ ಹಾಗೂ ಪಂದ್ಯದ ಸ್ಥಳ

ಸಮಯ ಹಾಗೂ ಪಂದ್ಯದ ಸ್ಥಳ

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯ ಡಿಸೆಂಬರ್ 4ರಂದು ಶುಕ್ರವಾರ ನಡೆಯಲಿದೆ. ಮೂರನೇ ಟಿ20 ಪಂದ್ಯ ನಡೆದ ಕ್ಯಾನ್‌ಬೆರಾದ ಮನುಕಾ ಓವಲ್‌ನಲ್ಲೇ ಮೊದಲ ಟಿ20 ಪಂದ್ಯ ನಡೆಯಲಿದೆ. ಹೀಗಾಗಿ ಆಸ್ಟ್ರೇಲಿಯಾ ಹಾಗೂ ಭಾರತ ಎರಡು ತಂಡಗಳು ಕೂಡ ಈಗಾಲೇ ಕ್ಯಾನ್‌ಬೆರಾದಲ್ಲೇ ಉಳಿದುಕೊಂಡಿದೆ.

ಪಂದ್ಯದ ಸಮಯ

ಪಂದ್ಯದ ಸಮಯ

ಈ ಪಂದ್ಯದ ಆಸ್ಟ್ರೇಲಿಯಾದಲ್ಲಿ ಹೊನಲುಬೆಳಕಿನಲ್ಲಿ ನಡೆಯಲಿದೆ. ಆದರೆ ಭಾರತೀಯ ಕಾಲಮಾನ ಮಧ್ಯಾಹ್ನ ಆರಂಭವಾಗಲಿದೆ. ಮಧ್ಯಾಹ್ನ 1:40 ನಿಮಿಷಕ್ಕೆ ಪಂದ್ಯದ ಆರಂಭವಾಗಲಿದೆ. ಅದಕ್ಕೂ 30 ನಿಮಿಷ ಮುನ್ನ ಪಂದ್ಯದ ಟಾಸ್ ಪ್ರಕ್ರಿಯೆ ನಡೆಯಲಿದೆ.

ಪಂದ್ಯದ ನೇರಪ್ರಸಾರ

ಪಂದ್ಯದ ನೇರಪ್ರಸಾರ

ಆಸ್ಟ್ರೇಲಿಯಾ ವಿರುದ್ಧದ ನೇರಪ್ರಸಾರದ ಹಕ್ಕನ್ನು ಸೋನಿ ಸ್ಪೋಟ್ಸ್‌ ನೆಟ್‌ವರ್ಕ್ ಹೊಂದಿದೆ. ಹೀಗಾಗಿ ಸೋನಿ ಸಿಕ್ಸ್ ಹಾಗೂ ಸೋನಿ 3 ಚಾನೆಲ್‌ನಲ್ಲಿ ಈ ಪಂದ್ಯದ ನೇರಪ್ರಸಾರವಾಗಲಿದೆ. ಸೋನಿ ಲೈವ್‌ನ ಚಂದಾದಾರರಿಗೂ ನೇರಪ್ರಸಾರ ದೊರೆಯಲಿದೆ.

ಸಂಭಾವ್ಯ ತಂಡ ಭಾರತ

ಸಂಭಾವ್ಯ ತಂಡ ಭಾರತ

ಶಿಖರ್ ಧವನ್, ಕೆ.ಎಲ್.ರಾಹುಲ್(ವಿಕೆಟ್ ಕೀಪರ್), ವಿರಾಟ್ ಕೊಹ್ಲಿ(ನಾಯಕ), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ದೀಪಕ್ ಚಹರ್ / ವಾಶಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಹಲ್.

ಸಂಭಾವ್ಯ ತಂಡ ಆಸ್ಟ್ರೇಲಿಯಾ

ಸಂಭಾವ್ಯ ತಂಡ ಆಸ್ಟ್ರೇಲಿಯಾ

ಆರೋನ್ ಫಿಂಚ್(ನಾಯಕ), ಮ್ಯಾಥ್ಯೂ ವೇಡ್, ಕ್ಯಾಮೆರಾನ್ ಗ್ರೀನ್, ಸ್ಟೀವ್ ಸ್ಮಿತ್, ಮೊಯಿಸಸ್ ಹೆನ್ರಿಕ್ಸ್, ಗ್ಲೆನ್ ಮ್ಯಾಕ್ಸ್ ವೆಲ್, ಆಷ್ಟನ್ ಅಗರ್, ಅಲೆಕ್ಸ್ ಕ್ಯಾರಿ(ವಿಕೆಟ್ ಕೀಪರ್), ಆಡಮ್ ಜಂಪಾ, ಡೇನಿಯಲ್ ಸ್ಯಾಮ್ಸ್, ಸೀನ್ ಅಬಾಟ್

Story first published: Thursday, December 3, 2020, 16:02 [IST]
Other articles published on Dec 3, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+