ಭಾರತ vs ಆಸ್ಟ್ರೇಲಿಯಾ: ವೇಳಾಪಟ್ಟಿ, ತಂಡಗಳು, ಸಂಪೂರ್ಣ ಮಾಹಿತಿ

ಸಿಡ್ನಿ: ಬದ್ಧ ಎದುರಾಳಿ ತಂಡಗಳು ಎನಿಸಿಕೊಂಡಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಬಹು ನಿರೀಕ್ಷಿತ ಪ್ರವಾಸ ಸರಣಿಗಳು ನವೆಂಬರ್ 27ರಿಂದ ಆರಂಭಗೊಳ್ಳಲಿದೆ. ಸರಣಿಗೆ ಸಂಬಂಧಿಸಿ ಸಂಪೂರ್ಣ ವೇಳಾಪಟ್ಟಿ, ಎರಡೂ ದೇಶಗಳ ತಂಡಗಳು ಪ್ರಕಟಗೊಂಡಿವೆ. ಸುಮಾರು 2 ತಿಂಗಳ ಕಾಲ ನಡೆಯುವ ಈ ಪ್ರವಾಸ ಸರಣಿಯು 3 ಏಕದಿನ, 3 ಟಿ20ಐ ಮತ್ತು 4 ಟೆಸ್ಟ್ ಪಂದ್ಯಗಳನ್ನು ಒಳಗೊಂಡಿರಲಿದೆ. ಟೆಸ್ಟ್ ಸರಣಿಯಲ್ಲಿ ಒಂದು ಡೇ-ನೈಟ್ ಟೆಸ್ಟ್ ಕೂಡ ಸೇರಿರಲಿದೆ.
ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿರುವ ಟೀಮ್ ಇಂಡಿಯಾ ಅಲ್ಲಿ ಅಭ್ಯಾಸ ನಡೆಸುತ್ತಿದೆ. ಭಾರತದ ಏಕದಿನ, ಟಿ20ಐ ಮತ್ತು ಟೆಸ್ಟ್ ಮೂರೂ ತಂಡಗಳಿಗೂ ವಿರಾಟ್ ಕೊಹ್ಲಿ ನಾಯಕರಾಗಿರಲಿದ್ದಾರೆ. ಟೆಸ್ಟ್ ಸರಣಿಯ ಆರಂಭದಲ್ಲಿ ನಡೆಯುವ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಆಡಿದ ಬಳಿಕ ಕೊಹ್ಲಿ ಭಾರತಕ್ಕೆ ವಾಪಸ್ಸಾಗಲಿದ್ದಾರೆ. ಜನವರಿಯಲ್ಲಿ ಕೊಹ್ಲಿ ತಂದೆಯಾಗುವ ನಿರೀಕ್ಷೆಯಿದೆ.
ಭಾರತ vs ಆಸ್ಟ್ರೇಲಿಯಾ ಸರಣಿಗೆ ಸಂಬಂಧಿಸಿ, ವೇಳಾಪಟ್ಟಿ, ಸಮಯ, ಎರಡೂ ದೇಶಗಳ ತಂಡಗಳು ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತ ಏಕದಿನ ತಂಡ
ವಿರಾಟ್ ಕೊಹ್ಲಿ (ಕ್ಯಾಪ್ಟನ್), ಶಿಖರ್ ಧವನ್, ಶುಬ್ಮನ್ ಗಿಲ್, ಕೆ.ಎಲ್. ರಾಹುಲ್ (ಉಪನಾಯಕ ಮತ್ತು ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಮಾಯಾಂಕ್ ಅಗರ್ವಾಲ್, ರವೀಂದ್ರ ಜಡೇಜಾ, ಯುಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್. ಶಮಿ, ನವದೀಪ್ ಸೈನಿ, ಶಾರ್ದೂಲ್ ಠಾಕೂರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್),ಟಿ. ನಟರಾಜನ್.
ಆಸ್ಟ್ರೇಲಿಯಾ ಏಕದಿನ ತಂಡ
ಆ್ಯರನ್ ಫಿಂಚ್ (ಕ್ಯಾಪ್ಟನ್), ಸೀನ್ ಅಬಾಟ್, ಆ್ಯಷ್ಟನ್ ಅಗರ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮ್ಮಿನ್ಸ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಝಲ್ವುಡ್, ಮೊಯಿಸಸ್ ಹೆನ್ರಿಕ್ಸ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಗ್ಲೆನ್ ಮ್ಯಾಕ್ಸ್‌ವೆಲ್, ಡೇನಿಯಲ್ ಸ್ಯಾಮ್ಸ್, ಕೇನ್ ರಿಚರ್ಡ್‌ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋನಿಸ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಡೇವಿಡ್ ವಾರ್ನರ್, ಆ್ಯಡಮ್ ಜಂಪಾ.
ಏಕದಿನ ವೇಳಾಪಟ್ಟಿ
* 1ನೇ ಏಕದಿನ: ಎಸ್‌ಸಿಜಿ, ಸಿಡ್ನಿ | ನವೆಂಬರ್ 27 | 9:10 AM IST
* 2ನೇ ಏಕದಿನ: ಎಸ್‌ಸಿಜಿ, ಸಿಡ್ನಿ | ನವೆಂಬರ್ 29 | 9:10 AM IST
* 3ನೇ ಏಕದಿನ: ಮನುಕಾ ಓವಲ್ | ಕ್ಯಾನ್ಬೆರಾ, ಡಿಸೆಂಬರ್ 2 | 9:10 AM IST

ಭಾರತ ಟಿ20 ತಂಡ
ವಿರಾಟ್ ಕೊಹ್ಲಿ (ಕ್ಯಾಪ್ಟನ್), ಶಿಖರ್ ಧವನ್, ಮಯಾಂಕ್ ಅಗರ್ವಾಲ್, ಕೆ.ಎಲ್. ರಾಹುಲ್ (ಉಪನಾಯಕ ಮತ್ತು ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ದೀಪಕ್ ಚಹಾರ್, ನವದೀಪ್ ಸೈನಿ , ಟಿ ನಟರಾಜನ್.
ಆಸ್ಟ್ರೇಲಿಯಾ ಟಿ20ಐ ತಂಡ
ಆ್ಯರನ್ ಫಿಂಚ್ (ಕ್ಯಾಪ್ಟನ್), ಸೀನ್ ಅಬಾಟ್, ಆಷ್ಟನ್ ಅಗರ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮ್ಮಿನ್ಸ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಝಲ್ವುಡ್, ಮೊಯಿಸಸ್ ಹೆನ್ರಿಕ್ಸ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಗ್ಲೆನ್ ಮ್ಯಾಕ್ಸ್‌ವೆಲ್, ಡೇನಿಯಲ್ ಸ್ಯಾಮ್ಸ್, ಕೇನ್ ರಿಚರ್ಡ್‌ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋನಿಸ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಡೇವಿಡ್ ವಾರ್ನರ್, ಆಡಮ್ ಜಂಪಾ.
ಟಿ20ಐ ವೇಳಾಪಟ್ಟಿ
* 1ನೇ ಟಿ20ಐ: ಮನುಕಾ ಓವಲ್ | ಕ್ಯಾನ್ಬೆರಾ, ಡಿಸೆಂಬರ್ 4 | 1:40 PM IST
* 2ನೇ ಟಿ20ಐ: ಎಸ್‌ಸಿಜಿ, ಸಿಡ್ನಿ | ಡಿಸೆಂಬರ್ 6 | 1:40 PM IST
* 3ನೇ ಟಿ20ಐ: ಎಸ್‌ಸಿಜಿ, ಸಿಡ್ನಿ | ಡಿಸೆಂಬರ್ 8 | 1:40 PM IST

ಭಾರತ ಟೆಸ್ಟ್ ತಂಡ
ವಿರಾಟ್ ಕೊಹ್ಲಿ (ಕ್ಯಾಪ್ಟನ್), ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ಪೃಥ್ವಿ ಶಾ, ಕೆ.ಎಲ್. ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ಹನುಮ ವಿಹಾರಿ, ಶುಬ್ಮನ್ ಗಿಲ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್. ಶಮಿ, ಉಮೇಶ್ ಯಾದವ್, ನವದೀಪ್ ಸೈನಿ, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಆರ್.ಅಶ್ವಿನ್, ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ ಟೆಸ್ಟ್ ತಂಡ
ಟಿಮ್ ಪೈನ್ (ಕ್ಯಾಪ್ಟನ್, ವಿಕೆಟ್ ಕೀಪರ್), ಸೀನ್ ಅಬಾಟ್, ಜೋ ಬರ್ನ್ಸ್, ಪ್ಯಾಟ್ ಕಮ್ಮಿನ್ಸ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಝಲ್ವುಡ್, ಟ್ರಾವಿಸ್ ಹೆಡ್, ಮಾರ್ನಸ್ ಲ್ಯಾಬುಸ್ಚಾಗ್ನೆ, ನಾಥನ್ ಲಿಯಾನ್, ಮೈಕೆಲ್ ನೇಸರ್, ಜೇಮ್ಸ್ ಪ್ಯಾಟಿನ್ಸನ್, ವಿಲ್ ಪುಕೊವ್ಸ್ಕಿ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್.
ಟೆಸ್ಟ್ ವೇಳಾಪಟ್ಟಿ
* 1ನೇ ಟೆಸ್ಟ್: ಅಡಿಲೇಡ್ ಓವಲ್, ಅಡಿಲೇಡ್ | ಡಿಸೆಂಬರ್ 17 - ಡಿಸೆಂಬರ್ 21 | 9:30 AM IST
* 2ನೇ ಟೆಸ್ಟ್: ಎಂಸಿಜಿ, ಮೆಲ್ಬೋರ್ನ್ | ಡಿಸೆಂಬರ್ 26 - ಡಿಸೆಂಬರ್ 30 | 5:00 AM IST
* 3ನೇ ಟೆಸ್ಟ್: ಎಸ್‌ಸಿಜಿ, ಸಿಡ್ನಿ | ಜನವರಿ 7 - ಜನವರಿ 11 | 5:00 AM IST
* 4ನೇ ಟೆಸ್ಟ್: ಗಬ್ಬಾ, ಬ್ರಿಸ್ಬೇನ್ | ಜನವರಿ 15 - ಜನವರಿ 19 | 5:30 AM IST
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications