ಬಾಕ್ಸಿಂಗ್ ಡೇ ಟೆಸ್ಟ್: ಪಂದ್ಯದ ಆರಂಭ ಹಾಗೂ ನೇರಪ್ರಸಾರ ಮಾಹಿತಿ

ಆಸ್ಟ್ರೇಲಿಯಾ ಹಾಗೂ ಟೀಮ್ ಇಂಡಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 26ರಂದು ಶನಿವಾರ ಆರಂಭವಾಗಲಿದೆ. ಬಾಕ್ಸಿಂಗ್ ಡೇ ಪಂದ್ಯವಾಗಿರುವ ಈ ಟೆಸ್ಟ್ ಭಾರತದ ಪಾಲಿಗೆ ಸಾಕಷ್ಟು ಮೂಖ್ಯವಾಗಿದೆ. ಮೊದಲ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋಲು ಕಂಡಿರುವುದು ತಂಡಕ್ಕೆ ಹಿನ್ನೆಡೆಯಾಗಿದೆ. ಮೆಲ್ಬರ್ನ ಅಂಗಳದಲ್ಲಿ ಟೀಮ್ ಇಮಡಿಯಾ ಆಟಗಾರರು ಯಾವ ರೀತಿಯ ಫಲಿತಾಂಶ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಬಾಕ್ಸಿಂಗ್ ಡೇ ಟೆಸ್ಟ್‌ಗೆ ಮೆಲ್ಬರ್ನ್ ಅಂಗಳ ವೇದಿಕೆಯಾಗಿದೆ. 2018/19ರ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಇದೇ ಅಂಗಳದಲ್ಲಿ 137 ರನ್‌ಗಳ ಅಂತರದ ಗೆಲುವನ್ನು ಸಾಧಿಸಿತ್ತು. ಇದೀಗ ಮತ್ತೆ ಈ ಅಂಗಳ ತನ್ನ ಪಾಲಿಗೆ ಅದೃಷ್ಟವನ್ನು ನೀಡಲಿದೆಯೇ ಎಂಬುದನ್ನು ನಿರೀಕ್ಷಿಸಲಾಗುತ್ತಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಈ ಪಂದ್ಯ ಭಾರತದಲ್ಲಿ ಮುಂಜಾನೆ 5 ಗಂಟೆಯಿಂದ ಆರಂಭವಾಗಲಿದೆ. ಈ ಪಂದ್ಯ ಭಾರತದಲ್ಲಿ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಲಭ್ಯವಿದೆ. ಸೋನಿ ಲೈವ್‌ನ ಚಂದಾದಾರರಾಗಿದ್ದರೆ ಈ ಮೂಲಕವೂ ವೀಕ್ಷಕರು ಪಂದ್ಯವನ್ನು ವೀಕ್ಷಿಸಲು ಅವಕಾಶವಿದೆ.
ಟೀಮ್ ಇಂಡಿಯಾದ ನಾಯಕತ್ವವನ್ನು ರಹಾನೆ ವಹಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಅಲಭ್ಯತೆ ತಂಡಕ್ಕೆ ಬಹುವಾಗಿ ಕಾಡಲಿದೆ. ಅನುಭವಿ ವೇಗಿ ಮೊಹಮ್ಮದ್ ಶಮಿ ಕೂಡ ಟೂರ್ನಿಯಿಂದ ಹೊರಬಿದ್ದಿದ್ದು ಯುವ ವೇಗಿ ಸಿರಾಜ್ ಆಡುವ ಬಳಗದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ಇಬ್ಬರು ಆಟಗಾರರು ಮೊದಲ ಬಾರಿಗೆ ಟೆಸ್ಟ್ ಕ್ಯಾಪ್ ಧರಿಸಲಿದ್ದಾರೆ. ಶುಭ್ಮನ್ ಗಿಲ್ ಹಾಗೂ ಮೊಹಮ್ಮದ್ ಸಿರಾಜ್ ತಂಡದಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಆದರೆ ಕೆಎಲ್ ರಾಹುಲ್‌ಗೆ ಎರಡನೇ ಟೆಸ್ಟ್ ಪಂದ್ಯದ ಆಡುವ ಬಳಗದಲ್ಲೂ ಸ್ಥಾನ ದೊರೆತಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications