For Quick Alerts
ALLOW NOTIFICATIONS  
For Daily Alerts
 

ಭಾರತ-ಆಸ್ಟ್ರೇಲಿಯಾ: ಬರಿಗಾಲ ವೃತ್ತ ರಚಿಸಲಿದ್ದಾರೆ ಆಸೀಸ್ ಆಟಗಾರರು

india vs australia 2020: Australia cricketers to make barefoot anti-racism gesture

ಸಿಡ್ನಿ: ಮುಂಬರಲಿರುವ ಭಾರತ vs ಆಸ್ಟ್ರೇಲಿಯಾ ಸರಣಿಯ ವೇಳೆ ಆಸ್ಟ್ರೇಲಿಯಾ ಪುರುಷರ ತಂಡ ಬರಿಗಾಲ ವೃತ್ತ ರಚಿಸಲಿದೆ. ವರ್ಣಬೇಧ ನೀತಿ ವಿರೋಧಿಸಿ ಮತ್ತು ಮೂಲನಿವಾಸಿ ಸಂಸ್ಕೃತಿ ಬೆಂಬಲಿಸಿ ಆಸ್ಟ್ರೇಲಿಯಾ ಆಟಗಾರರು ಹೀಗೆ ಬರಿಗಾಲ ವೃತ್ತ ರಚಿಸಲಿದ್ದಾರೆ ಎಂದು ಆಸ್ಟ್ರೇಲಿಯಾದ ಉಪ ನಾಯಕ ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ವರ್ಣಬೇಧ ನೀತಿ ವಿರೋಧಿಸಿ ಮೈದಾನದಲ್ಲಿ ಮೊಣಕಾಲೂರಲಿಲ್ಲ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕತೆ ಮೈಕಲ್ ಹೋಲ್ಡಿಂಗ್ ಟೀಕಿಸಿದ ಬಳಿಕ ತಂಡದ ಆಟಗಾರರ ಜೊತೆ ಚರ್ಚಿಸಿ ಈ ನಿರ್ಧಾರ ತಾಳಿರುವುದಾಗಿ ಕಮಿನ್ಸ್ ತಿಳಿಸಿದ್ದಾರೆ.

ಸರಣಿ ಆರಂಭಕ್ಕೂ ಮುನ್ನ ತಂಡದ ಆಟಗಾರರು ಮೈದಾನದಲ್ಲಿ ಬರಿಗಾಲಿನ ವೃತ್ತ ರಚಿಸುವುದನ್ನು ಮೊದಲು ಪರಿಚಯಿಸಿದ್ದು ಈ ವರ್ಷ ಆಸ್ಟ್ರೇಲಿಯಾ ಮಹಿಳಾ ತಂಡ. ಆಸ್ಟ್ರೇಲಿಯಾ ಆಲ್ ರೌಂಡರ್ ಆಶ್ಲೀ ಗಾರ್ಡ್ನರ್ ಕೋರಿಕೆಯ ಮೇರೆಗೆ ಇದನ್ನು ಪಾಲಿಸಲಾಯ್ತು. ಗಾರ್ಡ್ನರ್ ಮೂಲನಿವಾಸಿ ಪರಂಪರೆಯವರಾಗಿದ್ದರಿಂದ ಬರಿಗಾಲ ವೃತ್ತಕ್ಕೆ ಕೋರಿಕೊಂಡಿದ್ದರು.

ನವೆಂಬರ್ 27ರಿಂದ ಆರಂಭವಾಗಲಿರುವ ಭಾರತ ವಿರುದ್ಧದ ಸರಣಿಯಿಂದ ಬರಿಗಾಲ ವೃತ್ತ ಚಳುವಳಿ ನಡೆಯಲಿದೆ. ಪ್ರತೀ ಸರಣಿ ಆರಂಭಕ್ಕೆ ಮುನ್ನ ಇದನ್ನು ಪಾಲಿಸಲಾಗುತ್ತದೆ ಎಂದು ಪ್ಯಾಟ್ ಕಮಿನ್ಸ್ ಮಾಹಿತಿ ನೀಡಿದ್ದಾರೆ.

Story first published: Friday, November 20, 2020, 14:58 [IST]
Other articles published on Nov 20, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+