Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಆಸೀಸ್: ಅಡಿಲೇಡ್‌ನಲ್ಲಿ ಕೊರೊನಾ ಭೀತಿ, ಪೈನ್ ಕ್ವಾರಂಟೈನ್

India vs Australia 2020: Covid-19 in Adelaide, Tim Paine in self-isolation

ಸಿಡ್ನಿ: ಕೋವಿಡ್-19 ಭೀತಿ ಅಡಿಲೇಡ್‌ನಲ್ಲಿ ಹೆಚ್ಚಾಗಿದೆ. ಹೀಗಾಗಿ ಆಸ್ಟ್ರೇಲಿಯಾ ಟೆಸ್ಟ್ ನಾಯಕ ಟಿಮ್ ಪೈನ್ ಸೇರಿದಂತೆ ಆಟಗಾರರು ಸೆಲ್ಫ್ ಐಸೊಲೇಶನ್‌ಗೆ ಹೋಗಿದ್ದಾರೆ. ಆದರೆ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ ಹಿಂದಿನ ವೇಳಾಪಟ್ಟಿಯಂತೆ ನಡೆಯಲಿದೆ ಎಂದು ತಿಳಿದುಬಂದಿದೆ.

ಪಶ್ಚಿಮ ಆಸ್ಟ್ರೇಲಿಯಾ, ಟ್ಯಾಸ್ಮೆನಿಯಾ ಮತ್ತು ಉತ್ತರ ಭಾಗಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳು ಗಣನೀಯ ಮಟ್ಟದಲ್ಲಿ ಏರಿಕೆಯಾಗಿವೆ. ಹೀಗಾಗಿ ಅಡಿಲೇಡ್‌ನಿಂದ ಬರುವ ಎಲ್ಲಾ ಆಟಗಾರರಿಗೂ ಹೋಟೆಲ್‌ನಲ್ಲಿ 14 ದಿನಗಳ ಕ್ವಾರಂಟೈನ್‌ಗೆ ಸೂಚಿಸಲಾಗಿದೆ.

ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ ನವೆಂಬರ್ 17ರಿಂದ ಆರಂಭಗೊಳ್ಳಲಿವೆ. ಮೂರು ಪಂದ್ಯಗಳ ಏಕದಿನ ಸರಣಿ, ಮೂರು ಪಂದ್ಯಗಳ ಟಿ20 ಸರಣಿ ಮತ್ತು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗಳು ನಡೆಯಲಿವೆ. ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 17ರಂದು ಆರಂಭಗೊಳ್ಳಲಿದ್ದು ಜನವರಿ 19ಕ್ಕೆ ಟೆಸ್ಟ್ ಸರಣಿ ಮುಕ್ತಾಯಗೊಳ್ಳಲಿದೆ.

ಬಹು ನಿರೀಕ್ಷಿತ ಸರಣಿಗಾಗಿ ಆಸ್ಟ್ರೇಲಿಯಾ ತಲುಪಿರುವ ಟೀಮ್ ಇಂಡಿಯಾ ಕೂಡ ಸದ್ಯ ಸಿಡ್ನಿಯಲ್ಲಿ ಕ್ವಾರಂಟೈನ್ ಪಾಲಿಸುತ್ತಿದೆ. ಭಾರತ ತಂಡದ ಎಲ್ಲಾ ಆಟಗಾರರು, ಸಿಬ್ಬಂದಿಯ ಕೊರೊನಾ ಪರೀಕ್ಷೆ ನೆಗೆಟಿವ್ ಬಂದಿದ್ದು, ಸರಣಿಗೆ ಸಂಬಂಧಿಸಿ ಕೊಹ್ಲಿ ಪಡೆ ಅಭ್ಯಾಸ ಆರಂಭಿಸಿದೆ.

Story first published: Friday, November 20, 2020, 14:59 [IST]
Other articles published on Nov 20, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+