ಕ್ವಾರಂಟೈನ್ ವೇಳೆಯ ಫೋಟೋ ಹಂಚಿಕೊಂಡ ವಿರಾಟ್ ಕೊಹ್ಲಿ

ಸಿಡ್ನಿ: ಮುಂಬರಲಿರುವ ದ್ವಿಪಕ್ಷೀಯ ಸರಣಿಗಾಗಿ ವಿರಾಟ್ ಕೊಹ್ಲಿ ಮತ್ತು ಬಳಗ ಆಸ್ಟ್ರೇಲಿಯಾದಲ್ಲಿದೆ. ಎಲ್ಲಾ ಆಟಗಾರರೂ ಸದ್ಯ 14 ದಿನಗಳ ಕಡ್ಡಾಯ ಕ್ವಾರಂಟೈನ್ ಪಾಲಿಸುತ್ತಿದ್ದಾರೆ. ಭಾರತ-ಆಸ್ಟ್ರೇಲಿಯಾ ಬಹುನಿರೀಕ್ಷಿತ ಸರಣಿ ನವೆಂಬರ್ 27ರಿಂದ ಆರಂಭಗೊಳ್ಳಲಿದೆ.
ಕೊರೊನಾ ಶುರುವಾದ ಬಳಿಕ ಕ್ರೀಡಾಕೂಟಗಳ ಆಯೋಜನೆ, ಕ್ರೀಡಾಪಟುಗಳ ದಿನಚರಿ ಬದಲಾಗಿದೆ. ಈಗ ಪ್ರತೀ ಕ್ರೀಡಾಕೂಟಗಳು ಆರಂಭಕ್ಕೂ ಮುನ್ನ ಆಟಗಾರರಿಗೆ ಕ್ವಾರಂಟೈನ್ ಪಾಲಿಸಬೇಕಿರುತ್ತದೆ. ಪ್ರತ್ಯೇಕವಾಗಿದ್ದು ಐಸೊಲೇಶನ್ ಪಾಲಿಸೋದು ಸುಲಭವಿಲ್ಲ.
ಯಾವಾಗಲೂ ಸ್ನೇಹಿತರ ಜೊತೆಗಿಟ್ಟು ಖುಷಿಯ ಕ್ಷಣಗಳನ್ನು ಕಳೆಯುವ ಕ್ರೀಡಾಪಟುಗಳಿಗೆ ಒಬ್ಬರೇ ದೂರವಿದ್ದು ಕ್ವಾರಂಟೈನ್ ಪಾಲಿಸೋದು ಸವಾಲಿನ ಸಂಗತಿ. ಹೀಗಾಗಿ ಕ್ರೀಡಾಪಟುಗಳಿಗೆ ಕ್ವಾರಂಟೈನ್ ಅನ್ನೋದು ಒಂದು ವಿಭಿನ್ನ ಅನುಭವ. ಭಾರತದ ನಾಯಕ ಕೊಹ್ಲಿ ತನ್ನ ಕ್ವಾರಂಟೈನ್ ದಿನಗಳ ಬಗ್ಗೆ ಟ್ವೀಟ್ ಮಾಡಿದ್ದಾರೆ.
'ಕ್ವಾರಂಟೈನ್ ದಿನಚರಿಗಳು. ಐರನ್ ಮಾಡ ಟಿ ಶರ್ಟ್, ಆರಾಮದಾಯಕ ಆಸನ, ವೀಕ್ಷಿಸಲು ಒಳ್ಳೆಯ ಸೀರೀಸ್' ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಭಾರತ-ಆಸ್ಟ್ರೇಲಿಯಾ ಸರಣಿಯು 3 ಏಕದಿನ ಪಂದ್ಯಗಳು, 3 ಟಿ20ಐ ಪಂದ್ಯಗಳು ಮತ್ತು 4 ಟೆಸ್ಟ್ ಪಂದ್ಯಗಳನ್ನು ಒಳಗೊಂಡಿರಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications