For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಆಕರ್ಷಕ ಶತಕ, ಆಸೀಸ್ ವಿರುದ್ಧ ಭಾರತಕ್ಕೆ 8 ರನ್ ರೋಚಕ ಜಯ

India vs Australia, 2nd ODI live cricket score

ನಾಗ್ಪುರ, ಮಾರ್ಚ್ 5: ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ (ವಿಸಿಎ) ಸ್ಟೇಡಿಯಂನಲ್ಲಿ ಇಂದು (ಮಾರ್ಚ್ 5) ನಡೆದ ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ 8 ರನ್ ರೋಚಕ ಜಯ ಗಳಿಸಿದೆ. ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾಕ್ಕೆ ಲಭಿಸಿದ 500ನೇ ಗೆಲುವಿದು. ಈ ಜಯದೊಂದಿಗೆ ಕೊಹ್ಲಿ ಬಳಗ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-0ಯ ಮುನ್ನಡೆ ಸಾಧಿಸಿದೆ.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
45586

ನಾಯಕ ವಿರಾಟ್ ಕೊಹ್ಲಿ ಶತಕ ಮತ್ತು ಭಾರತದ ಬೌಲರ್‌ಗಳ ಮಾರಕ ಬೌಲಿಂಗ್ ತಂಡದ ಗೆಲುವಿನಲ್ಲಿ ನೆರವು ನೀಡಿತು. ಭಾರತ ನೀಡಿದ್ದ 251 ರನ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 49.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 242 ಪೇರಿಸುವುದರೊಂದಿಗೆ ಶರಣಾಯಿತು. ಆಸೀಸ್ ಪರ ಮಾರ್ಕಸ್ ಸ್ಟೋಯ್ನಿಸ್ ಅರ್ಧಶತಕದ (52) ಹೋರಾಟ ವ್ಯರ್ಥಗೊಂಡಿತು. ಪಂದ್ಯಶ್ರೇಷ್ಠ ಪ್ರಶಸ್ತಿ ಕೊಹ್ಲಿ ಪಡೆದುಕೊಂಡರು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 48.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 250 ರನ್ ಪೇರಿಸಿತು. ಇನ್ನಿಂಗ್ಸ್ ಆರಂಭದಲ್ಲಿ ರೋಹಿತ್ ಶರ್ಮಾ (0), ಶಿಖರ್ ಧವನ್ (21) ವಿಕೆಟ್ ಬೇಗನೆ ಪತನವಾದಾಗ ಭಾರತ ಆಘಾತ ಅನುಭವಿಸಿತು. ಅನಂತರ ಬಂದ ಅಂಬಾಟಿ ರಾಯುಡು (18), ವಿಜಯ್ ಶಂಕರ್ (46), ಕೇದಾರ್ ಜಾಧವ್ (11), ಎಂಎಸ್ ಧೋನಿ (0) ಕೂಡ ವಿಕೆಟ್ ಕಾವಲು ಕಾಯಲಿಲ್ಲ.

ಆದರೆ ವಿರಾಟ್ ಕೊಹ್ಲಿ ಬಾರಿಸಿದ 40ನೇ ಅಂತಾರಾಷ್ಟ್ರೀಯ ಏಕದಿನ ಶತಕದ (116 ರನ್) ನೆರವಿನಿಂದ ಭಾರತ ತಂಡ ಆಸ್ಟ್ರೇಲಿಯಾಕ್ಕೆ ಉತ್ತಮ ಗುರಿ ನೀಡುವಲ್ಲಿ ಯಶಸ್ವಿಯಾಯಿತು. ಭಾರತದ ಇನ್ನಿಂಗ್ಸ್‌ ವೇಳೆ ಅಸೀಸ್‌ನ ಪ್ಯಾಟ್ ಕಮಿನ್ಸ್ 29 ರನ್ನಿಗೆ 4, ಆದಂ ಜಂಪಾ 2 ವಿಕೆಟ್ ಕೆಡವಿ ಬೌಲಿಂಗ್‌ನಲ್ಲಿ ಗಮನ ಸೆಳೆದರು.

ಗುರಿ ಬೆನ್ನಟ್ಟಿದ ಆಸೀಸ್‌ಗೆ ಉತ್ತಮ ಆರಂಭ ಲಭಿಸಿತು. ಆಸ್ಟ್ರೇಲಿಯಾ ಮೊದಲ ವಿಕೆಟ್ ಮುರಿದಿದ್ದು 14.3ನೇ ಓವರ್‌ನಲ್ಲಿ. ಆಗ ಆಸೀಸ್ ಖಾತೆಯಲ್ಲಿ 83 ರನ್ ಇತ್ತು. ಪಂದ್ಯ ಮುಂದುವರಿದಂತೆ ಜಿದ್ದಾಜಿದ್ದಿ ಹಂತಕ್ಕೆ ಬಂತು. ಆದರೆ ಭಾರತದ ಬೌಲರ್‌ಗಳು ಮಾರಕ ದಾಳಿ ಆರಂಭಿಸಿ ಗೆಲುವು ಒಲಿಸಿಕೊಂಡರು. ಜಸ್‌ಪ್ರೀತ್ ಬೂಮ್ರಾ, ವಿಜಯ್ ಶಂಕರ್ ತಲಾ 2, ಕುಲದೀಪ್ ಯಾದವ್ 3 ವಿಕೆಟ್ ಕೆಡವಿ ಎದುರಾಳಿಯನ್ನು ಕಾಡಿದರು.

ಭಾರತ ತಂಡ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ಸಿ), ಅಂಬಾಟಿ ರಾಯುಡು, ಎಂಎಸ್ ಧೋನಿ (ವಿಕೆ), ಕೇದಾರ್ ಜಾಧವ್, ವಿಜಯ್ ಶಂಕರ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ.

ಆಸ್ಟ್ರೇಲಿಯಾ ತಂಡ: ಉಸ್ಮಾನ್ ಖವಾಜಾ, ಆರನ್ ಫಿಂಚ್ (ಸಿ), ಮಾರ್ಕಸ್ ಸ್ಟೊಯಿನಿಸ್, ಪೀಟರ್ ಹ್ಯಾಂಡ್ಸ್ಕಾಂಬ್, ಗ್ಲೆನ್ ಮ್ಯಾಕ್ಸ್‌ವೆಲ್, ಆಷ್ಟನ್ ಟರ್ನರ್, ಅಲೆಕ್ಸ್ ಕ್ಯಾರಿ (ವಿಕೆ), ನಾಥನ್ ಕೌಲ್ಟರ್-ನೈಲ್, ಪ್ಯಾಟ್ ಕಮ್ಮಿನ್ಸ್, ಆಡಮ್ ಜಂಪಾ, ಜಾಸನ್ ಬೆಹೆರೆನ್ಡಾಫ್.

Story first published: Tuesday, March 5, 2019, 22:03 [IST]
Other articles published on Mar 5, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+