Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2ನೇ ಏಕದಿನ ಪಂದ್ಯ: ಯಾದವ್ ಗೆ ಹ್ಯಾಟ್ರಿಕ್, ಆಸೀಸ್ ಗೆ ಮತ್ತೆ ಸೋಲು

ಕೋಲ್ಕತಾ, ಸೆ. 21: ಆಸ್ಟ್ರೇಲಿಯಾ ವಿರುದ್ಧದ ಐದು ಏಕದಿನ ಪಂದ್ಯಗಳ ಸರಣಿಯ ಎರಡನೇ ಪಂದ್ಯವನ್ನು ಕರಾರುವಾಕ್ ಬೌಲಿಂಗ್ ಮೂಲಕ ಟೀಂ ಇಂಡಿಯಾ ಗೆದ್ದುಕೊಂಡಿದೆ. ಈ ಮೂಲಕ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-0ರಲ್ಲಿ ಭಾರತ ಮುನ್ನಡೆ ಪಡೆದುಕೊಂಡಿದೆ.

ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಕೊಹ್ಲಿ, ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 50 ಓವರ್ ಗಳಲ್ಲಿ 252 ಸ್ಕೋರ್ ಮಾಡಿ ಆಲೌಟ್ ಆಗಿತ್ತು. ರನ್ ಚೇಸ್ ಮಾಡಿದ ಆಸ್ಟ್ರೇಲಿಯಾ 43.1 ಓವರ್ ಗಳಲ್ಲಿ 202ಸ್ಕೋರಿಗೆ ಆಲೌಟ್ ಆಗಿ ಭಾರತಕ್ಕೆ 50ರನ್ ಗಳ ಜಯದ ಕೊಡುಗೆ ನೀಡಿತು. ಆಸ್ಟ್ರೇಲಿಯಾ ಪರ ಸ್ಮಿತ್ 59, ಸ್ಟೋಯಿನಿಸ್ ಅಜೇಯ 62ರನ್ ಗಳಿಸಿ ಪ್ರತಿರೋಧ ಒಡ್ಡಿದರು.

ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರು ಏಕದಿನ ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ಪಡೆದ ಭಾರತದ ಮೊದಲ ಸ್ಪಿನ್ನರ್ ಎನಿಸಿಕೊಂಡರು.

ವಿರಾಟ್ ಕೊಹ್ಲಿ 92 ರನ್ ಹಾಗೂ ಅಜಿಂಕ್ಯ ರಹಾನೆ 55ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಲು ನೆರವಾದರು. ಕೇನ್ ರಿಚರ್ಡ್ಸನ್, ಕೌಲ್ಟರ್ ನೈಲ್ ತಲಾ 3 ವಿಕೆಟ್ ಗಳಿಸಿದರು.

ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಗೆದ್ದಿರುವ ಭಾರತ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ಮಳೆ ಭೀತಿಯ ನಡುವೆ ಪಂದ್ಯಕ್ಕೆ ಚಾಲನೆ ಸಿಕ್ಕಿದ್ದು, ಮತ್ತೊಮ್ಮೆ ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮ ಕಳಪೆ ಮೊತ್ತಕ್ಕೆ ಔಟಾಗಿದ್ದಾರೆ. ಪಂದ್ಯದ 6ನೇ ಓವರ್ ನಲ್ಲಿ ತಂಡದ ಮೊತ್ತ 19ರನ್ ಆಗಿದ್ದಾಗ ರೋಹಿತ್ ಶರ್ಮ(7 ರನ್ ) ಅವರು ಕೌಲ್ಟರ್‌ ನೈಲ್‌ ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

ತಂಡದಲ್ಲಿ ಬದಲಾವಣೆ: ಚೆನ್ನೈ ಪಂದ್ಯದಲ್ಲಿ ಆಡಿದ ಆಟಗಾರರನ್ನೇ ಎರಡನೇ ಪಂದ್ಯಕ್ಕೂ ವಿರಾಟ್‌ ಕೊಹ್ಲಿ ಅವರು ಉಳಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ತಂಡದಲ್ಲಿ ಆಲ್‌ ರೌಂಡರ್‌ ಜೇಮ್ಸ್‌ ಫಾಲ್ಕನರ್‌ ಬದಲಿಗೆ ವೇಗಿ ಕೇನ್‌ ರಿಚರ್ಡ್‌ಸನ್‌ ಹಾಗೂ ಸ್ಪಿನ್ನರ್‌ ಆಡಂ ಝಂಪಾ ಸ್ಥಾನಕ್ಕೆ ಇನ್ನೋರ್ವ ಸ್ಪಿನ್ನರ್‌ ಆಸ್ಟನ್ ಅಗರ್‌ ಅವರು ತಂಡ ಸೇರಿಕೊಂಡಿದ್ದಾರೆ. ಕಣಕ್ಕಿಳಿದಿರುವ ತಂಡಗಳು, ಇನ್ನಿತರ ವಿವರ ಮುಂದಿದೆ..

ರೋಹಿತ್ ಬದಲು ರಾಹುಲ್ ಏಕಿಲ್ಲ?

ರೋಹಿತ್ ಬದಲು ರಾಹುಲ್ ಏಕಿಲ್ಲ?

ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ 44 ಎಸೆತಗಳನ್ನು ಎದುರಿಸಿ 28ರನ್ ಗಳಿಸಿದ್ದ ರೋಹಿತ್ ಈ ಪಂದ್ಯದಲ್ಲಿ 7 ರನ್ ಗಳಿಸಿ ಔಟಾಗಿದ್ದಾರೆ. ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಲು ಕೆಎಲ್ ರಾಹುಲ್ ಸಜ್ಜಾಗಿದ್ದರೂ ರೋಹಿತ್ ಹಾಗೂ ರಹಾನೆಗೆ ಮಣೆ ಹಾಕಲಾಗುತ್ತಿದೆ. ಶಿಖರ್ ಧವನ್ ಅವರು ವೈಯಕ್ತಿಕ ಕಾರಣಕ್ಕಾಗಿ ತಂಡದಿಂದ ಹೊರಗುಳಿದಿದ್ದಾರೆ.

ತಂಡಗಳು ಇಂತಿವೆ

ತಂಡಗಳು ಇಂತಿವೆ

ಭಾರತ: ರೋಹಿತ್‌ ಶರ್ಮಾ, ಅಜಿಂಕ್ಯ ರಹಾನೆ, ವಿರಾಟ್‌ ಕೊಹ್ಲಿ, ಮನೀಷ್‌ ಪಾಂಡೆ, ಕೇದಾರ್‌ ಜಾಧವ್‌, ಎಂ.ಎಸ್‌. ಧೋನಿ, ಹಾರ್ದಿಕ್‌ ಪಾಂಡ್ಯಾ, ಭುವನೇಶ್ವರ್‌ ಕುಮಾರ್‌, ಕುಲ್‌ದೀಪ್‌ ಯಾದವ್‌, ಯುಜುವೇಂದ್ರ್‌ ಚಹಲ್‌, ಜಸ್‌ಪ್ರೀತ್‌ ಬೂಮ್ರಾ.

ಆಸ್ಟ್ರೇಲಿಯಾ: ಡೆವಿಡ್‌ ವಾರ್ನರ್‌, ಹಿಲ್ಟನ್‌ ಕಾರ್ಟ್‌ರೈಟ್‌, ಸ್ಟೀವ್‌ ಸ್ಮಿತ್‌, ಟ್ರ್ಯಾವಿಸ್‌ ಹೆಡ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮ್ಯಾರ್ಕಸ್‌ ಸ್ಟೋಯಿನಿಸ್‌, ಮ್ಯಾಥ್ಯೂವ್‌ ವೇಡ್‌, ಆಶ್ಟೋನ್ ಅಗರ್‌, ಕೇನ್‌ ರಿಚರ್ಡ್‌ಸನ್‌, ಪ್ಯಾಟ್‌ ಕಮಿನ್ಸ್‌, ನಾಥನ್‌ ಕೌಲ್ಟರ್‌ ನೈಲ್‌.

ಗಂಟೆ ಬಾರಿಸಿದ ಸೆಹ್ವಾಗ್ -ಗೋಸ್ವಾಮಿ

ಕೋಲ್ಕತಾದಲ್ಲಿ ಈಡನ್ ಗಾರ್ಡನ್ ಮೈದಾನದಲ್ಲಿ ಕ್ರಿಕೆಟ್ ದಿಗ್ಗಜ ವೀರೇಂದ್ರ ಸೆಹ್ವಾಗ್ ಹಾಗೂ ಮಹಿಳಾ ಕ್ರಿಕೆಟರ್ ಜೂಲಿಯನ್ ಗೋಸ್ವಾಮಿ ಅವರು ಜಂಟಿಯಾಗಿ ಗಂಟೆ ಬಾರಿಸಿ ಕ್ರಿಕೆಟಿಗೆ ಚಾಲನೆ ನೀಡಲಾಯಿತು.

ಸ್ಮಿತ್ ಅವರ 100ನೇ ಪಂದ್ಯ

ಸ್ಮಿತ್ ಅವರ 100ನೇ ಪಂದ್ಯ

ಈ ಸ್ಥಾನಕ್ಕೇರಲು 7 ವರ್ಷಗಳು ಬೇಕಾಯಿತು, 100ನೇ ಪಂದ್ಯವನ್ನು ಕೋಲ್ಕತಾ ಈಡೆನ್ ಗಾರ್ಡನ್ ನಲ್ಲಿ ಆಡಲು ಉತ್ಸುಕರಾಗಿದ್ದಾನೆ. ಟಾಸ್ ಗೆದ್ದು ಮೊದಲು ಬ್ಯಾಟುವುದು ನಮ್ಮ ಆಯ್ಕೆಯಾಗಿತ್ತು. ಆದರೆ, ಈ ಪಂದ್ಯಕ್ಕೆ ತಕ್ಕಂತೆ ಸೂಕ್ತ ಬದಲಾವಣೆಯನ್ನು ತಂಡದಲ್ಲಿ ಮಾಡಲಾಗಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+