ಭಾರತ vs ಆಸೀಸ್: 2ನೇ ಏಕದಿನ, ಸಂಭಾವ್ಯ ತಂಡ, ಪ್ರಮುಖ ಮಾಹಿತಿ

ಸಿಡ್ನಿ: ಮೂರು ಪಂದ್ಯಗಳ ಏಕದಿನ ಸರಣಿಯ ಆರಂಭಿಕ ಪಂದ್ಯ ಸೋತಿರುವ ಟೀಮ್ ಇಂಡಿಯಾ, ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನವೆಂಬರ್ 29ರ ಭಾನುವಾರ ದ್ವಿತೀಯ ಪಂದ್ಯದ ಸವಾಲು ಸ್ವೀಕರಿಸಲಿದೆ. ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಈ ಪಂದ್ಯ ನಡೆಯಲಿದೆ. ಏಕದಿನ ಸರಣಿಯಲ್ಲಿ ಭಾರತ 1-0ಯ ಹಿನ್ನಡೆ ಅನುಭವಿಸಿರುವುದರಿಂದ ಸರಣಿ ಉಳಿಸಿಕೊಳ್ಳಬೇಕಾದರೆ ದ್ವಿತೀಯ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕು. ಭಾರತೀಯ ಕಾಲಮಾನ 9:10 AMಗೆ ಪಂದ್ಯ ಆರಂಭವಾಗಲಿದೆ.
ಆರಂಭಿಕ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗದ ಬ್ಯಾಟಿಂಗ್ ವಿಭಾಗ ಕೈ ಕೊಟ್ಟಿದ್ದು, ಕ್ಯಾಚ್‌ಗಳನ್ನು ಕೈ ಚೆಲ್ಲಿದ್ದು ಮತ್ತು ಮಿಸ್ ಫೀಲ್ಡಿಂಗ್‌ಗಳು ತಂಡದ ಸೋಲಿಗೆ ಕಾರಣವಾಗಿತ್ತು. ದ್ವಿತೀಯ ಪಂದ್ಯದಲ್ಲಿ ತಪ್ಪುಗಳನ್ನು ಭಾರತ ಸರಿ ಪಡಿಸಿಕೊಳ್ಳಬೇಕಾಗಿದೆ.
ಆಸ್ಟ್ರೇಲಿಯಾ ನಿಜಕ್ಕೂ ದ್ವಿತೀಯ ಪಂದ್ಯದಲ್ಲೂ ಗೆಲ್ಲುವ ಫೇವರಿಟ್ ತಂಡ. ಆದರೆ ಎಚ್ಚರಿಕೆಯ ಆಟ ಆಡಿದರೆ ಭಾರತವೂ ಗೆಲ್ಲಬಲ್ಲದು.

ಹವಾಮಾನ ವರದಿ
ಭಾರತ vs ಆಸ್ಟ್ರೇಲಿಯಾ ದ್ವಿತೀಯ ಏಕದಿನ ಪಂದ್ಯ ನಡೆಯುವ ಭಾನುವಾರ ಸಿಡ್ನಿಯಲ್ಲಿ 24 ಡಿಗ್ರೀ ಸೆಲ್ಶಿಯಸ್‌ನಿಂದ 37 ಡಿಗ್ರೀ ಸೆಲ್ಶಿಯಸ್ ತಾಪಮಾನ ಇರಲಿದೆ. ಹಗಲಿನಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆಯಿದ್ದು, ರಾತ್ರಿ ಹೊತ್ತು ಮಳೆ ಸುರಿಯುವ ಸಂಭವವಿದೆ.

ಪಿಚ್ ರಿಪೋರ್ಟ್
ಸಿಡ್ನಿ ಕ್ರಿಕೆಟ್ ಗ್ರೌಂಡ್ ಸಾಮಾನ್ಯವಾಗಿ ಬ್ಯಾಟ್ಸ್‌ಮನ್‌ಗಳಿಗೆ ನೆಚ್ಚಿನ ಪಿಚ್. ಆರಂಭಿಕ ಪಂದ್ಯದಲ್ಲೂ ಎರಡೂ ತಂಡಗಳು 300+ ರನ್ ಗಳಿಸಿದ್ದೇ ಇದಕ್ಕೆ ಸಾಕ್ಷಿ. ಆದರೆ ರಾತ್ರಿ ಅಥವಾ ಸಂಜೆ ವೇಳೆಗೆ ಪಿಚ್ ಕೊಂಚ ಬದಲಾಗುವ ಸಾಧ್ಯತೆಯಿದೆ. ಕ್ಯಾಪ್ಟನ್‌ಗಳು ಈ ವಿಚಾರವನ್ನು ತಲೆಯಲ್ಲಿಟ್ಟುಕೊಂಡಿರಬೇಕಾಗುತ್ತದೆ.

ಭಾರತ ಸಂಭಾವ್ಯ ತಂಡ
ಮಯಾಂಕ್ ಅಗರ್ವಾಲ್, ಶಿಖರ್ ಧವನ್, ವಿರಾಟ್ ಕೊಹ್ಲಿ (ಸಿ), ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ಡಬ್ಲ್ಯೂಕೆ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಟಿ ನಟರಾಜನ್/ನವದೀಪ್ ಸೈನಿ, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಶಮಿ, ಮತ್ತು ಜಸ್ಪ್ರೀತ್ ಬೂಮ್ರಾ.

ಆಸ್ಟ್ರೇಲಿಯಾ ಸಂಭಾವ್ಯ ತಂಡ
ಡೇವಿಡ್ ವಾರ್ನರ್, ಆ್ಯರನ್ ಫಿಂಚ್ (ಸಿ), ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಮಾರ್ಕಸ್ ಸ್ಟೋಯಿನಿಸ್/ಆಷ್ಟನ್ ಅಗರ್, ಗ್ಲೆನ್ ಮ್ಯಾಕ್ಸ್‌ವೆಲ್, ಅಲೆಕ್ಸ್ ಕ್ಯಾರಿ (ಡಬ್ಲ್ಯೂಕೆ), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಝಲ್ವುಡ್ ಮತ್ತು ಆ್ಯಡಮ್ ಜಂಪಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications