ಭಾರತ vs ಆಸ್ಟ್ರೇಲಿಯಾ 2ನೇ ಟಿ20: ಭಾರತಕ್ಕೆ 195 ರನ್‌ಗಳ ಗುರಿ ನೀಡಿದ ಆಸಿಸ್

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲಿಗೆ ಬ್ಯಾಟಿಂಗ್ ನಡೆಸಿ ಬೃಹತ್ ಮೊತ್ತವನ್ನು ಕಲೆಹಾಕಿದೆ. ಆರೋನ್ ಫಿಂಚ್ ಗೈರಲ್ಲಿ ತಂಡವನ್ನು ಮುನ್ನಡೆಸಿದ ಮ್ಯಾಥ್ಯೂ ವೇಡ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಮಾಜಿ ನಾಯಕ ಸ್ಟೀವ್ ಸ್ಮಿತ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.
ಈ ಆಟಗಾರರ ಸ್ಪೋಟಕ ಆಟದ ಪರಿಣಾಮವಾಗಿ ಆಸ್ಟ್ರೇಲಿಯಾ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 194 ರನ್ ಗಳಿಸಿದೆ. ನಾಯಕ ಮ್ಯಾಥ್ಯೂ ವೇಡ್ 32 ಎಸೆತಗಳಲ್ಲಿ 58 ರನ್ ಬಾರಿಸಿದರೆ ಸ್ಟೀವನ್ ಸ್ಮಿತ್ 46 ರನ್ ಬಾರಿಸಿದರು.
ಆಸ್ಟ್ರೇಲಿಯಾದ ಆಲ್‌ರೌಂಡರ್ ಮ್ಯಾಕ್ಸ್‌ವೆಲ್ ಕೂಡ ಸ್ಪೋಟಕವಾಗಿ ಆಡಿ 13 ಎಸೆತಗಳಲ್ಲಿ 22 ರನ್ ಬಾರಿಸಿದರು. ಮೋಯ್ಸಿಸ್ ಹೆನ್ರಿಕ್ವೀಸ್ ಕೂಡ 18 ಎಸೆತಗಳನ್ನು ಎದುರಿಸಿ 26 ರನ್ ಸಿಡಿಸಿದರು. ಅಂತಿಮವಾಗಿ ಬಂದ ಮಾರ್ಕಸ್ ಸ್ಟೋಯ್ನಿಸ್ 7 ಎಸೆತಗಳಲ್ಲಿ 16 ರನ್ ಬಾರಿಸಿದರೆ ಸ್ಯಾಮ್ಸ್ 3 ಎಸೆತಗಳನ್ನು ಎದುರಿಸಿ 8 ರನ್ ಬಾರಿಸಿ ತಂಡದ ಮೊತ್ತ ಇನ್ನೂರರ ಸನಿಹಕ್ಕೆ ತಂದು ನಿಲ್ಲಿಸುವಲ್ಲಿ ಯಶಸ್ವಿಯಾದರು.
ಭಾರತದ ಪರವಾಗಿ ಇಂದು ದೀಪಕ್ ಚಾಹರ್ ಹಾಗೂ ಯುಜುವೇಂದ್ರ ಚಾಹಲ್ ದುಬಾರಿಯಾದರು. ಚಾಹರ್ 4 ಓವರ್‌ಗಳಲ್ಲಿ 48 ರನ್ ನೀಡಿದರೆ ಚಾಹಲ್ ಕೂಡ ಇಷ್ಟೇ ಓವರ್‌ಗಳಲ್ಲಿ 51 ರನ್ ನೀಡಿದರು. ಭಾರತದ ಪರವಾಗಿ ಟಿ ನಟರಾಜನ್ ಅದ್ಭುತವಾಗಿ ಬೌಲಿಂಗ್ ಪ್ರದರ್ಶನ ನೀಡಿದರು. 4 ಓವರ್‌ಗಳಲ್ಲಿ ಕೇವಲ 20 ರನ್ ನೀಡಿ 2 ವಿಕೆಟ್ ಪಡೆಯುವಲ್ಲಿ ನಟರಾಜನ್ ಯಶಸ್ವಿಯಾಗಿದ್ದಾರೆ. ಶಾರ್ದೂಲ್ ಠಾಕೂರ್ ಹಾಗೂ ಚಾಹಲ್ ತಲಾ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತ ಇಂದಿನ ಪಂದ್ಯದಲ್ಲಿ ಜಸ್ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಶಮಿಯಂತಾ ಅನುಭವಿ ವೇಗಿಗಳು ಇಲ್ಲದೆ ಕಣಕ್ಕಿಳಿದಿದೆ. ಈ ಅವಕಾಶವನ್ನು ನಟರಾಜನ್ ಅದ್ಭುತವಾಗಿ ಬಳಸಿಕೊಂಡಿದ್ದು ರನ್ ವಿಯಂತ್ರಣದ ಜೊತೆಗೆ ಪ್ರಮುಖ ವಿಕೆಟ್ ಪಡೆದು ಮಿಂಚು ಹರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications