ಸತತ 2ನೇ ಪಂದ್ಯದಲ್ಲಿಯೂ ಮುಗ್ಗರಿಸಿದ ಆಸ್ಟ್ರೇಲಿಯಾ: ದಿಗ್ಗಜ ಬಾರ್ಡರ್ ಮಾತಿನ ಚಾಟಿ!

ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿಯೂ ಟೀಮ್ ಇಂಡಿಯಾ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಅಮೋಘ ಗೆಲುವು ಸಾಧಿಸಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಪೈಪೋಟಿ ನೀಡಿದರೂ ಎರಡನೇ ಇನ್ನಿಂಗ್ಸ್‌ನಲ್ಲಿ ನೀರಸ ಪ್ರದರ್ಶನ ನೀಡಿದೆ. ಇದರ ಪರಿಣಾಮವಾಗಿ ಈ ಪಂದ್ಯದಲ್ಲಿ ಟೀಮ್ ಇಂಡಿಯಾ 6 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿದೆ. ಆಸ್ಟ್ರೇಲಿಯಾ ಮತ್ತೊಮ್ಮೆ ಹೀನಾಯ ಸೋಲು ಕಂಡಿದೆ.
ಟೀಮ್ ಇಂಡಿಯಾದ ಈ ಗೆಲುವಿನೊಂದಿಗೆ ಪ್ರವಾಸಿ ಆಸ್ಟ್ರೇಲಿಯಾ ಭಾರತದಲ್ಲಿ ಸರಣಿ ಗೆಲ್ಲುವ ಕನಸು ಮತ್ತೊಮ್ಮೆ ಭಗ್ನವಾಗಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿಯೂ ಭಾರತ ಗೆಲುವು ಸಾಧಿಸಿರುವ ಕಾರಣ ಆಸ್ಟ್ರೇಲಿಯಾ ತಂಡಕ್ಕೆ ಇನ್ನು ಸರಣಿಯನ್ನು ಸಮಬಲಗೊಳಿಸುವ ಅವಕಾಶ ಮಾತ್ರವೇ ಉಳಿದುಕೊಂಡಿದೆ. ಸರಣಿಯನ್ನು ಗೆಲ್ಲುವ ಅವಕಾಶ ಸಂಪೂರ್ಣವಾಗಿ ಕಳೆದುಕೊಂಡದೆ.

ನಾನು ಕೋಪಗೊಂಡಿದ್ದೇನೆ!
ಈ ಫಲಿತಾಂಶದ ಬಳಿಕ ಆಸ್ಟ್ರೇಲಿಯಾ ತಂಡದ ದಿಗ್ಗಜ ಆಟಗಾರ ಆಲನ್ ಬಾರ್ಡರ್ ಪ್ರತಿಕ್ರಿಯೆ ನೀಡಿದ್ದು ಆಸ್ಟ್ರೇಲಿಯಾ ತಂಡದ ಪ್ರದರ್ಶನಕ್ಕೆ ಕಿಡಿಕಾರಿದ್ದಾರೆ. "ಇಂದಿನ ಪಂದ್ಯದಲ್ಲಿ ಆಡಿದ ರೀತಿಗೆ ನಾನು ಕೋಪಗೊಂಡಿದ್ದೇನೆ" ಎಂದು ಬಾರ್ಡರ್ ಫಾಕ್ಸ್ ಸ್ಪೋರ್ಟ್ಸ್‌ಗೆ ನೀಡಿರುವ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ. ದೆಹಲಿ ಪಂದ್ಯದ ಮೂರನೇ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡ 62 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡು ಭದ್ರವಾಗಿತ್ತು. ಆದರೆ ಅದಾದ ಬಳಿಕ ಹಠಾತ್ ಕುಸಿತಕ್ಕೆ ಒಳಗಾಗಿ 113 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತ್ತು.

ಭಯಾನಕ ಕುಸಿತ ಎಂದ ಬಾರ್ಡರ್
ಆಸ್ಟ್ರೇಲಿಯಾ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಅನುಭವಿಸಿದ ಕುಸಿತಕ್ಕೆ ಆಲನ್ ಬಾರ್ಡರ್ ಇದು ಭೀಕರವಾದ ಕುಸಿತ ಎಂದು ಕರೆದಿದ್ದಾರೆ. "ಇದು ಆಘಾತಕಾರಿ ಹಾಗೂ ಭೀಕರವಾದ ಕುಸಿತವಾಗಿದೆ. ಯಾರೂ ಕೂಡ ಉತ್ತಮವಾದ ರಕ್ಷಣಾತ್ಮಕ ಆಟಕ್ಕೆ ಮುಂದಾಗಲು ಸಾಧ್ಯವಾಗಲೇ ಇಲ್ಲ. ಅವರೆಲ್ಲರೂ ಸ್ವೀಪ್ ಶಾಟ್ ಹಾಗೂ ರಿವರ್ಸ್‌ಸ್ವೀಪ್ ಬಾರಿಸಲು ಹೋಗಿ ವಿಕೆಟ್ ಕಳೆದುಕೊಂಡಿದ್ದಾರೆ" ಎಂದು ಬಾರ್ಡರ್ ಆಸ್ಟ್ರೇಲಿಯಾ ಆಟಗಾರರ ಬ್ಯಾಟಿಂಗ್‌ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಪಿಚ್ ವಿಚಾರವಾಗಿ ಬಾರ್ಡರ್ ಪ್ರತಿಕ್ರಿಯೆ
ಇನ್ನು ಇದೇ ಸಂದರ್ಭದಲ್ಲಿ ಪಿಚ್ ವಿಚಾರವಾಗಿಯೂ ಬಾರ್ಡರ್ ಪ್ರತಿಕ್ರಿಯೆ ನೀಡಿದ್ದಾರೆ. "ಪಿಚ್ ವಿಚಾರವನ್ನು ಮುಂದಿಟ್ಟುಕೊಂಡು ನೀವು ರಕ್ಷಣೆ ಪಡೆದುಕೊಳ್ಳಲು ಸಾಧ್ಯವಿಲ್ಲ. ಅದನ್ನು ಎದುರಿಸುವ ವಿಧಾನ ನಿಮ್ಮ ಮುಂದಿರಬೇಕು" ಎಂದಿದ್ದಾರೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ನಾಯಕ ಅಲೆನ್ ಬಾರ್ಡರ್.

ಆಸ್ಟ್ರೇಲಿಯಾದ ಸರಣಿ ಗೆಲ್ಲುವ ಕನಸು ಭಗ್ನ
ಇನ್ನು 2017-18ರ ತವರಿನ ಆವೃತ್ತಿಯಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆದ್ದ ಬಳಿಕ ಭಾರತ ಸತತ ಮೂರನೇ ಬಾರಿ ಟ್ರೋಪಿಯನ್ನು ತನ್ನಲ್ಲಿಯೇ ಉಳಿಸಿಕೊಂಡಿದೆ. ಇದರಲ್ಲಿ ಎರಡು ಬಾರಿ ಆಸ್ಟ್ರೇಲಿಯಾವನ್ನು ಅದರ ತವರಿನಲ್ಲಿಯೇ ಮಣಿಸಿ ಸರಣಿ ಗೆದ್ದಿತ್ತು ಭಾರತ ತಂಡ. ಪ್ರಸ್ತುತ ಭಾರತ 2-0 ಅಂತರದಿಂದ ಸರಣಿಯಲ್ಲಿ ಮೇಲುಗೈ ಸಾಧಿಸಿದ್ದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಹಂತಕ್ಕೇರಲು ಇನ್ನು ಕೇವಲ ಒಂದು ಗೆಲುವು ಮಾತ್ರವೇ ಭಾರತಕ್ಕೆ ಅಗತ್ಯವಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications