ಭಾರತ vs ಆಸ್ಟ್ರೇಲಿಯಾ: ಟೀಮ್ ಇಂಡಿಯಾ ಬೌಲಿಂಗ್ ದಾಳಿಗೆ ನಲುಗಿದ ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಲ್ಲಿ ಭಾರತ ಅದ್ಭುತ ಯಶಸ್ಸು ಸಂಪಾದಿಸಿದೆ. ಟಾಸ್ ಸೋತು ಮೊದಲಿಗೆ ಬೌಲಿಂಗ್ ನಡೆಸಿದ ಭಾರತ ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತವನ್ನು ಹೊಂದಲು ಆರಂಬಿಸಿತ್ತು. ಬರ್ನ್ಸ್ ವಿಕೆಟ್ ಶೀಘ್ರವಾಗಿ ಪಡೆದ ಬೂಮ್ರಾ ಮೊದಲ ಯಶಸ್ಸು ನೀಡಿದರು.
ಅದಾದ ಬಳಿಕ ಉತ್ತಮವಾಗಿ ಆಡುತ್ತಿದ್ದ ಮ್ಯಾಥ್ಯೂ ವೇಡ್ 30 ರನ್ ಗಳಿಸಿ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು. ನಂತರ ಆಸ್ಟ್ರೇಲಿಯಾದ ಬ್ಯಾಟಿಂಗ್ ವಿಭಾಗದ ಪ್ರಮುಖ ಅಸ್ತ್ರ ಸ್ಟೀವ್ ಸ್ಮಿತ್ ಭಾರತದ ವಿರುದ್ಧದ ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲೂ ವಿಫಲರಾದರು. ಆರ್ ಅಶ್ವಿನ್ ಸ್ಮಿತ್ ಅವರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಭಾರತಕ್ಕೆ ದೊಡ್ಡ ಮುನ್ನಡೆ ನೀಡಿದರು. ಅಲ್ಲಿಗೆ ಆಸ್ಟ್ರೇಲಿಯಾ 38 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು.

ಸಿರಾಜ್‌ಗೆ ಲ್ಯಾಬುಶೈನ್ ಮೊದಲ ಬಲಿ
ಮರ್ನಾಸ್ ಲ್ಯಾಬುಶೈನ್ ಹಾಗೂ ಟ್ರೆವಿಸ್ ಹೆಡ್ ಉತ್ತಮ ಜೊತೆಯಾಟವನ್ನು ನೀಡುವ ಮುನ್ಸೂಚನೆ ನೀಡಿದರು. ಈ ಜೋಡಿಯನ್ನು ಬೂಮ್ರಾ ಬೇರ್ಪಡಿಸುವ ಮೂಲಕ ಭಾರತಕ್ಕೆ ಮತ್ತೆ ಮುನ್ನಡೆ ಒದಗಿಸಿದರು. ಹೆಡ್ 38 ರನ್ ಗಳಿಸಿದರೆ ಬಳಿಕ ಲ್ಯಾಬುಶೈನ್ ಮೊಹಮ್ಮದ್ ಸಿರಾಜ್‌ಗೆ ಚೊಚ್ಚಲ ಟೆಸ್ಟ್ ವಿಕೆಟ್ ಆಗಿ ಫೆವಿಲಿಯನ್ ಸೇರಿದರು. ಲ್ಯಾಬುಶೈನ್ 48 ರನ್‌ಗಳ ಕೊಡುಗೆಯನ್ನು ನೀಡಿದರು.

ಆಸಿಸ್ ಬ್ಯಾಟ್ಸ್‌ಮನ್‌ಗಳಿಗೆ ಆಘಾತ
ಇದಾದ ನಂತರ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತದ ರನ್ ಕೊಡುಗೆಯನ್ನು ನೀಡಲು ಟೀಮ್ ಇಂಡಿಯಾ ಬೌಲರ್‌ಗಳು ಅವಕಾಶವನ್ನೇ ನೀಡಲಿಲ್ಲ. ಗ್ರೀನ್ 12, ನಾಯಕ ಪೈನ್ 13, ಪ್ಯಾಟ್ ಕಮ್ಮಿನ್ಸ್ 9, ಸ್ಟಾರ್ಕ್ 7 ಕ್ರಿಸ್ ಲಿಯೋನ್ 20 ಹಾಗೂ ಹ್ಯಾಜಲ್‌ವುಡ್ 4 ರನ್ ಗಳಿಸಿದರು.

ಬೌಲಿಂಗ್ ಪಡೆ ಮಿಂಚು
ಟೀಮ್ ಇಂಡಿಯಾ ಪರ ಬೌಲಿಂಗ್‌ನಲ್ಲಿ ಜಸ್ಪ್ರೀತ್ ಬೂಮ್ರಾ 4 ವಿಕೆಟ್ ಪಡೆದು ಮಿಂಚಿದರೆ ಆರ್ ಅಶ್ವಿನ್ ಪ್ರಮುಖ 3 ವಿಕೆಟ್ ಪಡೆಯುವ ಮೂಲಕ ಮೇಲುಗೈ ಒದಗಿಸಿದರು. ಚೊಚ್ಚಲ ಪಂದ್ಯವನ್ನಾಡಿದ ಸಿರಾಜ್ 2 ವಿಕೆಟ್ ಕಿತ್ತು ಮಿಂಚಿದರೆ ಜಡೇಜಾ 1 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications