Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬೆಂಗ್ಳೂರು ಟೆಸ್ಟ್: 2ನೇ ದಿನದಾಂತ್ಯಕ್ಕೆ ಆಸೀಸ್ ಗೆ 48 ರನ್ ಗಳ ಮುನ್ನಡೆ

ಬೆಂಗಳೂರು, ಮಾರ್ಚ್. 05 : ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ನ ಎರಡನೇ ದಿನದಾಂತ್ಯಕ್ಕೆ ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ವಿರುದ್ಧ 6 ವಿಕೆಟ್ ಕಳೆದುಕೊಂಡು 237 ರನ್ ಗಳಿಸಿ 48 ರನ್ ಗಳ ಮುನ್ನಡೆ ಮುನ್ನಡೆ ಸಾಧಿಸಿದೆ.

ಮ್ಯಾಥ್ಯೂ ವೇಡ್ ಅಜೇಯ 25 ಮತ್ತು ಮಿಚೆಲ್ ಸ್ಟಾರ್ಕ್ ಅಜೇಯ 14 ರನ್ ಗಳಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಆಸೀಸ್ ಪರ ಮ್ಯಾಟ್ ರೆನ್ಶೋ 60, ಶಾನ್ ಮಾರ್ಷ್ 67 ರನ್ ಗಳಿಸಿ ತಂಡಕ್ಕೆ ನೆರವಾದರು. ಇನ್ನು ಭಾರತ ಪರ ರವೀಂದ್ರ ಜಡೇಜಾ 3, ಇಶಾಂತ್, ಉಮೇಶ್ ಯಾದವ್, ಅಶ್ವಿನ್ ತಲಾ ಒಂದು ವಿಕೆಟ್ ಪಡೆದರು.

India Vs Australia, 2nd Test: Renshaw-Marsh help visitors take lead on Day 2


ಮೊದಲ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 189 ರನ್ ಗಳಿಗೆ ಸರ್ವಪತನ ಕಂಡಿತ್ತು.

ಸ್ಕೋರು ವಿವರ(2ನೇ ದಿನದಾಟ)
ಭಾರತ : ಮೊದಲ ಇನ್ನಿಂಗ್ಸ್ 71.2 ಓವರ್ 189 ರನ್ ಆಲೌಟ್
(ಕೆಎಲ್ ರಾಹುಲ್ 90, ಕರುಣ್ ನಾಯರ್ 26, ಅಜಿಂಕ್ಯ ರಹಾನೆ 17, ಚೇತೇಶ್ವರ್ ಪೂಜಾರ 17 ರನ್ - ನೇಥನ್ ಲಯಾನ್ 50/8)

ಆಸ್ಟ್ರೇಲಿಯಾ : ಮೊದಲ ಇನ್ನಿಂಗ್ಸ್ 106 ಓವರ್ 237/6
(ಶಾನ್ ಮಾರ್ಷ್ 66, ಮ್ಯಾಟ್ ರೆನ್ಷಾ 60, ಡೇವಿಡ್ ವಾರ್ನರ್ 33, ಮ್ಯಾಥ್ಯೂ ವೇಡ್ ಅಜೇಯ 25, ಪೀಟರ್ ಹ್ಯಾಂಡ್ಸ್ ಕೂಂಬ್ 16, ಮಿಶೆಲ್ ಸ್ಟಾರ್ಕ್ ಅಜೇಯ 14, ರವೀಂದ್ರ ಜಡೇಜಾ 49/3)

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+