ರಾಂಚಿ ಟೆಸ್ಟ್ : ಡ್ರಾನಲ್ಲಿ ಅಂತ್ಯ, ಇಂಡೋ ಆಸೀಸ್ ಸರಣಿ 1-1
ರಾಂಚಿ, ಮಾರ್ಚ್ 20: ಗೆಲುವಿನತ್ತ ಭಾರತದ ಗುರಿ, ಪಂದ್ಯ ಉಳಿಸಿಕೊಳ್ಳಲು ಆಸ್ಟ್ರೇಲಿಯಾ ತಯಾರಿ. ಸ್ಪಿನ್ ಮೋಡಿ ಮೂಲಕ ಸ್ಮಿತ್ ಪಡೆಯನ್ನು ಕಟ್ಟಿ ಹಾಕಲು ಕೊಹ್ಲಿ ಸಜ್ಜಾಗಿದ್ದಾರೆ. ಐದನೇ ಹಾಗೂ ಅಂತಿಮ ದಿನದಾಟದ ಮುಖ್ಯಾಂಶಗಳು ನಿಮಗಾಗಿ ಇಲ್ಲಿದೆ...ದಿನದ ಅಂತ್ಯಕ್ಕೆ ವಿಕೆಟ್ ಉಳಿಸಿಕೊಂಡು ಆಸ್ಟ್ರೇಲಿಯಾ 204/6 ಸ್ಕೋರ್ ಮಾಡಿದ್ದು, ಅಂತ್ಯ ಡ್ರಾನಲ್ಲಿ ಅಂತ್ಯ ಕಂಡಿದೆ.
* ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ 1-1ರಲ್ಲಿ ಸಮನಾಗಿದ್ದು, ಅಂತಿಮ ಪಂದ್ಯ ಧರ್ಮಶಾಲದಲ್ಲಿ ಮಾರ್ಚ್ 25 ರಿಂದ 29ರ ತನಕ ನಡೆಯಲಿದೆ.
* ಶಾರ್ನ್ ಮಾರ್ಷ್ 52ರನ್ ಗಳಿಸಿ ಔಟಾದರು. ಮ್ಯಾಕ್ಸ್ ವೆಲ್ ಕೂಡಾ 2 ರನ್ನಿಗೆ ಅಶ್ವಿನ್ ಗೆ ವಿಕೆಟ್ ಒಪ್ಪಿಸಿದರು. ಆದರೆ, ಪೀಟರ್ ಹ್ಯಾಂಡ್ ಕಂಬ್ 72ರನ್ ಗಳಿಸಿ ನಾಟೌಟ್ ಆಗಿ ಉಳಿದು, ಭಾರತಕ್ಕೆ ನಿರಾಸೆ ಮೂಡಿಸಿದರು.
* ಶಾನ್ ಮಾರ್ಷ್ ಹಾಗೂ ಪೀಟರ್ ಹ್ಯಾಂಡ್ಸ್ ಕಂಬ್ ಜೊತೆಯಾಟ ಮುರಿಯಲು ಹೆಣಗುತ್ತಿರುವ ಟೀಂ ಇಂಡಿಯಾ ಬೌಲರ್ ಗಳು.
* ಚಹಾ ವಿರಾಮದ ವೇಳೆಗೆ ಶಾನ್ ಮಾರ್ಷ್ 38ರನ್ ಹಾಗೂ ಹ್ಯಾಂಡ್ಸ್ ಕಂಬ್ 44 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
* ನಾಲ್ಕನೇ ದಿನದಾಟದ ಅಂತ್ಯಕ್ಕೆ 23/2 ಸ್ಕೋರ್ ಮಾಡಿದ್ದ ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಮ್ಮೆ ನಾಯಕ ಸ್ಟೀವ್ ಸ್ಮಿತ್ ಆಸರೆಯಾಗಿ ಬೇಕಿತ್ತು.
* ಸ್ಮಿತ್ ಹಾಗೂ ಆರಂಭಿಕ ಆಟಗಾರ ರೆನ್ಶಾ ಅವರು ವಿಕೆಟ್ ಗಳನ್ನು ಕ್ರಮವಾಗಿ ರವೀಂದ್ರ ಜಡೇಜ ಹಾಗೂ ಇಶಾಂತ್ ಶರ್ಮ ಗಳಿಸಿದರು.
* ಟೀಂ ಇಂಡಿಯಾ ಸ್ಪಿನ್ನರ್ ರವೀಂದ್ರ ಜಡೇಜ ಮತ್ತೊಮ್ಮೆ ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಗಳನ್ನು ಕಾಡುತ್ತಿದ್ದಾರೆ.

* ಡೇವಿಡ್ ವಾರ್ನರ್ ಹಾಗೂ ನಾಥನ್ ಲಿಯಾನ್ ವಿಕೆಟ್ ಕಿತ್ತಿದ್ದ ಜಡೇಜ ಅವರು ಸೋಮವಾರದಂದು ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ರನ್ನು ಕ್ಲೀನ್ ಬೋಲ್ಡ್ ಮಾಡಿ ಪೆವಿಲಿಯನ್ ಗೆ ಅಟ್ಟಿದರು.
* ನಾಲ್ಕನೇ ದಿನದ ಅಂತ್ಯಕ್ಕೆ ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 603/9 ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 451 ಸ್ಕೋರ್ ಮಾಡಿತ್ತು.
* ಚೇತೇಶ್ವರ್ ಪೂಜಾರ ದ್ವಿಶತಕ, ವೃದ್ಧಿಮಾನ್ ಸಹಾ ಶತಕ, ಕೆಎಲ್ ರಾಹುಲ್ ಹಾಗೂ ಮುರಳಿ ವಿಜಯ್ ಅರ್ಧಶತಕದ ನೆರವಿನಿಂದ ಭಾರತ ಬೃಹತ್ ಮೊತ್ತ ಕಲೆ ಹಾಕಿತು. (ಒನ್ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications