For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಹೋರಾಟ ವ್ಯರ್ಥ, ಭಾರತ ಮಣಿಸಿ ಸರಣಿ ಹಿಡಿದಿಟ್ಟುಕೊಂಡ ಆಸೀಸ್

ಕೊಹ್ಲಿ ಹೋರಾಟ ವ್ಯರ್ಥವಾಗಿದ್ದಾದ್ರು ಏಕೆ..!? | Oneindia Kannada
India vs Australia, 3rd ODI live cricket score in Ranchi

ರಾಂಚಿ, ಮಾರ್ಚ್ 8: ರಾಂಚಿಯ ಜೆಎಸ್‌ಸಿಎ ಇಂಟರ್ ನ್ಯಾಷನಲ್ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ ಶುಕ್ರವಾರ (ಮಾರ್ಚ್ 8) ನಡೆದ ಭಾರತ vs ಆಸ್ಟ್ರೇಲಿಯಾ 3ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 32 ರನ್ ಜಯ ಸಾಧಿಸಿದೆ. ನಾಯಕ ವಿರಾಟ್ ಕೊಹ್ಲಿ ಏಕಾಂಗಿ ಹೋರಾಟವನ್ನು ಆಸೀಸ್ ಆರಂಭಿಕರಾದ ಆ್ಯರನ್ ಫಿಂಚ್-ಉಸ್ಮಾನ್ ಖವಾಜಾ ಜೊತೆಯಾಟ ವ್ಯರ್ಥಗೊಳಿಸಿತು.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
45587

ಕೊಹ್ಲಿಗೆ ಹೊರತಾಗಿ ಭಾರತದ ಬ್ಯಾಟಿಂಗ್ ವಿಭಾಗದ ನಿರ್ಲಕ್ಷ್ಯದಾಟ ಮತ್ತು ಕಾಂಗರೂ ಬಳಗದ ಮಾರಕ ಬೌಲಿಂಗ್ ದಾಳಿಗೆ ಟೀಮ್ ಇಂಡಿಯಾ ತಲೆಬಾಗಬೇಕಾಯ್ತು. ಈ ಫಲಿತಾಂಶದೊಂದಿಗೆ ಆಸ್ಟ್ರೇಲಿಯಾ ಐದು ಪಂದ್ಯಗಳ ಏಕದಿನ ಸರಣಿಯನ್ನು ಹಿಡಿದಿಟ್ಟುಕೊಂಡಿದೆ. ಸರಣಿಯಲ್ಲೀಗ ಭಾರತ 2-1ರ ಮುನ್ನಡೆಯಲ್ಲಿದೆ.

ಟಾಸ್ ಸೋತು ಆಸ್ಟ್ರೇಲಿಯಾ ಬ್ಯಾಟಿಂಗ್‌ಗೆ ಇಳಿದಿತ್ತು. ಆರಂಭಿಕ ಆಟಗಾರರಾದ ಫಿಂಚ್ ಮತ್ತು ಖವಾಜಾ ಉತ್ತಮ ಜೊತೆಯಾಟ ಆಡಿದ್ದು ಆಸ್ಟ್ರೇಲಿಯಾಕ್ಕೆ ಗರಿಷ್ಠ ರನ್ ಕಲೆ ಹಾಕಲು ನೆರವು ನೀಡಿತು. ಜೊತೆಗೆ ಗ್ಲೆನ್ ಮ್ಯಾಕ್ಸ್‌ವೆಲ್ 47, ಮಾರ್ಕಸ್ ಸ್ಟೋಯ್ನಿಸ್ 31, ಅಲೆಕ್ಸ್ ಕ್ಯಾರಿ ಅಜೇಯ 21 ರನ್ ಸೇರಿಸಿ ತಂಡವನ್ನು ಇನ್ನಷ್ಟು ಬೆಂಬಲಿಸಿದರು. ಆಸೀಸ್ 50 ಓವರ್‌ಗೆ 5 ವಿಕೆಟ್ ಕಳೆದು 313 ರನ್ ಬಾರಿಸಿತು.

ಆಸೀಸ್ ನೀಡಿದ 314 ರನ್ ಗುರಿ ಬೆನ್ನತ್ತಿದ ಭಾರತ ಆರಂಭದಲ್ಲೇ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತ ಆಘಾತ ಅನುಭವಿಸಿತು. ಶಿಖರ್ ಧವನ್ (1), ರೋಹಿತ್ ಶರ್ಮಾ (14), ಅಂಬಾಟಿ ರಾಯುಡು (2), ಎಂಎಸ್ ಧೋನಿ (26), ಕೇದಾರ್ ಜಾಧವ್ (26), ವಿಜಯ್ ಶಂಕರ್ (32), ರವೀಂದ್ರ ಜಡೇಜಾ (24) ರನ್‌ನೊಂದಿಗೆ ನಿರ್ಗಮಿಸಿದರು.

ಆದರೆ ತಂಡದ ಗೆಲುವಿನ ಜವಾಬ್ದಾರಿ ಹೊತ್ತುಕೊಂಡ ನಾಯಕ ವಿರಾಟ್ ಕೊಹ್ಲಿ 95 ಎಸೆತಗಳಿಗೆ 123 ರನ್ ಚಚ್ಚಿದರು. ಈ ಮೂಲಕ ಕೊಹ್ಲಿ 41ನೇ ಅಂತಾರಾಷ್ಟ್ರೀಯ ಏಕದಿನ ಶತಕವನ್ನೂ ಪೂರೈಸಿಕೊಂಡರು. ಕೊಹ್ಲಿ ಓಟಾದ ಬಳಿಕ ಮತ್ತೆ ತಂಡ ಸೋಲಿನತ್ತ ವಾಲತೊಡಗಿತು. ಅಂತಿಮವಾಗಿ 48.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 281 ರನ್ ಪೇರಿಸಲಷ್ಟೇ ಭಾರತ ಶಕ್ತವಾಯ್ತು.

ಆಸ್ಟ್ರೇಲಿಯಾದ ಪರ ಪ್ಯಾಟ್ ಕಮ್ಮಿನ್ಸ್, ಜಾಯ್ ರಿಚರ್ಡ್ಸನ್ ಮತ್ತು ಆದಂ ಜಂಪಾ ಮಾರಕ ಬೌಲಿಂಗ್ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಮೂವರೂ ತಲಾ 3 ವಿಕೆಟ್ ಕೆಡವಿದ್ದು ಭಾರತಕ್ಕೆ ದುಬಾರಿಯಾಗಿ ಪರಿಣಮಿಸಿತು. ಪಂದ್ಯಶ್ರೇಷ್ಠ ಪ್ರಶಸ್ತಿ ಉಸ್ಮಾನ್ ಖವಾಜಾ ಅವರಿಗೊಲಿಯಿತು.

ಭಾರತ ತಂಡ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ಸಿ), ಅಂಬಾಟಿ ರಾಯುಡು, ವಿಜಯ್ ಶಂಕರ್, ಕೇದಾರ ಜಾಧವ್, ಎಂಎಸ್ ಧೋನಿ (ವಿಕೆ), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ.

ಆಸ್ಟ್ರೇಲಿಯಾ ತಂಡ: ಆ್ಯರನ್ ಫಿಂಚ್ (ಸಿ), ಉಸ್ಮಾನ್ ಖವಾಜಾ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್‌ಕಾಂಬ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಅಲೆಕ್ಸ್ ಕ್ಯಾರಿ (ವಿಕೆ), ಪ್ಯಾಟ್ ಕಮ್ಮಿನ್ಸ್, ಜೀಯೆ ರಿಚರ್ಡ್ಸನ್, ನಾಥನ್ ಲಿಯಾನ್, ಆಡಮ್ ಜಂಪಾ.

Story first published: Friday, March 8, 2019, 21:51 [IST]
Other articles published on Mar 8, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+