ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಂಡ್ಯ ಭರ್ಜರಿಯಾಟ, ಆಸೀಸ್ ಬಗ್ಗು ಬಡಿದು ಸರಣಿ ಗೆದ್ದ ಭಾರತ

By Mahesh

ಇಂದೋರ್, ಸೆ. 24: ಮೂರನೇ ಏಕದಿನ ಪಂದ್ಯದಲ್ಲಿ ಭಾರತ ವಿರುದ್ಧ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ 50 ಓವರ್ ಗಳಲ್ಲಿ 293/6 ಸ್ಕೋರ್ ಮಾಡಿತ್ತು. ಈ ಗುರಿಯನ್ನು ಮುಟ್ಟಿದ ಟೀಂ ಇಂಡಿಯಾ, 3ನೇ ಪಂದ್ಯವನ್ನು 5 ವಿಕೆಟ್ ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯನ್ನು 3-0ರಲ್ಲಿ ಕೊಹ್ಲಿ ಪಡೆ ತನ್ನ ವಶಕ್ಕೆ ತೆಗೆದುಕೊಂಡಿದೆ.

294ರನ್ ಚೇಸ್ ಮಾಡಿದ ಭಾರತಕ್ಕೆ ಅಜಿಂಕ್ಯ ರಹಾನೆ 70, ರೋಹಿತ್ ಶರ್ಮ 71 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ನಾಯಕ ಕೊಹ್ಲಿ 28ರನ್ ಗಳಿಸಿ ಔಟಾದರೆ, ಹಾರ್ದಿಕ್ ಪಾಂಡ್ಯ 72 ಎಸೆತಗಳಲ್ಲಿ 78ರನ್ ಗಳಿಸಿ ಗೆಲುವಿನ ಹಂತಕ್ಕೆ ತಂದರು. ಅಂತಿಮವಾಗಿ ಭಾರತ 47.5ನೇ ಓವರ್ ನಲ್ಲಿ 294/5ಸ್ಕೋರ್ ಮಾಡಿ ಪಂದ್ಯ ತನ್ನದಾಗಿಸಿಕೊಂಡಿತು.

Hardik Pandya


ಆಸ್ಟ್ರೇಲಿಯಾ ಪರ ಅರೋನ್ ಫಿಂಚ್ 124, ಸ್ಮಿತ್ 63 ರನ್ ಗಳಿಸಿದರೆ, ಭಾರತದ ಪರ ಕುಲದೀಪ್ 2/75, ಬೂಮ್ರಾ 2/52 ಗಳಿಸಿದರು.

ಸ್ಕೋರ್ ಕಾರ್ಡ್

ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿರುವ ಮೂರನೇ ಏಕದಿನ ಪಂದ್ಯ ಆಸ್ಟ್ರೇಲಿಯಾ ತಂಡ ತನ್ನ ಆಡುವ ಹನ್ನೊಂದರಲ್ಲಿ ಎರಡು ಬದಲಾವಣೆ ಮಾಡಿಕೊಂಡಿದೆ. ಅರೋನ್ ಫಿಂಚ್ ಹಾಗೂ ಪೀಟರ್ ಹ್ಯಾಂಡ್ಸ್ ಕಂಬ್ ಅವರು ತಂಡಕ್ಕೆ ಮರಳಿದ್ದಾರೆ.
 India Vs Australia, 3rd ODI: Steve Smith elects to bat in a must-win game in Indore


ಭಾರತದ ಕೋಲ್ಕತಾದಲ್ಲಿ ಆಡಿದ ತಂಡವನ್ನೇ ಉಳಿಸಿಕೊಂಡಿದೆ. ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ 2-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X