ರಾಂಚಿ ಟೆಸ್ಟ್ : ಚಹಾ ವಿರಾಮದ ವೇಳೆ, ಪೂಜಾರಾ ಶತಕದ ಬಲ
ರಾಂಚಿ, ಮಾರ್ಚ್ 18: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನವಾದ ಇಂದು(ಮಾರ್ಚ್ 18) ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಉತ್ತಮ ಸ್ಥಿತಿ ತಲುಪಿದೆ.ಚೇತೇಶ್ವರ್ ಪೂಜಾರಾ ಅವರು 11ನೇ ಶತಕ ಸಿಡಿಸಿದ್ದು, ಚಹಾ ವಿರಾಮದ ವೇಳೆಗೆ ಭಾರತ 303/4 ಸ್ಕೋರ್ ಮಾಡಿದೆ.
ಚೇತೇಶ್ವರ್ ಪೂಜಾರಾ ಅವರು 15 ಬೌಂಡರಿಯುಕ್ತ ಶತಕ ಬಾರಿಸಿ ಆಡುತ್ತಿದ್ದು, ಇನ್ನೊಂದೆಡೆ ಕ್ರೀಸ್ ನಲ್ಲಿ ಕರುಣ್ ನಾಯರ್ (13) ಇದ್ದಾರೆ. ನಾಯಕ ವಿರಾಟ್ ಕೊಹ್ಲಿ 6 ರನ್ ಗಳಿಸಿ ಔಟಾದರೆ, ಅಜಿಂಕ್ಯ ರಹಾನೆ 14 ರನ್ ಗಳಿಸಿ ಪೆವಿಲಿಯನ್ ಗೆ ಹಿಂತಿರುಗಿದರು.

ಕೆಎಲ್ ರಾಹುಲ್ ವಿಕೆಟ್ ಪತನ ನಂತರ ಮುರಳಿ ವಿಜಯ್ ಹಾಗೂ ಚೇತೇಶ್ವರ್ ಪೂಜಾರ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಆದರೆ, ಭೋಜನ ವಿರಾಮಕ್ಕೂ ಸ್ವಲ್ಪ ಮುಂಚಿತವಾಗಿ ವಿಜಯ್ (82) ಅವರು ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ತೆರಳಿದರು.

ಭೋಜನ ವಿರಾಮಕ್ಕೆ ಭಾರತದ ಸ್ಕೋರ್ 193/2, ಮುರಳಿ ವಿಜಯ್ 82 ಔಟ್, ಪೂಜಾರಾ 40 ನಾಟೌಟ್, 258 ರನ್ ಗಳಿಂದ ಹಿನ್ನಡೆ.
ಭೋಜನ ವಿರಾಮಕ್ಕೂ ಮುನ್ನ: ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಉತ್ತಮ ಆರಂಭದ ಲಾಭ ಪೂರ್ಣವಾಗಿ ಪಡೆದು ಕೊಳ್ಳಲು ವಿಫಲವಾಗಿದೆ. ವಿಕೆಟ್ ಕಾಯ್ದುಕೊಂಡರೂ, ರನ್ ಗತಿ ಹೆಚ್ಚಿಸುವಲ್ಲಿ ವಿಜಯ್-ಪೂಜಾರಾ ವಿಫಲರಾದರು.ಎರಡನೇ ದಿನದ ಅಂತ್ಯಕ್ಕೆ 40 ಓವರ್ ಗಳಲ್ಲಿ 120/1 ಸ್ಕೋರ್ ಮಾಡಿತ್ತು. ಕೆಎಲ್ ರಾಹುಲ್ 67ರನ್ ಗಳಿಸಿ ಔಟಾಗಿದ್ದರು.
Story first published: Wednesday, January 3, 2018, 10:04 [IST]
Other articles published on Jan 3, 2018
Read in English: Day 3: India 193/2 at Lunch
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications