For Quick Alerts
ALLOW NOTIFICATIONS  
For Daily Alerts
 

3ನೇ ಟೆಸ್ಟ್ : 3ನೇ ದಿನದ ಅಂತ್ಯಕ್ಕೆ ಭಾರತಕ್ಕೆ 346ರನ್ ಗಳ ಮುನ್ನಡೆ

Ind v/s Aus 3rd Test : Day 3| 151 ರನ್ ಗಳಿಗೆ ಆಸೀಸ್ ಆಲ್ಔಟ್ | 39 ವರ್ಷಗಳಿಗೆ ದಾಖಲೆ ಮುರಿದ ಜಸ್ಪ್ರೀತ್ ಬುಮ್ರಾ
India Vs Australia, 3rd Test: Day 2 Live Updates: Hosts eye early wickets as Kohli reaches fifty

ಮೆಲ್ಬೋರ್ನ್, ಡಿಸೆಂಬರ್ 28: ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯ ಮೂರನೇ ಪಂದ್ಯ ಮೆಲ್ಬೋರ್ನ್ ಕ್ರಿಕೆಟ್ ಮೈದಾನ(ಎಂಸಿಜಿ)ದಲ್ಲಿ ನಡೆದಿದ್ದು, ಮೂರನೇ ದಿನದ ವರದಿ ಇಲ್ಲಿದೆ.

ಭಾರತ 2ನೇ ಇನ್ನಿಂಗ್ಸ್ : ಹನುಮ ವಿಹಾರಿ(13ರನ್) ಮತ್ತೊಮ್ಮೆ ವಿಫಲರಾದರು. ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಕರಾರುವಾಕ್ ಬೌಲಿಂಗ್ ಹಾಗೂ ಲೆಕ್ಕಾಚಾರದ ಫೀಲ್ಡ್ ನಿರ್ವಹಣೆ ಮೂಲಕ ಸತತವಾಗಿ ಭಾರತದ ವಿಕೆಟ್ ಗಳು ಉದುರಿದವು. ಪೂಜಾರಾ, ವಿರಾಟ್ ಕೊಹ್ಲಿ ಶೂನ್ಯ ಸುತ್ತಿ ಒಂದೇ ರೀತಿ ಔಟಾದರು, ಅಜಿಂಕ್ಯ ರಹಾನೆ ಕೇವಲ ಒಂದು ರನ್ ಗಳಿಸಿದರು.

ರೋಹಿತ್ ಶರ್ಮ ಕೂಡಾ 5 ರನ್ ಮಾತ್ರ ಗಳಿಸಿದರು. ಇನ್ನೊಂದೆಡೆ 78ಎಸೆತಗಳಲ್ಲಿ 28ರನ್ ಗಳಿಸಿ ತಾಳ್ಮೆಯಿಂದ ವಿಕೆಟ್ ಕಾಯ್ದುಕೊಂಡ ಮಯಾಂಕ್ ಅಗರವಾಲ್ ಮೆಚ್ಚುಗೆಗೆ ಪಾತ್ರರಾದರು. ದಿನದಾಟದ ಅಂತ್ಯಕ್ಕೆ ಭಾರತ 54/5 ಸ್ಕೋರ್ ಮಾಡಿದ್ದು, 346ರನ್ ಗಳ ಮುನ್ನಡೆ ಪಡೆದುಕೊಂಡಿದೆ.

ಆಸ್ಟ್ರೇಲಿಯಾದ ಇನ್ನಿಂಗ್ಸ್ : ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 151ಸ್ಕೋರಿಗೆ ಆಲೌಟ್ ಆಗಿದೆ. ಭಾರತದ ಪರ ವೇಗಿ
ಜಸ್ ಪ್ರೀತ್ ಬೂಮ್ರಾಗೆ 6 ವಿಕೆಟ್ ಕಬಳಿಸಿದರೆ, ರವೀಂದ್ರ ಜಡೇಜಗೆ 2 ವಿಕೆಟ್,ಇಶಾಂತ್ ಶರ್ಮ, ಮೊಹಮ್ಮದ್ ಶಮಿಗೆ ತಲಾ 1 ವಿಕೆಟ್ ಸಿಕ್ಕಿದೆ.

ಆಸ್ಟ್ರೇಲಿಯಾ ಪರ ಮಾರ್ಕಸ್ ಹ್ಯಾರೀಸ್, ನಾಯಕ ಟಿಮ್ ಪೈನ್ ತಲಾ 22ರನ್ ಗಳಿಸಿದ್ದೇ ಗರಿಷ್ಠ ಮೊತ್ತವಾಗಿದೆ. ಉಸ್ಮಾನ್ ಖವಾಜಾ 21, ಶಾನ್ ಮಾರ್ಷ್ 19, ಟ್ರಾವಿಸ್ ಹೆಡ್ 20, ಪ್ಯಾಟ್ ಕಮಿನ್ಸ್ 17ರನ್ ಗಳಿಸಿದರು.

1
43625

ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ 443/7 ಸ್ಕೋರ್ ಆಗಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಬೃಹತ್ ಮೊತ್ತ ಬೆನ್ನು ಹತ್ತಿದ್ದ ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ ಆರಂಭ ಉತ್ತಮವಾಗಿರಲಿಲ್ಲ. ಅರೋನ್ ಫಿಂಚ್ 8 ರನ್ ಗಳಿಸಿ ಇಶಾಂತ್ ಶರ್ಮಗೆ ವಿಕೆಟ್ ಒಪ್ಪಿಸಿದರು.

ಮಾರ್ಕಸ್ ಹ್ಯಾರಿಸ್ 22ರನ್ ಗಳಿಸಿದ್ದಾಗ ಜಸ್ ಪ್ರೀತ್ ಬೂಮ್ರಾ ಬೌಲಿಂಗ್ ನಲ್ಲಿ ಕೆಟ್ಟ ಹೊಡೆತ ಬಾರಿಸಲು ಹೋಗಿ ಕ್ಯಾಚಿತ್ತು ಪೆವಿಲಿಯನ್ ತೆರಳಿದರು.

ಉಸ್ಮಾನ್ ಖವಾಜ ಅವರು ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಬೌಲಿಂಗ್ ನಲ್ಲಿ ಮಯಾಂಕ್ ಅಗರವಾಲ್ ಗೆ ಕ್ಯಾಚಿತ್ತಾಗ ತಂಡದ ಮೊತ್ತ 53 ಆಗಿತ್ತು.ಶಾನ್ ಮಾರ್ಷ್ ಹಾಗೂ ಟ್ರಾವಿಸ್ ಹೆಡ್ ವಿಕೆಟ್ ಕಾಯ್ದುಕೊಂಡಿದ್ದು, ಸದ್ಯ ಮೊತ್ತ 80/3 ಆಗಿದೆ.

Story first published: Friday, December 28, 2018, 13:14 [IST]
Other articles published on Dec 28, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+