Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

3ನೇ ಟೆಸ್ಟ್ : ನಾಲ್ಕನೇ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ 258/8

India Vs Australia, 3rd Test: Day 4 Live Updates: India set a target of 399 for hosts to chase

ಮೆಲ್ಬೋರ್ನ್, ಡಿಸೆಂಬರ್ 29: ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯ ಮೂರನೇ ಪಂದ್ಯ ಮೆಲ್ಬೋರ್ನ್ ಕ್ರಿಕೆಟ್ ಮೈದಾನ(ಎಂಸಿಜಿ)ದಲ್ಲಿ ನಡೆದಿದ್ದು, ನಾಲ್ಕನೇ ದಿನದ ವರದಿ ಇಲ್ಲಿದೆ.

ನಾಲ್ಕನೇ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ 8 ವಿಕೆಟ್ ಕಳೆದುಕೊಂಡು 258 ರನ್ ಗಳಿಸಿದೆ. ಪ್ಯಾಟ್ ಕಮಿನ್ಸ್ ಅರ್ಧಶತಕ (61) ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದಾರೆ.

399ರನ್ ಗುರಿ ಬೆನ್ನು ಹತ್ತಿದ ಆಸ್ಟ್ರೇಲಿಯಾ ಆರಂಭಿಕ ಆಘಾತ ಅನುಭವಿಸಿತು. ಅರೋನ್ ಫಿಂಚ್ 3ರನ್ ಗಳಿಸಿ ಜಸ್ ಪ್ರೀತ್ ಬೂಮ್ರಾಗೆ ವಿಕೆಟ್ ಒಪ್ಪಿಸಿದರು. ನಂತರ ಮಾರ್ಕಸ್ ಹ್ಯಾರೀಸ್ 13ರನ್ ಗಳಿಸಿ ಜಡೇಜ ಬೌಲಿಂಗ್ ನಲ್ಲಿ ಮಯಾಂಕ್ ಗೆ ಕ್ಯಾಚಿತ್ತರು.

ನಾಲ್ಕನೇ ದಿನದ ಭೋಜನ ವಿರಾಮದ ವೇಳೆಗೆ ಆಸ್ಟ್ರೇಲಿಯಾದ ಮೊತ್ತ 44/2. ಉಸ್ಮಾನ್ ಖವಾಜಾ 26 ಹಾಗೂ ಶಾನ್ ಮಾರ್ಷ್ 2ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ.

ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಗೆಲ್ಲಲು ಆಸ್ಟ್ರೇಲಿಯಾಕ್ಕೆ 399ರನ್ ಗಳ ಗುರಿಯನ್ನು ಭಾರತ ನೀಡಿದೆ. ಭಾರತ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 106/8 ಸ್ಕೋರ್ ಮಾಡಿದ್ದಾಗ, ನಾಯಕ ವಿರಾಟ್ ಕೊಹ್ಲಿ ಅವರು ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು.

1
43625

ಎರಡನೇ ಇನ್ನಿಂಗ್ಸ್ ನಲ್ಲಿ ಮಯಾಂಕ್ ಅಗರವಾಲ್ 42ರನ್ ಗಳಿಸಿ ಕಮಿನ್ಸ್ ಗೆ ಕ್ಲೀನ್ ಬೋಲ್ಡ್ ಆದರು, ರಿಷಪ್ ಪಂತ್ 33ರನ್ ಗಳಿಸಿ ಹೇಜೆಲ್ ವುಡ್ ಗೆ ವಿಕೆಟ್ ಒಪ್ಪಿಸಿದರು. ಹನುಮ ವಿಹಾರಿ 13ರನ್ ಗಳಿಸಿದ್ದರು. ಮಿಕ್ಕಂತೆ ಎಲ್ಲಾ ಆಟಗಾರರು 10ರನ್ ಗಿಂತ ಕಡಿಮೆ ಮೊತ್ತಕ್ಕೆ ಔಟಾದರು.

ಪ್ಯಾಟ್ ಕಮಿನ್ಸ್ 27ರನ್ನಿಗೆ 6 ವಿಕೆಟ್ ಕಿತ್ತು, ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದರು.ಇದಕ್ಕೂ ಮುನ್ನ ಜಸ್ ಪ್ರೀತ್ ಬೂಮ್ರಾ ಅವರು ಕೂಡಾ 33ರನ್ನಿಗೆ 6 ವಿಕೆಟ್ ಗಳಿಸಿ, ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ 151 ಸ್ಕೋರಿಗೆ ಔಟಾಗುವಂತೆ ಮಾಡಿದ್ದರು.

Story first published: Saturday, December 29, 2018, 12:58 [IST]
Other articles published on Dec 29, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+