Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೊಹಾಲಿಯಲ್ಲಿ ಭಾರತಕ್ಕೆ ಮತ್ತೆ ಸೋಲು, ದಾಖಲೆ ಮುರಿಯುವಾಸೆ ಮಣ್ಣುಪಾಲು!

ನಾಲ್ಕನೇ ಪಂದ್ಯದ ಸೋಲಿನಿಂದ ಟೀಂ ಇಂಡಿಯಾದ ಆಸೆ ಮಣ್ಣುಪಾಲು..? | Oneindia Kannada
India vs Australia, 4th ODI - Live Cricket Score, Mohali

ಮೊಹಾಲಿ, ಮಾರ್ಚ್ 10: ಮೊಹಾಲಿ, ಮಾರ್ಚ್ 10: ಮೊಹಾಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ 23 ವರ್ಷಗಳಿಂದಲೂ ಅನುಭವಿಸುತ್ತಿರುವ ಸೋಲಿಗೆ ಅಂತ್ಯ ಹಾಡುವ ಟೀಮ್ ಇಂಡಿಯಾ ಆಸೆ ಮತ್ತೆ ಮಣ್ಣುಪಾಲಾಗಿದೆ. ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 4 ವಿಕೆಟ್ ಜಯ ಗಳಿಸಿದೆ. ಈ ಪಂದ್ಯಗೊಂದಿಗೆ ಇತ್ತಂಡಗಳ ನಡುವಣ ಐದು ಪಂದ್ಯಗಳ ಏಕದಿನ ಸರಣಿ 2-2ರಿಂದ ಸಮಬಲಗೊಂಡಿದೆ.

ಭಾರತಕ್ಕೆ ಶಿಖರ್ ಧವನ್ ನೀಡಿದ್ದ ಶತಕದ ಬೆಂಬಲವನ್ನು ಆಸ್ಟ್ರೇಲಿಯಾದ ಆಷ್ಟನ್ ಟರ್ನರ್, ಪೀಟರ್ ಹ್ಯಾಂಡ್ಸ್ ಕಾಂಬ್ ಮತ್ತು ಉಸ್ಮಾನ್ ಖವಾಜಾ ವ್ಯರ್ಥಗೊಳಿಸಿದರು. 50 ಓವರ್‌ಗೆ 9 ವಿಕೆಟ್ ಕಳೆದು ಭಾರತ ನೀಡಿದ್ದ 359 ರನ್ ಗುರಿಯನ್ನು ಆಸ್ಟ್ರೇಲಿಯಾ 47.5 ಓವರ್‌ನಲ್ಲಿ 6 ವಿಕೆಟ್ ನಷ್ಟದಲ್ಲಿ 359 ರನ್ ಪೇರಿಸುವುದರೊಂದಿಗೆ ತಲುಪಿತು.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
45588

ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಅವರ ಭರ್ಜರಿ ಜೊತೆಯಾಟದ ಬೆಂಬಲ ದೊರೆಯಿತು. ಧವನ್ 143, ರೋಹಿತ್ 95 ರನ್ ಸೇರಿಸಿದರು. ಕೆಎಲ್ ರಾಹುಲ್ 26, ರಿಷಬ್ ಪಂತ್ 36, ವಿಜಯ್ ಶಂಕರ್ 26 ರನ್ ಕೊಡುಗೆಯೊಂದಿಗೆ ಭಾರತ 50 ಓವರ್‌ಗೆ 9 ವಿಕೆಟ್ ಕಳೆದು 358 ರನ್ ಗಳಿಸಿತ್ತು.

ಆದರೆ ಆಸ್ಟ್ರೇಲಿಯಾಕ್ಕೆ ಪೀಟರ್ ಹ್ಯಾಂಡ್ಸ್‌ಕಾಂಬ್ ಶತಕ, ಉಸ್ಮಾನ್ ಖವಾಜಾ ಅರ್ಧಶತಕದ ಬೆಂಬಲ ದೊರೆಯಿತು. ಹ್ಯಾಂಡ್ಸ್‌ಕಾಂಬ್ 117, ಉಸ್ಮಾನ್ ಖವಾಜಾ 91 ರನ್, ಗ್ಲೆನ್ ಮ್ಯಾಕ್ಸ್‌ವೆಲ್ 23 ಕೊಡುಗೆ ಕಾಂಗರೂ ಪಡೆಗೆ ಗೆಲುವಿನ ನೆಲೆಯಲ್ಲಿ ನೆರವಾಯ್ತು. ಭಾರತದ ಇನ್ನಿಂಗ್ಸ್‌ ವೇಳೆ ಪ್ಯಾಟ್ ಕಮಿನ್ಸ್ ಬರೋಬ್ಬರಿ 5, ಜಾಯ್ ರಿಚರ್ಡ್ಸನ್ 3 ವಿಕೆಟ್ ಕೆಡವಿದ್ದೂ ಆಸೀಸ್‌ಗೆ ಪ್ಲಸ್ ಪಾಯಿಂಟ್ ಎನಿಸಿತು.

ಮೊಹಾಲಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಈ ಹಿಂದೆ ನಾಲ್ಕು ಬಾರಿ ಮುಖಾಮುಖಿಯಾಗಿದ್ದವು. ಇದರಲ್ಲಿ ಭಾರತ ಗೆದ್ದಿದ್ದು ಒಂದೇಸಾರಿ. ಅದೂ 1996ರಲ್ಲಿ ನಡೆದಿದ್ದ ಪಂದ್ಯದಲ್ಲಿ. ದುರಾದೃಷ್ಟವೆಂದರೆ ಅನಂತರ 2006, 2009, 2013ರಲ್ಲಿ ನಡೆದ ಪಂದ್ಯಗಳಲ್ಲಿ ಭಾರತ ಮುಖಭಂಗವನ್ನೇ ಅನುಭವಿಸಿತ್ತು.

ಈ ಅನಗತ್ಯ ದಾಖಲೆಯನ್ನು ಇಂದು (ಮಾರ್ಚ್ 10) ಅಂತ್ಯಗೊಳಿಸುವ ಯೋಜನೆಯಲ್ಲಿ ಭಾರತ ಮೈದಾನಕ್ಕಿಳಿದಿತ್ತು. ಆದರೆ ಈ ಬಾರಿಯೂ ಭಾರತ ಸಫಲವಾಗಿಲ್ಲ. ಮೊಹಾಲಿಯಲ್ಲಿ ಭಾರತದ ಸೋಲಿನ ಕೆಟ್ಟ ದಾಖಲೆ ಮತ್ತೆ ಮುಂದುವರೆದಿದೆ. ಆಸೀಸ್ ಗೆಲುವಿಗೆ ಕಾರಣರಾದ ಆಷ್ಟನ್ ಟರ್ನರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಭಾರತ ತಂಡ: ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ಸಿ), ಲೋಕೇಶ್ ರಾಹುಲ್, ರಿಷಬ್ ಪಂತ್ (ವಿ.ಕೆ), ಕೇದಾರ ಜಾಧವ್, ವಿಜಯ್ ಶಂಕರ್, ಭುವನೇಶ್ವರ ಕುಮಾರ್, ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್, ಜಸ್‌ಪ್ರೀತ್‌ ಬೂಮ್ರಾ.

ಆಸ್ಟ್ರೇಲಿಯಾ: ಆ್ಯರನ್ ಫಿಂಚ್ (ಸಿ), ಉಸ್ಮಾನ್ ಖವಾಜಾ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್‌ಕಾಂಬ್, ಗ್ಲೆನ್ ಮ್ಯಾಕ್ಸ್‌ವೆಲ್, ಆಷ್ಟನ್ ಟರ್ನರ್, ಅಲೆಕ್ಸ್ ಕ್ಯಾರಿ (ವಿಕೆ), ಜೆಯೀ ರಿಚರ್ಡ್ಸನ್, ಪ್ಯಾಟ್ ಕಮ್ಮಿನ್ಸ್, ಜಾಸನ್ ಬೆಹೆರೆನ್ಡಾಫ್, ಆದಂ ಝಂಪಾ.

Story first published: Sunday, March 10, 2019, 22:28 [IST]
Other articles published on Mar 10, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+