ಭಾರತ vs ಆಸ್ಟ್ರೇಲಿಯಾ: 4ನೇ ಟೆಸ್ಟ್ ಬ್ರಿಸ್ಬೇನ್, 336 ರನ್ ಗಳಿಸಿ ಭಾರತ ಆಲೌಟ್, Live ಸ್ಕೋರ್

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಬ್ರಿಸ್ಬೇನ್‌ನಲ್ಲಿ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ರೋಚಕ ಹಂತವನ್ನು ತಲುಪಿದೆ. ಆಸ್ಟ್ರೇಲಿಯಾ ತಂಡ ಗಳಿಸಿದ 369 ರನ್‌ಗಳಿಗೆ ಪ್ರತಿಯಾಗಿ ಭಾರತ 336 ರನ್ ಗಳಿಸಿದ್ದು 33 ರನ್‌ಗಳ ಅಲ್ಪ ಹಿನ್ನಡೆಯನ್ನು ಅನುಭವಿಸಿದೆ.
ಮೂರನೇ ದಿನದಾಟದಲ್ಲಿ ಭಾರತದ ಕೆಳ ಕ್ರಮಾಂಕದ ಆಟಗಾರರಾದ ವಾಶಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ಅದ್ಭುತ ಜೊತೆಯಾಟವನ್ನು ನೀಡುವ ಮೂಲಕ ಭಾರತ ಮುನ್ನೂರು ರನ್‌ಗಳ ಗಡಿ ದಾಟಲು ಕಾರಣರಾದರು. ಈ ಜೋಡಿ 7ನೇ ವಿಕೆಟ್‌ಗೆ 123 ರನ್‌ಗಳ ಜೊತೆಯಾಟವನ್ನು ನೀಡಿತು. ಅಂತಿಮವಾಗಿ ಭಾರತ 336 ರನ್ ಗಳಿಸಿ ಆಲೌಟ್ ಆಗಿದೆ.
ಎರಡನೇ ದಿನದಾಟದ ಬಹುತೇಕ ಭಾಗ ಮಳೆ ಆಹುತಿ ಪಡೆದಿತ್ತು. ಮೂರನೇ ದಿನದಲ್ಲಿ ಆಸ್ಟ್ರೇಲಿಯಾ ತಂಡವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದ್ದ ಭಾರತ ಬಳಿಕ ತನ್ನ ಇನ್ನಿಂಗ್ಸ್ ಆರಂಭಿಸಿತ್ತು. ಆರಂಭಿಕ ಇಬ್ಬರು ಆಟಗಾರರು ಆಸ್ಟ್ರೇಲಿಯಾ ಬೌಲರ್‌ಗಳಿಗೆ ವಿಕೆಟ್ ಒಪ್ಪಿಸಿದ್ದರು. ಎರಡನೇ ದಿನದಾಟದಲ್ಲೂ ಟೀಮ್ ಇಂಡಿಯಾ ಪ್ರಮುಖ ಮತ್ತೆರಡು ವಿಕೆಟ್ ಕಳೆದುಕೊಂಡಿದೆ. ಚೇತೇಶ್ವರ್ ಪೂಜಾರ ಹಾಗೂ ನಾಯಕ ಅಜಿಂಕ್ಯ ರಹಾನೆ ಭೋಜನ ವಿರಾಮಕ್ಕೂ ಮುನ್ನ ವಿಕೆಟ್ ಒಪ್ಪಿಸಿ ಹೊರನಡೆದಿದ್ದಾರೆ.
ಆಸ್ಟ್ರೇಲಿಯಾ ತಂಡ ಮೊದಲನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಲಾಬುಶೇನ್ ಶತಕದ ನೆರವಿನಿಂದ ಆಸ್ಟ್ರೇಲಿಯಾ 369 ರನ್‌ಗಳ ಗಳಿಸಿ ಆಲೌಟ್ ಆಗಿದೆ. ಆಸಿಸ್ ತಂಡದ ಪರವಾಗಿ ಮರ್ಸ್ ಲಾಬುಶೇನ್ 108 ರನ್ ಗಳಿಸಿದರೆ ನಾಯಕ ಟಿಮ್ ಪೈನ್ 50, ಮ್ಯಾಥ್ಯೂ ವೇಡ್ 45, ಕ್ಯಾಮರೂನ್ ವೇಡ್ 47 ರನ್‌ಗಳ ಕೊಡುಗೆಯನ್ನು ನೀಡಿದ್ದಾರೆ.
Live ಸ್ಕೋರ್ ಪಟ್ಟಿ ಹೀಗಿದೆ:
ಆಸ್ಟ್ರೇಲಿಯಾ ಆಡುವ ಬಳಗ: ಮಾರ್ಕಸ್ ಹ್ಯಾರಿಸ್, ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಮ್ಯಾಥ್ಯೂ ವೇಡ್, ಕ್ಯಾಮರೂನ್ ಗ್ರೀನ್, ಟಿಮ್ ಪೈನ್(ನಾಯಕ/ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಜಲ್‌ವುಡ್.
ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ನಾಯಕ), ಮಾಯಾಂಕ್ ಅಗರ್ವಾಲ್, ರಿಷಭ್ ಪಂತ್ (ವಿಕೆಟದ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್, ಟಿ ನಟರಾಜನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications