Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾಕ್ಕೆ ಶರಣೆಂದ ಭಾರತ, ಕಾಂಗರೂ ಪಡೆಗೆ ಏಕದಿನ ಸರಣಿ

India vs Australia, 5th ODI Live Cricket Score, Delhi

ನವದೆಹಲಿ, ಮಾರ್ಚ್ 13: ನವದೆಹಲಿಯ ಫಿರೋಜ್ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ಬುಧವಾರ (ಮಾರ್ಚ್ 13) ನಡೆದ ಭಾರತ vs ಆಸ್ಟ್ರೇಲಿಯಾ ತಂಡಗಳ ನಡುವಣ 5ನೇ ಮತ್ತು ಅಂತಿಮ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ 35 ರನ್ ಸೋಲನುಭವಿಸಿದೆ. ಬ್ಯಾಟಿಂಗ್ ವಿಭಾಗದ ನಿರ್ಲಕ್ಷ್ಯಕ್ಕೆ ಭಾರತ ಸೋಲಿನ ಮುಖಭಂಗ ಅನುಭವಿಸಿತಲ್ಲದೆ, ಏಕದಿನ ಸರಣಿಯನ್ನು 3-2ರಿಂದ ಪ್ರವಾಸಿಗರಿಗೆ ಬಿಟ್ಟುಕೊಟ್ಟಿದೆ.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

1
45589

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾಕ್ಕೆ ಉತ್ತಮ ಆರಂಭ ಲಭಿಸಿತು. ನಾಯಕ ಆ್ಯರನ್ ಫಿಂಚ್ (27) ವಿಕೆಟ್ ಉರುಳುವಾಗ ತಂಡದ ಖಾತೆಯಲ್ಲಿ 76 ರನ್ ಇತ್ತು. ಖವಾಜಾ 100, ಹ್ಯಾಂಡ್ಸ್‌ಕಾಂಬ್ 52, ಮಾರ್ಕಸ್ ಸ್ಟೋಯ್ನಿಸ್ ಮತ್ತು ಆ್ಯಷ್ಟನ್ ಟರ್ನರ್ ತಲಾ 20, ಜಾಯೆ ರಿಚರ್ಡ್ಸನ್ 29 ರನ್ ಕೊಡುಗೆ ನೀಡಿದರು.

ಹೀಗಾಗಿ ಆಸೀಸ್ ಆಸೀಸ್ 50 ಓವರ್‌ಗೆ 9 ವಿಕೆಟ್ ಕಳೆದು 272 ರನ್ ಬಾರಿಸಿತು. ಎದುರಾಳಿ ನೀಡಿದ 273 ರನ್ ಗುರಿ ಬೆನ್ನತ್ತಿದ ಭಾರತ, ರೋಹಿತ್ ಶರ್ಮಾ ಅರ್ಧಶತಕದ ಹೊರತಾಗಿಯೂ 50 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 237 ರನ್ ಗಳಿಸಲಷ್ಟೇ ಶಕ್ತವಾಯಿತು.

ಭಾರತದ ಇನ್ನಿಂಗ್ಸ್‌ ವೇಳೆ ಉಪನಾಯಕ ಶರ್ಮಾ 56, ಕೇದಾರ್ ಜಾಧವ್ 44, ಭುವನೇಶ್ವರ್ ಕುಮಾರ್ 46 ರನ್ ವೈಯಕ್ತಿಕ ಅತ್ಯಧಿಕ ರನ್ ಆಗಿ ಗುರುತಿಸಿಕೊಂಡಿತು. ಅದು ಬಿಟ್ಟರೆ ವಿರಾಟ್ ಕೊಹ್ಲಿಯ 20 ರನ್ ದೊಡ್ಡದೆನಿಸಿತು. ಆಸೀಸ್ ಪರ ಆದಂ ಜಂಪಾ 3, ಪ್ಯಾಟ್ ಕಮಿನ್ಸ್, ಜಾಯೆ ರಿಚರ್ಡ್ಸನ್ ಮತ್ತು ಮಾರ್ಕಸ್ ಸ್ಟೋಯ್ನಿಸ್ ತಲಾ 2 ವಿಕೆಟ್‌ನೊಂದಿಗೆ ಮಿಂಚಿದರು.

ಆಸೀಸ್ ಇನ್ನಿಂಗ್ಸ್‌ ವೇಳೆ ಭಾರತ ಪರ ಭುವನೇಶ್ವರ್ ಕುಮಾರ್ 3, ಮೊಹಮ್ಮದ್ ಶಮಿ ಮತ್ತು ರವೀಂದ್ರ ಜಡೇಜಾ ತಲಾ 2, ಕುಲದೀಪ್ ಯಾದವ್ 1 ವಿಕೆಟ್ ಪಡೆದು ಎದುರಾಳಿಯ ರನ್ ಕದಿಯುವಿಕೆಗೆ ಬ್ರೇಕ್ ಹಾಕಿದರಾದರೂ ಅದು ಗೆಲುವಿನ ನೆಲೆಯಲ್ಲಿ ಕೆಲಸಕ್ಕೆ ಬರಲಿಲ್ಲ. ಪಂದ್ಯಶ್ರೇಷ್ಠ, ಸರಣಿ ಶ್ರೇಷ್ಠ ಎರಡೂ ಪ್ರಶಸ್ತಿ ಆಸೀಸ್‌ ಬ್ಯಾಟ್ಸ್ಮನ್ ಉಸ್ಮಾನ್ ಖವಾಜಾ ಅವರಿಗೊಲಿಯಿತು.

ಭಾರತ ತಂಡ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ಸಿ), ರಿಷಬ್ ಪಂತ್ (ವಿ.ಕೆ), ಕೇದಾರ್ ಜಾಧವ್, ವಿಜಯ್ ಶಂಕರ್, ರವೀಂದ್ರ ಜಡೇಜಾ, ಭುವನೇಶ್ವರ ಕುಮಾರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ.

ಆಸ್ಟ್ರೇಲಿಯಾ ತಂಡ: ಆ್ಯರನ್ ಫಿಂಚ್ (ಸಿ), ಉಸ್ಮಾನ್ ಖವಾಜಾ, ಪೀಟರ್ ಹ್ಯಾಂಡ್ಸ್‌ಕಾಂಬ್, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್ವೆಲ್, ಆಷ್ಟನ್ ಟರ್ನರ್, ಅಲೆಕ್ಸ್ ಕ್ಯಾರಿ (ವಿಕೆ), ಜೆಯೀ ರಿಚರ್ಡ್ಸನ್, ಪ್ಯಾಟ್ ಕಮ್ಮಿನ್ಸ್, ಆಡಮ್ ಜಂಪಾ, ನಾಥನ್ ಲಿಯಾನ್.

Story first published: Wednesday, March 13, 2019, 21:57 [IST]
Other articles published on Mar 13, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+