Bangalore Weather Report: ಎಂ ಚಿನ್ನಸ್ವಾಮಿಯಲ್ಲಿ 5ನೇ ಟಿ20 ಪಂದ್ಯ, ಸಂಭಾವ್ಯ ಆಡುವ ಬಳಗ; ಬೆಂಗಳೂರು ಹವಾಮಾನ ವರದಿ ಏನಿದೆ?
ಭಾನುವಾರ, ಡಿಸೆಂಬರ್ 3ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ 5ನೇ ಟಿ20 ಪಂದ್ಯದಲ್ಲಿ ಆತಿಥೇಯ ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ.
ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು ಸರಣಿಯನ್ನು ಈಗಾಗಲೇ 3-1 ಅಂತರದಲ್ಲಿ ಭದ್ರಪಡಿಸಿಕೊಂಡರೂ, ಹವಾಮಾನವು ಅನುಮತಿಸಿದರೆ ಉಭಯ ತಂಡಗಳು ತಮ್ಮ ಬೆಂಚ್ ಬಲವನ್ನು ಸಾಬೀತುಪಡಿಸುವ ಗುರಿಯನ್ನು ಹೊಂದಿವೆ.
ರಾಯ್‌ಪುರದಲ್ಲಿ ಬ್ಯಾಟ್ ಮತ್ತು ಬಾಲ್‌ನೊಂದಿಗೆ ಭಾರತ ತಂಡದ ಸಮಗ್ರ ಪ್ರದರ್ಶನದಿಂದ ಗೆಲುವು ಸಾಧಸಿತು ಮತ್ತು ಅಂತಿಮ ಹಣಾಹಣಿಗೆ ವೇದಿಕೆಯನ್ನು ಸಿದ್ಧಪಡಿಸಿತು. ಆದರೆ, ಬೆಂಗಳೂರಿನಲ್ಲಿ ನಡೆಯುವ ಅಂತಿಮ ಟಿ20 ಪಂದ್ಯಕ್ಕೆ ಮಳೆ ಅವಕಾಶ ನೀಡಬೇಕಿದೆ.

ಅಕ್ಷರ್ ಪಟೇಲ್ ಮತ್ತು ರಿಂಕು ಸಿಂಗ್ ಭಾರತದ 20 ರನ್‌ಗಳ ಗೆಲುವಿನಲ್ಲಿ ಮಿಂಚಿದ್ದು, ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. 4-1 ಮುನ್ನಡೆ ಸಾಧಿಸಲು ಎದುರು ನೋಡುತ್ತಿರುವ ಭಾರತ, ಮತ್ತಷ್ಟು ಪ್ರಾಬಲ್ಯ ಪ್ರದರ್ಶಿಸುವ ಗುರಿ ಹೊಂದಿದೆ.
2024ರ ಟಿ20 ವಿಶ್ವಕಪ್ ಪಂದ್ಯಾವಳಿಗೂ ಮುನ್ನ ಭಾರತ ತಂಡಕ್ಕೆ ಕೇವಲ ಆರು ಟಿ20 ಪಂದ್ಯಗಳು ಉಳಿದಿವೆ. ಪ್ರತಿ ಪಂದ್ಯವು ಅಪಾರ ಮಹತ್ವವನ್ನು ಹೊಂದಿದೆ. ಮತ್ತೊಮ್ಮೆ, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರಮುಖ ಅಂತಿಮ ಪಂದ್ಯಕ್ಕಾಗಿ ಬೆಂಗಳೂರಿನ ಹವಾಮಾನದ ಮೇಲೆ ಎಲ್ಲರ ಗಮನ ನೆಟ್ಟಿದೆ.
ಭಾರತ vs ಆಸ್ಟ್ರೇಲಿಯಾ 5ನೇ ಟಿ20 ಪಂದ್ಯಕ್ಕೆ ಯಾವುದೇ ಮಳೆ ಬೆದರಿಕೆ ಇಲ್ಲ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದನೇ ಟಿ20 ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ನಿರೀಕ್ಷೆಯಿಲ್ಲದ ಕಾರಣ, ಪ್ರೇಕ್ಷಕರು ಸುಲಭವಾಗಿ ಹಾಜರಾಗಬಹುದು.

ಬೆಂಗಳೂರಿನಲ್ಲಿ ಡಿಸೆಂಬರ್ 3ರ ಹವಾಮಾನ ಮುನ್ಸೂಚನೆಯು 26 ಡಿಗ್ರಿಗಳಷ್ಟು ಸ್ಥಿರವಾದ ತಾಪಮಾನವನ್ನು ಸೂಚಿಸುತ್ತದೆ ಮತ್ತು ಭಾಗಶಃ ಮೋಡದ ಹೊದಿಕೆ ಮತ್ತು ಶೇ.72ರಷ್ಟು ಆರ್ದ್ರತೆ ಹೊಂದಿರಲಿದೆ.
ಭಾನುವಾರ ರಾತ್ರಿ 8-9 ಗಂಟೆಯ ನಡುವೆ ಅಲ್ಪಾವಧಿಯ ಮಳೆ ಬೀಳಬಹುದು. ಆದರೂ ಪಂದ್ಯ ರದ್ದುಪಡಿಸುವ ಅಪಾಯವನ್ನು ಹೊಂದಿಲ್ಲ. ಮಳೆಯಾಗುವ ಸಾಧ್ಯತೆ ಶೂನ್ಯವಾಗಿದ್ದು, ಗುಡುಗು ಸಹಿತ ಮಳೆಯಿಂದ ಚಿನ್ನಸ್ವಾಮಿ ಕ್ರೀಡಾಂಗಣದ ಕಲಾಪಕ್ಕೆ ಅಡ್ಡಿಯಾಗುವ ಸಾಧ್ಯತೆ ಇಲ್ಲ. ಮಳೆ ಬಂದರೂ, ನಿಂತ ಮೇಲೆ ಸಬ್ ಏರ್ ವ್ಯವಸ್ಥೆ ಇರುವ ಕಾರಣ, ಕೆಲವೇ ನಿಮಿಷಗಳಲ್ಲಿ ಆರಂಭವಾಗಲಿದೆ.
ಎಂ ಚಿನ್ನಸ್ವಾಮಿ ಪಿಚ್ ವರದಿ
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಪಿಚ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನವನ್ನು ಬೆಂಬಲಿಸುತ್ತದೆ. ಬ್ಯಾಟರ್‌ಗಳಿಗೆ ಪಿಚ್ ಸಹಾಯಕವಾಗಿದೆ. ಇದು ವೇಗದ ಬೌಲರ್‌ಗಳು ಮತ್ತು ಸ್ಪಿನ್ನರ್‌ಗಳಿಗೆ ಕಡಿಮೆ ಸಹಾಯವಾಗಲಿದೆ. ಆದರೂ, ಸಣ್ಣ ಬೌಂಡರಿ ಬೌಲರ್‌ಗಳಿಗೆ ನಿಜವಾದ ಸವಾಲು ಎದುರಾಗಲಿದೆ.
ಟಾಸ್ ಗೆದ್ದ ಬಳಿಕ ಚೇಸ್ ಮಾಡುವ ಆಯ್ಕೆಯನ್ನು ಪರಿಗಣಿಸಲು ಉಭಯ ತಂಡಗಳ ನಾಯಕರನ್ನು ಪ್ರೇರೇಪಿಸಲಿದೆ. ಪಿಚ್‌ನ ಸ್ವಭಾವ ಮತ್ತು ಸಣ್ಣ ಬೌಂಡರಿಗಳು ಚೇಸಿಂಗ್ ತಂಡಕ್ಕೆ ಅನುಕೂಲವನ್ನು ನೀಡಲಿದೆ.
ಭಾರತ vs ಆಸ್ಟ್ರೇಲಿಯಾ ತಂಡಗಳ ಸಂಭಾವ್ಯ 11ರ ಆಡುವ ಬಳಗ
ಭಾರತ: ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್(ನಾಯಕ), ಜಿತೇಶ್ ಶರ್ಮಾ(ವಿಕೆಟ್ ಕೀಪರ್), ರಿಂಕು ಸಿಂಗ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ದೀಪಕ್ ಚಹಾರ್, ಅವೇಶ್ ಖಾನ್, ಮುಖೇಶ್ ಕುಮಾರ್.
ಆಸ್ಟ್ರೇಲಿಯಾ: ಜೋಶ್ ಫಿಲಿಪ್, ಟ್ರಾವಿಸ್ ಹೆಡ್, ಬೆನ್ ಮೆಕ್‌ಡರ್ಮಾಟ್, ಆರನ್ ಹಾರ್ಡಿ, ಟಿಮ್ ಡೇವಿಡ್, ಮ್ಯಾಥ್ಯೂ ಶಾರ್ಟ್, ಮ್ಯಾಥ್ಯೂ ವೇಡ್(ನಾಯಕ/ ವಿಕೆಟ್ ಕೀಪರ್), ಬೆನ್ ದ್ವಾರ್ಶುಯಿಸ್, ಕ್ರಿಸ್ ಗ್ರೀನ್, ಜೇಸನ್ ಬೆಹ್ರೆನ್‌ಡಾರ್ಫ್, ತನ್ವೀರ್ ಸಂಘ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications