Rishabh Pant: ಸಿಡ್ನಿಯಲ್ಲಿ ರಿಷಭ್ ಪಂತ್‌ಗೆ ಗೇಟ್ ಪಾಸ್
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಆತಿಥೇಯ ತಂಡ 2-1 ರಿಂದ ಮುನ್ನಡೆ ಸಾಧಿಸುತ್ತಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳ ಹೀನಾಯ ಪ್ರದರ್ಶನ ಟೀಕೆಗೆ ಗುರಿಯಾಗುತ್ತಿದೆ. ಅದರಲ್ಲೂ ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಅವರ ಲೂಸ್ ಶಾಟ್‌ಗಳು, ಟೀಕೆಗೆ ಗುರಿಯಾಗುವಂತೆ ಮಾಡಿವೆ. ಹೀಗಾಗಿ ರಿಷಭ್ ಪಂತ್ ಅವರನ್ನು ತಂಡದಿಂದ ಕೈ ಬಿಡುವ ಮಾತುಗಳು ಕೇಳಿ ಬರುತ್ತಿವೆ.
ಗಾಯದ ಬಳಿಕ ತಂಡದಲ್ಲಿ ಸ್ಥಾನ ಪಡೆದ ರಿಷಭ್ ಪಂತ್, ಟಿ20 ವಿಶ್ವಕಪ್ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಅಲ್ಲದೆ ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿದ್ದರು. ಆದರೆ ತವರಿನಲ್ಲಿ ನಡೆದ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ರಿಷಭ್ ಪಂಥ್ ಅವರ ಲೂಸ್ ಶಾಟ್‌ಗಳು ಟೀಂ ಇಂಡಿಯಾಗೆ ಸಮಸ್ಯೆ ಹೆಚ್ಚಿಸುತ್ತಿವೆ. ಹೀಗಿರುವಾಗ ಈಗ ಸಿಡ್ನಿ ಟೆಸ್ಟ್‌ನಿಂದ ಪಂತ್ ಕೈಬಿಡಬಹುದು ಎಂಬ ಸುದ್ದಿ ಬರುತ್ತಿದೆ.

ಸರಣಿಯಲ್ಲಿ ಪಂತ್ ಸಾಧನೆ
ರಿಷಭ್ ಪಂತ್ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ರಿಷಭ್ ಪಂತ್ ಆಡಿದ 4 ಟೆಸ್ಟ್ ಪಂದ್ಯಗಳಲ್ಲಿ 22ರ ಸರಾಸರಿಯಲ್ಲಿ 154 ರನ್ ಸಿಡಿಸಿದ್ದಾರೆ. ಇದರಲ್ಲಿ ಒಂದೇ ಒಂದು ಅರ್ಧಶತಕ ಬಾರಿಸದೇ ಇರುವುದು ಚಿಂತೆಯ ಗೆರೆಗಳು ಮೂಡುವಂತೆ ಮಾಡಿವೆ. ಹೀಗಾಗಿ ಇವರ ಸ್ಥಾನದಲ್ಲಿ ಯುವ ಆಟಗಾರ ಧ್ರುವ್ ಜುರೇಲ್ ಅವರಿಗೆ ಅವಕಾಶ ಸಿಗುವ ಸಾಧ್ಯತೆಗಳು ಹೆಚ್ಚಾಗಿ ಕಂಡು ಬರುತ್ತಿವೆ.
ಜುರೆಲ್ ಗೆ ಅವಕಾಶ ?
ರಿಷಬ್ ಪಂತ್ ಅವರ ನಿರಾಶಾದಾಯಕ ಪ್ರದರ್ಶನದ ಬಳಿಕ ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧ್ರುವ ಜುರೆಲ್ ಅವರಿಗೆ ಸ್ಥಾನ ಸಿಗಬಹುದು ಎಂದು ಅಂದಾಜಿಸಲಾಗಿದೆ. ಇವರು ಭಾರತ "ಎ" ತಂಡದ ಪರ ಅನಧಿಕೃತ ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಅಲ್ಲದೆ ಈ ವೇಳೆ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು. ಇರಾನಿ ಟೂರ್ನಿಯಲ್ಲೂ ಮನಮೋಹಕ ಪ್ರದರ್ಶನ ನೀಡಿ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದರು. ಹೀಗಾಗಿ ರಿಷಭ್ ಪಂತ್ ಬದಲಿಗೆ ಧ್ರುವ್ ಜುರೇಲ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.

ದೇಶೀಯ ಟೂರ್ನಿಯಲ್ಲಿ ಧ್ರುವ್ ಸಾಧನೆ
ಧ್ರುವ್ ಜುರೆಲ್ ಅವರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಇವರು 22 ಪಂದ್ಯಗಳಲ್ಲಿ 45.74 ಸರಾಸರಿಯಲ್ಲಿ 1235 ರನ್ ಗಳಿಸಿದ್ದಾರೆ. ಜುರೆಲ್ ಭಾರತ ತಂಡದ ಪರ 6 ಇನ್ನಿಂಗ್ಸ್‌ಗಳಲ್ಲಿ 40.40 ಸರಾಸರಿಯಲ್ಲಿ 202 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಅರ್ಧಶತಕವೂ ಸೇರಿದೆ. ಈ ಎಲ್ಲ ಅಂಕಿ ಅಂಶಗಳನ್ನು ಗಮನಿಸಿದಾಗ ಜುರೇಲ್ ಅವರಿಗೆ ಅವಕಾಶ ಸಿಗಬಹುದು ಎಂಬ ಲೆಕ್ಕಾಚಾರ ಶುರವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications