ಭಾರತ ಎ vs ಆಸ್ಟ್ರೇಲಿಯಾ ಎ: 2ನೇ ಅಭ್ಯಾಸ ಪಂದ್ಯದ ಆರಂಭ, ನೇರಪ್ರಸಾರ ಸಂಪೂರ್ಣ ಮಾಹಿತಿ

ಭಾರತ ಹಾಗೂ ಆಸ್ಟ್ರೇಲಿಯಾ ಎ ತಂಡಗಳ ನಡುವಿನ ಎರಡನೇ ಅಭ್ಯಾಸ ಪಂದ್ಯ ಶುಕ್ರವಾರದಿಂದ ಆರಂಭವಾಗಲಿದೆ. ಮೂರು ದಿನಗಳ ಈ ಅಭ್ಯಾಸ ಪಂದ್ಯ ಹಲು ರಾತ್ರಿ ಪಂದ್ಯವಾಗಿರಲಿದೆ. ಹೀಗಾಗಿ ಭಾರತದಲ್ಲಿ ಬೆಳಗ್ಗೆ ಸರಿಯಾಗಿ 9:30 ರಿಂದ ಗಂಟೆಯಿಂದ ಈ ಪಂದ್ಯ ಆರಂಭವಾಗಲಿದೆ.
ಟೆಸ್ಟ್ ಸರಣಿಯ ಮೊದಲ ಪಂದ್ಯ ಅಡಿಲೇಡ್‌ನಲ್ಲಿ ಡಿಸೆಂಬರ್ 17ರಂದು ಹಗಲು ರಾತ್ರಿ ಪಂದ್ಯವಾಗಿ ನಡೆಯಲಿದೆ. ಅದಕ್ಕೂ ಮುನ್ನ ಪೂರ್ವಭಾವಿಯಾಗಿ ಪಿಂಕ್ ಬಾಲ್ ಅಭ್ಯಾಸ ಪಂದ್ಯವನ್ನು ಆಯೋಜಿಸಲಾಗಿದೆ. ಟೀಮ್ ಇಂಡಿಯಾಗೆ ಇದು ಕೇವಲ ಎರಡನೇ ಪಿಂಕ್ ಬಾಲ್ ಪಂದ್ಯವಾಗಿದ್ದು ವಿದೇಶದಲ್ಲಿ ಆಡುತ್ತಿರುವ ಮೊದಲ ಪಂದ್ಯವೆನಿಸಲಿದೆ.
ಕ್ರಿಕೆಟ್ ಆಸ್ಟ್ರೇಲಿಯಾ 12 ಆಟಗಾರರ ಆಸ್ಟ್ರೇಲಿಯಾ ಎ ತಂಡವನ್ನು ಬುಧವಾರ ಹೆಸರಿಸಿದ್ದು ಅಲೆಕ್ಸ್ ಕ್ಯಾರಿ ಈ ತಂಡವನ್ನು ಮುನ್ನಡೆಸಲಿದ್ದಾರೆ. ಆಸ್ಟ್ರೇಲಿಯಾದ ಯಾವುದೇ ಸ್ಟಾರ್ ಆಟಗಾರರು ಈ ಅಭ್ಯಾಸ ಪಂದ್ಯದಲ್ಲಿ ಆಡುತ್ತಿಲ್ಲ. ಮೊದಲ ಅಭ್ಯಾಸ ಪಂದ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ಟಿ20 ಸರಣಿ ನಡೆಯುತ್ತಿತ್ತು. ಇದರಲ್ಲಿ ಭಾರತ ಎ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಿದ್ದರು.
ಭಾರತ ಹಾಗೂ ಆಸ್ಟ್ರೇಲಿಯಾ ಎ ತಂಡಗಳ ನಡುವಿನ ಈ ಅಭ್ಯಾಸ ಪಂದ್ಯ ಸೋನಿ ಸಿಕ್ಸ್‌ನಲ್ಲಿ ನೇರಪ್ರಸಾರವಾಗಲಿದೆ. ಭಾರತೀಯ ಕಾಲಮಾನ 9:30ಕ್ಕೆ ಪಂದ್ಯ ಆರಂಭವಾಗಲಿದ್ದು 9 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಈ ಪಂದ್ಯ ಸಿಡ್ನಿಯ ಸೆಡಾನ್ ಡ್ರೆಮಾಯ್ನೆ ಓವಲ್‌ನಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications