ರಿಷಬ್ ಶೆಟ್ಟಿಯ 'ಬೆಲ್ ಬಾಟಂ'ನಂತೆ ಕ್ರಿಕೆಟ್ ಆಸ್ಟ್ರೇಲಿಯಾ ಹಳೆ ವೇಷ!


ಸಿಡ್ನಿ, ಜನವರಿ 10: ನಟ, ನಿರ್ದೇಶಕ ರಿಷಬ್ ಶೆಟ್ಟಿಯವರ 'ಬೆಲ್ ಬಾಟಮ್' ವಿಭಿನ್ನ ಕನ್ನಡ ಸಿನಿಮಾ ತೆರೆ ಕಾಣುವುದರಲ್ಲಿದೆ. ಇಂಥದ್ದೇ ವಿಭಿನ್ನ ಪ್ರಯೋಗಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಕೈ ಹಾಕಿದೆ. ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಶನಿವಾರ (ಜನವರಿ 12) ನಡೆಯುವ ಭಾರತ-ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯದ ವೇಳೆ ಆಸೀಸ್ ತಂಡ ಹಳೆ ದಿರಿಸಿನೊಂದಿಗೆ ಮೈದಾನಕ್ಕಿಳಿಯಲಿದೆ.
ಹಳೆ ಕಾಲದ ಗೀತೆಗಳು ಕೇಳೋಕೆ ಇಂಪು. ಹಳೆ ಕಾಲದ ದಿರಿಸೂ ನಮ್ಮನ್ನು ಆ ಕಾಲಕ್ಕೆ ಕೊಂಡೊಯ್ಯಬಲ್ಲದಲ್ಲವೆ? ಅಟ್ ಲೀಸ್ಟ್ ಹಳೆ ಕಾಲವನ್ನು ನೆನಪಿಸಬಹುದಲ್ಲವೆ? ಆ್ಯರನ್ ಫಿಂಚ್ ಬಳಗ ಶನಿವಾರದ ಏಕದಿನದಲ್ಲಿ 1986ರ ಏಕದಿನ ಸರಣಿಯ ವೇಳೆ ಅಲನ್ ಬಾರ್ಡರ್ ಮತ್ತು ತಂಡ ಧರಿಸಿದ್ದ ಜೆರ್ಸಿ ಮಾದರಿಯನ್ನು ಧರಿಸುವುದರಲ್ಲಿದೆ.
ಆಸೀಸ್ ಏಕದಿನ ತಂಡದಲ್ಲಿ ಸೇರ್ಪಡೆಗೊಂಡಿರುವ ವೇಗಿ ಪೀಟರ್ ಸಿಡ್ಲ್ ಕ್ರಿಕೆಟ್ ಡಾಟ್ ಕಾಮ್ ಡಾಟ್ ಯು ಜೊತೆ ಮಾತನಾಡಿ, 'ನಾವು ನಮ್ಮ ನೆನ್ನೆಯ ಹೀರೋಗಳನ್ನು ನೆನಪಿಸುವ ದಿರಿಸು ಧರಿಸುವುದರಲ್ಲಿದ್ದೇವೆ. ಇದನ್ನು ಧರಿಸಲು ಕಾತುರರಾಗಿದ್ದೇವೆ ಕೂಡ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ತಂಡ: ಆ್ಯರನ್ ಫಿಂಚ್ (ಸಿ), ಜಾಸನ್ ಬೆಹ್ರೆಂಡ್ರಾಫ್, ಅಲೆಕ್ಸ್ ಕ್ಯಾರಿ (ವಿ.ಕೆ.), ಪೀಟರ್ ಹ್ಯಾಂಡ್ಸ್ಕಾಂಬ್, ಉಸ್ಮಾನ್ ಖವಾಜಾ, ನಾಥನ್ ಲಿಯಾನ್, ಮಿಚ್ ಮಾರ್ಷ್, ಶಾನ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಜೀಯೆ ರಿಚರ್ಡ್ಸನ್, ಪೀಟರ್ ಸಿಡಿಲ್, ಬಿಲ್ಲಿ ಸ್ಟ್ಯಾನ್ಲೇಕ್, ಮಾರ್ಕಸ್ ಸ್ಟೋಯಿನ್ಸ್, ಆಷ್ಟನ್ ಟರ್ನರ್, ಆ್ಯಡಮ್ ಜಂಪಾ.
ಭಾರತ: ವಿರಾಟ್ ಕೊಹ್ಲಿ (ಸಿ), ರೋಹಿತ್ ಶರ್ಮಾ (ವಿಸಿ), ಶಿಖರ್ ಧವನ್, ಅಂಬಾಟಿ ರಾಯುಡು, ದಿನೇಶ್ ಕಾರ್ತಿಕ್, ಕೇದಾರ ಜಾಧವ್, ಎಂಎಸ್ ಧೋನಿ (ವಿಕೆ), ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್, ರವೀಂದ್ರ ಜಡೇಜಾ, ಭುವನೇಶ್ವರ ಕುಮಾರ್, ಖಲೀಲ್ ಅಹ್ಮದ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications