Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ಸರಣಿಯಲ್ಲಿ ಭಾಗಿಯಾಗಲು ಭಾರತಕ್ಕೆ ಪ್ರಯಾಣ ಬೆಳೆಸಿದ ಆಸಿಸ್ ಪಡೆ

India vs Australia: Aaron Finch squad gearing up for big series ahead of T20 WC

ಟಿ20 ವಿಶ್ವಕಪ್‌ಗೆ ಮುನ್ನ ಭಾರತದ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನಾಡಲಿದೆ ಆಸ್ಟ್ರೇಲಿಯಾ ತಂಡ. ಈ ಹಿನ್ನೆಲೆಯಲ್ಲಿ ಆರೋನ್ ಫಿಂಚ್ ನೇತೃತ್ವದ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಪ್ರಯಾಣ ಬೆಳೆಸಿದೆ. ಈ ಬಗ್ಗೆ ಆಸಿಸ್ ತಂಡದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಪ್ಟೆಂಬರ್ 20ರಿಂದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಕಾದಾಟ ನಡೆಸಲಿದೆ. ವಿಶ್ವಕಪ್‌ಗೂ ಮುನ್ನ ಎರಡು ತಂಡಗಳಿಗೂ ಇದು ಅಂತಿಮ ಹಂತದ ಸಿದ್ಧತೆಯಾಗಿರಲಿದೆ. ಆರೋನ್ ಫಿಂಚ್ ನೇತೃತ್ವದ ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧ ಕಣಕ್ಕಿಳಿಯಲಿ ಸಜ್ಜಾಗಿದೆ.

ಸರಣಿಯ ಮೊದಲ ಪಂದ್ಯ ಸೆಪ್ಟೆಂಬರ್ 20 ರಂದು ಮೊಹಾಲಿಯಲ್ಲಿ ನಡೆಯಲಿದ್ದು ನಂತರ ಎರಡನೇ ಪಂದ್ಯ ನಾಗ್ಪುರದಲ್ಲಿ ಸೆಪ್ಟೆಂಬರ್ 23 ರಂದು ಆಯೋಜನೆಯಾಗಲಿದೆ. ಈ ಸರಣಿಯ ಅಂತಿಮ ಪಂದ್ಯ ಸೆಪ್ಟೆಂಬರ್ 25 ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ.

ತವರು ನೆಲದಲ್ಲಿ ನಡೆದ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 3-0 ಅಂತರದಲ್ಲಿ ಜಯ ಸಾಧಿಸಿದ ಬಳಿಕ ಆಸ್ಟ್ರೇಲಿಯಾ ತಂಡ ಇದೀಗ ಭಾರತ ಪ್ರವಾಸ ಕೈಗೊಂಡಿದೆ. ಆದರೆ ಈ ಪ್ರವಾಸದಲ್ಲಿ ಪ್ರಮುಖ ಆಟಗಾರರಾದ ಮಿಚೆಲ್ ಸ್ಟಾರ್ಕ್, ಮಿಚೆಲ್ ಮಾರ್ಷ್ ಮತ್ತು ಮಾರ್ಕಸ್ ಸ್ಟೊಯ್ನಿಸ್ ಅವರ ಸೇವೆಯಿಂದ ವಂಚಿತವಾಗಲಿದೆ. ಇನ್ನು ಇತ್ತೀಚೆಗಷ್ಟೇ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಆರೋನ್ ಫಿಂಚ್ಟಿ20ಐ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದ ನಾಯಕತ್ವ ವಹಿಸಲಿದ್ದಾರೆ.

ಮತ್ತೊಂದೆಡೆ ಭಾರತ ತಂಡ ಏಷ್ಯಾ ಕಪ್‌ನಲ್ಲಿ ಹಿನ್ನಡೆ ಅನುಭವಿಸಿದ ಬಳಿಕ ಬೌಲರ್‌ಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಹರ್ಷಲ್ ಪಟೇಲ್ ತಂಡಕ್ಕೆ ಸೇರಿಕೊಂಡಿದ್ದಾರೆ. ಹೀಗಾಗಿ ಬಲಿಷ್ಠವಾಗಿ ಈ ಸರಣಿಗೆ ಸಿದ್ಧವಾಗುತ್ತಿದೆ. ಈ ಸರಣಿಯ ಮೂಲಕ ಎಲ್ಲಾ ಆಟಗಾರರು ತಮ್ಮ ಲಯವನ್ನು ಕಾಯ್ದುಕೊಳ್ಳಳು ಪ್ರಯತ್ನಿಸಲಿದ್ದು ಈ ಮೂಲಕ ವಿಶ್ವಕಪ್‌ಗೆ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯುವ ವಿಶ್ವಾಸದಲ್ಲಿದೆ.

ಟಿ20 ಮಾದರಿಯಲ್ಲಿ ಆಸ್ಟ್ರೇಲಿಯಾ ತಂಡ ಪ್ರಸ್ತುತ ವಿಶ್ವದಲ್ಲಿ 6 ನೇ ಸ್ಥಾನದಲ್ಲಿದ್ದು ಭಾರತವು ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ಎರಡು ತಂಡಗಳು ಕೂಡ ಬಲಿಷ್ಠ ಆಟಗಾರರನ್ನು ಹೊಂದಿದ್ದು ತೀವ್ರ ಪೈಪೋಟಿಯನ್ನು ಈ ಸರಣಿಯಲ್ಲಿ ನಿರೀಕ್ಷಿಸಲಾಗುತ್ತದೆ. ಸರಣಿಯ ಮೊದಲ ಪಂದ್ಯ ಸೆಪ್ಟೆಂಬರ್ 20 ಮಂಗಳವಾರ ಮೊಹಾಲಿಯಲ್ಲಿ ನಡೆಯಲಿದೆ.

ಜಿಂಬಾಬ್ವೆ ಮತ್ತು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಸಂದರ್ಭದಲ್ಲಿ ಸರಣಿಯ ಸಂದರ್ಭದಲ್ಲಿ ಮಾರ್ಷ್ ಮತ್ತು ಸ್ಟೊಯಿನಿಸ್ ಗಾಯಗೊಂಡಿದ್ದರು. ಮೊಣಕಾಲಿನ ಗಾಯಕ್ಕೆ ತುತ್ತಾಗಿರುವ ಸ್ಕ್ಯಾನ್ ನಡೆಸಿದ ನಂತರ ಸ್ಟಾರ್ಕ್ ಪ್ರವಾಸದಿಂದ ಹಿಂದೆ ಸರಿದಿದ್ದಾರೆ.

Story first published: Thursday, September 15, 2022, 20:25 [IST]
Other articles published on Sep 15, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+