For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ಕೆಟ್ಟ ದಾಖಲೆಗೆ ಕಾರಣರಾದ ವಿರಾಟ್ ಕೊಹ್ಲಿ!

India vs Australia: Adam Zampa gets Virat Kohli again

ರಾಜ್‌ಕೋಟ್‌, ಜನವರಿ 17: ಪ್ರತಿ ಪಂದ್ಯದಲ್ಲೂ ಒಂದಿಲ್ಲೊಂದು ಪಾಸಿಟಿವ್ ದಾಖಲೆಗಳನ್ನು ನಿರ್ಮಿಸುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಗೊಮ್ಮೆ ಈಗೊಮ್ಮೆ ನೆಗೆಟಿವ್ ದಾಖಲೆಗಳಿಗೂ ಕಾರಣರಾಗಿದ್ದಿದೆ. ಶುಕ್ರವಾರ (ಜನವರಿ 17) ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲೂ ಕೊಹ್ಲಿ ಬೇಡದ ದಾಖಲೆಯೊಂದಕ್ಕೆ ಕಾರಣರಾಗಿದ್ದಾರೆ.

ಗುಜರಾತ್‌ನ ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ದ್ವಿತೀಯ ಏಕದಿನ ಪಂದ್ಯದಲ್ಲಿ ಕೊಹ್ಲಿ 78 ರನ್‌ ಬಾರಿಸಿ ಆಸ್ಟ್ರೇಲಿಯಾ ಲೆಗ್‌ ಸ್ಪಿನ್ನರ್ ಆ್ಯಡಂ ಜಂಪಾಗೆ ವಿಕೆಟ್ ಒಪ್ಪಿಸಿದರು.

ಭಾರತ vs ಆಸ್ಟ್ರೇಲಿಯಾ, 2ನೇ ಏಕದಿನ, Live ಸ್ಕೋರ್‌ಕಾರ್ಡ್

1
46131

ವಿಶೇಷವೆಂದರೆ ಕೊಹ್ಲಿ, ಜಂಪಾಗೆ ವಿಕೆಟ್‌ ನೀಡಿದ್ದು ಇದೇ ಮೊದಲಲ್ಲ. ಇದಕ್ಕೂ ಹಿಂದಿನ ಪಂದ್ಯಗಳಲ್ಲೂ ಜಂಪಾ, ಕೊಹ್ಲಿಯ ವಿಕೆಟ್‌ ಮುರಿದು ಕಾಡಿದ್ದರು.

ಆಸ್ಟ್ರೇಲಿಯಾದ ಯಶಸ್ವಿ ಬೌಲರ್

ಆಸ್ಟ್ರೇಲಿಯಾದ ಯಶಸ್ವಿ ಬೌಲರ್

ಭಾರತದ ನಾಯಕ ವಿರಾಟ್ ಕೊಹ್ಲಿಯನ್ನು ಹೆಚ್ಚು ಬಾರಿ ಔಟ್ ಮಾಡಿದ ದಾಖಲೆಗೆ ಆ್ಯಡಂ ಜಂಪಾ ಕಾರಣರಾಗಿದ್ದಾರೆ. ರಾಜ್‌ಕೋಟ್‌ನಲ್ಲಿ 76 ಎಸೆತಗಳಿಗೆ 78 ರನ್ ಬಾರಿಸಿದ್ದ ಕೊಹ್ಲಿ, 43.1ನೇ ಓವರ್‌ನಲ್ಲಿ ಜಂಪಾ ಎಸೆತಕ್ಕೆ ಮಿಚೆಲ್ ಸ್ಟಾರ್ಕ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.

ಕೊಹ್ಲಿ ಪಾಲಿಗೆ ಅಪಾಯಕಾರಿ ಬೌಲರ್

ಕೊಹ್ಲಿ ಪಾಲಿಗೆ ಅಪಾಯಕಾರಿ ಬೌಲರ್

ಆಸ್ಟ್ರೇಲಿಯಾ ತಂಡದಲ್ಲಿ ಸದ್ಯ ಕೊಹ್ಲಿ ಪಾಲಿಗೆ ಅಪಾಯಕಾರಿ ಬೌಲರ್ ಅಂದರೆ ಅದು ಆ್ಯಡಂ ಜಂಪಾ. ಕೊಹ್ಲಿ ವಿಕೆಟ್‌ ಮುರಿಯೋ ಬೌಲರ್ ಸಹಜವಾಗೇ ಕ್ರಿಕೆಟ್‌ ಅಭಿಮಾನಿಗಳ ಲಕ್ಷ್ಯ ಸೆಳೆಯುತ್ತಾರೆ. ಅಂಥದ್ದರಲ್ಲಿ ಜಂಪಾ ಇಲ್ಲೀವರೆಗೆ ಏಕದಿನದಲ್ಲಿ ಒಟ್ಟು 5 ಬಾರಿ ಕೊಹ್ಲಿಯನ್ನು ಔಟ್ ಮಾಡಿದ್ದಾರೆ. ಗಮ್ಮತ್ತೆಂದರೆ ಮುಂಬೈನಲ್ಲಿ ನಡೆದಿದ್ದ ಆಸ್ಟ್ರೇಲಿಯಾ-ಭಾರತ ಮೊದಲ ಪಂದ್ಯದಲ್ಲೂ ಕೊಹ್ಲಿಯನ್ನು ಜಂಪಾ ಕೇವಲ 4 ರನ್‌ಗೆ ಪೆವಿಲಿಯನ್‌ಗಟ್ಟಿದ್ದರು.

ಕೊಹ್ಲಿ ಹೆಚ್ಚು ಬಾರಿ ಔಟಾಗಿದ್ದು

ಕೊಹ್ಲಿ ಹೆಚ್ಚು ಬಾರಿ ಔಟಾಗಿದ್ದು

ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿಯನ್ನು ಹೆಚ್ಚು ಸಾರಿ ಔಟ್ ಮಾಡಿದ ದಾಖಲೆ ಸಾಲಿನಲ್ಲಿ ಸದ್ಯ ವೆಸ್ಟ್‌ ಇಂಡೀಸ್‌ನ ರವಿ ರಾಮ್‌ಪೌಲ್ ಮೊದಲ ಸ್ಥಾನದಲ್ಲಿದ್ದಾರೆ. ರಾಮ್‌ಪೌಲ್‌ ಒಟ್ಟು 6 ಬಾರಿ ಕೊಹ್ಲಿಯ ವಿಕೆಟ್ ಪಡೆದಿದ್ದಾರೆ. ಇನ್ನು ಶ್ರೀಲಂಕಾದ ತಿಸೆರಾ ಪೆರೆರಾ ಮತ್ತು ನ್ಯೂಜಿಲೆಂಡ್‌ನ ಟಿಮ್ ಸೌಥೀ ಒಟ್ಟಿಗೆ 5 ಬಾರಿ (ಏಕದಿನದಲ್ಲಿ) ಕೊಹ್ಲಿ ವಿಕೆಟ್ ಮುರಿದ ದಾಖಲೆ ಹೊಂದಿದ್ದಾರೆ.

ಟಿ20ಯಲ್ಲಿ ಎಲ್ಲಾ ಉಲ್ಟಾ!

ಟಿ20ಯಲ್ಲಿ ಎಲ್ಲಾ ಉಲ್ಟಾ!

ಏಕದಿನದಲ್ಲಿ ಜಾಂಪಾ, ಕೊಹ್ಲಿ ಪಾಲಿಗೆ ಅಪಾಯಕಾರಿ ಬೌಲರ್ ಎನಿಸಿದರೆ, ಟಿ20ಐನಲ್ಲಿ ಕೊಹ್ಲಿ, ಜಂಪಾ ಪಾಲಿಗೆ ಡೇಂಜರಸ್ ಬ್ಯಾಟ್ಸ್‌ಮನ್ ಎನಿಸಿದ್ದಾರೆ. ಟಿ20ಐನಲ್ಲಿ ಜಂಪಾ ವಿರುದ್ಧ ಕೊಹ್ಲಿ 100ಕ್ಕೂ ಹೆಚ್ಚು ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಈ ಮಾದರಿಯಲ್ಲಿ ಕೊಹ್ಲಿ, ಜಂಪಾಗೆ ವಿಕೆಟ್ ಒಪ್ಪಿಸಿದ್ದು ಕೇವಲ 2 ಬಾರಿಯಷ್ಟೇ.

Story first published: Friday, January 17, 2020, 19:56 [IST]
Other articles published on Jan 17, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+