Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸೀಸ್‌ಗೆ ಮತ್ತೊಂದು ಗಾಯದ ಭೀತಿ, ಮೈದಾನ ತೊರೆದ ಆಲ್ ರೌಂಡರ್

India vs Australia: Another injury scare for Australia

ಸಿಡ್ನಿ: ಗಾಯದ ಸಮಸ್ಯೆಯಲ್ಲಿರುವ ಆಸ್ಟ್ರೇಲಿಯಾಕ್ಕೆ ಮತ್ತೊಂದು ಗಾಯದ ಭೀತಿ ಎದುರಾಗಿದೆ. ಆಸ್ಟ್ರೇಲಿಯಾ-ಭಾರತ ನಡುವಿನ ಅಭ್ಯಾಸ ಪಂದ್ಯದ ವೇಳೆ ಆಸ್ಟ್ರೇಲಿಯಾ ಆಲ್ ರೌಂಡರ್ ಸೀನ್ ಅಬಾಟ್ ಗಾಯಕ್ಕೀಡಾಗಿ ಮೈದಾನದಿಂದ ಹೊರ ನಡೆದಿದ್ದಾರೆ. ಶನಿವಾರದ ಪಂದ್ಯದಲ್ಲಿ ಹೊರ ನಡೆದ ಅಬಾಟ್ ಆ ಬಳಿಕ ಮೈದಾನಕ್ಕೆ ಬರಲೇಯಿಲ್ಲ.

ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಅಭ್ಯಾಸ ಪಂದ್ಯದ ಎರಡನೇ ದಿನದಾಟದ ವೇಳೆ ಮೊದಲ ಸೆಶನ್‌ನಲ್ಲಿ 7 ಓವರ್‌ ಎಸೆದಿದ್ದ ಸೀನ್ ಅಬಾಟ್, ಬಳಿಕ ವೈದ್ಯೋಪಚಾರಕ್ಕೆ ಒಳಗಾಗಿದ್ದು ಕಂಡುಬಂತು. ಅಬಾಟ್ ಅವರ ಎಡಗಾಲಿನ ಕಾಫ್ ಮಸಲ್ಸ್ ಗಾಯಕ್ಕೀಡಾಗಿದ್ದಾಗಿ ತಿಳಿದು ಬಂದಿದೆ.

ಭಾರತ ವಿರುದ್ಧದ ಟೆಸ್ಟ್‌ ಸರಣಿಗೂ ಮುನ್ನ ಆಸ್ಟ್ರೇಲಿಯಾ ಗಾಯದ ಸಮಸ್ಯೆ ಎದುರಿಸುತ್ತಿದೆ. ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಡೇವಿಡ್ ವಾರ್ನರ್ ಮತ್ತು ವಿಲ್ ಪುಕೊವ್ಸ್ಕಿ ಈಗಾಗಲೇ ತಂಡದಿಂದ ಹೊರಗಿದ್ದಾರೆ. ಏಕದಿನ ಸರಣಿ ವೇಳೆ ವಾರ್ನರ್ ಗಾಯಕ್ಕೀಡಾಗಿದ್ದರೆ, ಮೊದಲ ದಿನದ ಅಭ್ಯಾಸದ ವೇಳೆ ಪುಕೊವ್ಸ್ಕಿ ತಲೆಗೆ ಚೆಂಡು ಬಡಿದಿತ್ತು.

ಅಬಾಟ್ ಗಾಯದ ಬಗ್ಗೆ ಕ್ರಿಕೆಟ್ ಡಾಟ್ ಕಾಮ್ ಡಾಟ್ ಎಯು ಮಾಹಿತಿ ನೀಡಿದೆ. 'ಸೀನ್ ಅಬಾಟ್‌ಗೆ ಗಾಯದ ಭೀತಿ ಎದುರಾಗಿದೆ. ಅವರಿನ್ನು ಈ ದಿನ ಮತ್ತೆ ಬೌಲಿಂಗ್ ಮಾಡುತ್ತಿಲ್ಲ. ಅಗತ್ಯಬಿದ್ದರೆ, ನಾಳೆ ಬ್ಯಾಟಿಂಗ್ ಮಾಡುವ ನಿರೀಕ್ಷೆಯಿದೆ,' ಎಂದು ಅದು ಹೇಳಿದೆ.

Story first published: Saturday, December 12, 2020, 16:53 [IST]
Other articles published on Dec 12, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+