ನಿಂಗಿನ್ನೂ ಬೋರ್ ಅನ್ಸಿಲ್ವಾ?: ಸುಸ್ತಾದ ಲಿಯಾನ್, ಪೂಜಾರಗೆ ಪ್ರಶ್ನೆ!

ಸಿಡ್ನಿ, ಜನವರಿ 3: ಇಂಡಿಯನ್ ವಾಲ್-2 ಎಂದೇ ಕರೆಸಿಕೊಳ್ಳುತ್ತಿರುವ ಭಾರತದ ಚೇತೇಶ್ವರ ಪೂಜಾರ ಅವರಿಗೆ ಆಸ್ಟ್ರೇಲಿಯಾ ಬೌಲರ್ ನಾಥನ್ ಲಿಯಾನ್, ನಿಮಗೆ ಇನ್ನೂ ಬೋರಾಗಿಲ್ವ ಎಂದು ಪ್ರಶ್ನಿಸಿದ್ದಾರೆ. ಆಟದ ವೇಳೆ ದಾಖಲಾದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಗುರುವಾರ (ಜನವರಿ 3) ಆರಂಭವಾಗಿರುವ ಭಾರತ vs ಆಸ್ಟ್ರೇಲಿಯಾ 4ನೇ ಟೆಸ್ಟ್ ಪಂದ್ಯದ ವೇಳೆ ಈ ಗಮ್ಮತ್ತಿನ ವಿಡಿಯೋ ದಾಖಲಾಗಿದೆ. ಜಪ್ಪಯ್ಯ ಅಂದರೂ ವಿಕೆಟ್ ಒಪ್ಪಿಸದ ಪೂಜಾರ ಆಟದ ವೈಖರಿಗೆ ಸುಸ್ತಾದ ನಾಥನ್ ಪ್ರಶ್ನಿಸಿದ್ದು ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ನಗಿಸುತ್ತಲೂ ಇದೆ.
ನಾಲ್ಕು ಪಂದ್ಯಗಳ ಈ ಟೆಸ್ಟ್ ಸರಣಿಯಲ್ಲಿ ಪೂಜಾರ ಒಟ್ಟು 3 ಶತಕ ದಾಖಲಿಸಿದ್ದಾರೆ. 4ನೇ ಟೆಸ್ಟ್ ಮೊದಲ ಇನ್ನಿಂಗ್ಸ್‌ನಲ್ಲಿ 130 ರನ್ ಬಾರಿಸಿ ವಿಕೆಟ್ ಉಳಿಸಿಕೊಂಡಿರುವ ಚೇತೇಶ್ವರ 18ನೇ ಟೆಸ್ಟ್ ಶತಕ ಪೂರೈಸಿಕೊಂಡಿದ್ದಾರೆ. ಐಪಿಎಲ್ 2019ಕ್ಕೆ ಹರಾಜಾಗದೆ ಉಳಿದಿರುವ ಚೇತೇಶ್ವರ ಟೆಸ್ಟ್ ಕ್ರಿಕೆಟ್‌ಗಂತೂ ಅಪ್ಪಟ ಪ್ರತಿಭಾವಂತ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಪೂಜಾರ ಅವರ ಅಮೋಘ ಬ್ಯಾಟಿಂಗ್‌ಗೆ ಸುಸ್ತಾದ ಆಸೀಸ್ ಸ್ಪಿನ್ನರ್ ಲಿಯಾನ್, ಓವರ್ ಒಂದರ ವೇಳೆ 'ನಿಮಗೆ ಇನ್ನೂ ಬೋರ್ ಅನ್ನಿಸಿಲ್ವಾ?' ಎಂದು ಪ್ರಶ್ನಿಸಿದ್ದು ಸ್ಟಂಪ್ ಮೈಕ್ರೋಫ್ರೋನ್‌ನಲ್ಲಿ ದಾಖಲಾಗಿತ್ತು. ನಾಥನ್ ಛೇಡಿಕೆಗೆ ಪ್ರತ್ಯುತ್ತರವಾಗಿ ಪೂಜಾರ ಹಲ್ಲುಬಿಟ್ಟಿದ್ದ ವಿಡಿಯೋ ಕೂಡ ಸೆರೆಯಾಗಿತ್ತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತ ಲೋಕೇಶ್ ರಾಹುಲ್ ಅವರ ವಿಕೆಟ್ ಬೇಗನೆ ಕಳೆದುಕೊಂಡಿತು. ಮಯಾಂಕ್ ಅಗರ್ವಾಲ್ (77) ಅರ್ಧ ಶತಕ ಮತ್ತು ಚೇತೇಶ್ವರ ಪೂಜಾರ ಅವರ ಶತಕದ ನೆರವಿನಿಂದ ಭಾರತ ಗುರುವಾರ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ 4 ವಿಕೆಟ್ ಕಳೆದು 303 ರನ್ ಕಲೆ ಹಾಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications