Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಾಕ್ಸಿಂಗ್‌ ಡೇ ಟೆಸ್ಟ್: ಹಾರ್ದಿಕ್ ಪಾಂಡ್ಯ ಫುಲ್ ಫಿಟ್; ಅಶ್ವಿನ್, ಜಡೇಜಾ ಡೌಟ್!

India vs Australia: Ashwin, Jadeja in doubt, Hardik Pandya declared fit

ಮೆಲ್ಬರ್ನ್, ಡಿಸೆಂಬರ್ 23: ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಡಿಸೆಂಬರ್ 26ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ vs ಭಾರತ ಜಿದ್ದಾಜಿದ್ದಿಯ 3ನೇ ಟೆಸ್ಟ್‌ಗೆ ಹಾರ್ದಿಕ್ ಪಾಂಡ್ಯ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಆದರೆ ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಪಂದ್ಯದಲ್ಲಿ ಆಡುವುದು ಅನುಮಾನ.

ಏಷ್ಯಕಪ್ ಟೂರ್ನಿ ವೇಳೆ ಗಾಯಾಳಾಗಿ ಭಾರತ ತಂಡದಿಂದ ಹೊರ ಬಿದ್ದಿದ್ದ ಪಾಂಡ್ಯ ಈಗ ಸಂಪೂರ್ಣ ಚೇತರಿಸಿಕೊಂಡಿದ್ದು, ಆಸೀಸ್ ವಿರುದ್ಧದ 3ನೇ ಟೆಸ್ಟ್‌ಗೆ ಲಭ್ಯರಿದ್ದಾರೆ. ಆದರೆ ಸ್ಪಿನ್ನರ್ ಆರ್ ಅಶ್ವಿನ್ ಮತ್ತು ಆಲ್‌ ರೌಂಡರ್ ರವೀಂದ್ರ ಜಡೇಜಾ ಸಂಪೂರ್ಣ ಚೇತರಿಸಿಕೊಂಡಿಲ್ಲ.

ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 31 ರನ್ ಜಯ ಗಳಿಸಿತ್ತು. ಆದರೆ ದ್ವಿತೀಯ ಟೆಸ್ಟ್‌ನಲ್ಲಿ ಚತುರ ಆಟ ಆಡಿದ್ದ ಆಸೀಸ್ 146 ರನ್‌ನಿಂದ ಪಂದ್ಯವನ್ನು ವಶ ಪಡಿಸಿಕೊಂಡಿತ್ತು. ಸರಣಿಯೀಗ 1-1ರಿಂದ ಸಮಬಲಗೊಂಡಿದ್ದರಿಂದ ಮೂರನೇ ಪಂದ್ಯ ಕುತೂಹಲ ಮೂಡಿಸಿದೆ.

ಮೊದಲ ಟೆಸ್ಟ್‌ನಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ್ದ ಅಶ್ವಿನ್ ಅನಂತರ ಕಿಬ್ಬೊಟ್ಟೆ ನೋವಿಗೆ ತುತ್ತಾಗಿ ಪರ್ತ್‌ (ದ್ವಿತೀಯ) ಟೆಸ್ಟ್‌ನಿಂದ ಹೊರಗಿದ್ದರು. ಪರ್ತ್ ಟೆಸ್ಟ್‌ನಿಂದ ವಂಚಿತರಾಗಿದ್ದ ಜಡೇಜಾ ಕೂಡ ಭುಜದ ನೋವಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಚೇತರಿಸಿಕೊಂಡಿರುವ ಪಾಂಡ್ಯ ಹನುಮ ವಿಹಾರಿಯ 6ನೇ ಕ್ರಮಾಂಕ ಆವರಿಸುವ ಸಾಧ್ಯತೆಯಿದೆ.

Story first published: Sunday, December 23, 2018, 12:08 [IST]
Other articles published on Dec 23, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+