ಬಾರ್ಡರ್-ಗವಾಸ್ಕರ್ ಟ್ರೋಫಿ: ಅಕ್ಷರ್ ಬ್ಯಾಟಿಂಗ್ ಪರಾಕ್ರಮ; ರೋಹಿತ್‌ಗಿಂತಲೂ ಪಟೇಲ್ ಮುಂದು!

ಬಾರ್ಡರ್-ಗವಾಸ್ಕರ್ ಟ್ರೋಫಿ ಅಂತಮ ಹಂತವನ್ನು ತಲುಪಿದೆ. ನಾಲ್ಕನೇ ದಿನದಾಟ ಮುಕ್ತಾಯವಾಗಿದ್ದು ಕೊನೆಯ ದಿನದಾಟ ಮಾತ್ರವೇ ಬಾಕಿಯಿದೆ. ಭಾರತದ ಪರವಾಗಿ ಈ ಪಂದ್ಯದಲ್ಲಿ ಶುಬ್ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸುವ ಜೊತೆಗೆ ಅಕ್ಷರ್ ಪಟೇಲ್ ಅಮೋಘ ಅರ್ಧ ಶತಕ ಬಾರಿಸಿದ್ದಾರೆ. ಇದು ಈ ಬಾರಿಯ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಅಕ್ಷರ್ ಪಟೇಲ್ ಅವರ ಮೂರನೇ ಅರ್ಧಶತಕವಾಗಿದೆ.
ಈ ಮೂಲಕ ಅಕ್ಷರ್ ಪಟೇಲ್ ಬ್ಯಾಟಿಂಗ್‌ನಲ್ಲಿ ತಾನೆಷ್ಟು ಪರಿಣಾಮಕಾರಿಯಾಗಿ ಕೊಡುಗೆ ನೀಡಬಲ್ಲ ಆಲ್‌ರೌಂಡರ್ ಎಂಬುದನ್ನು ಮತ್ತೊಮ್ಮೆ ಸಾರಿದ್ದಾರೆ. ಇನ್ನು ಈ ಅದ್ಭುತ ಫಾರ್ಮ್‌ನೊಂದಿಗೆ ಅಕ್ಷರ್ ಪಟೇಲ್ ಈ ಬಾರಿಯ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಭಾರತದ ನಾಯಕ ಆರಂಭಿಕ ಆಟಗಾರ ರೋಹಿತ್ ಶರ್ಮಾಗಿಂತಲೂ ಹೆಚ್ಚಿನ ರನ್ ಬಾರಿಸಿದ್ದಾರೆ. ಈ ಮೂಲಕ ಬಾರ್ಡರ್-ಗವಾಸ್ಕರ್ 2023ನೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಕ್ಷರ್ ಪಟೇಲ್ 3ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಡಿದ 6 ಇನ್ನಿಂಗ್ಸ್‌ಗಳಲ್ಲಿ ರೋಹಿತ್ ಶರ್ಮಾ 262 ರನ್‌ಗಳನ್ನು ಗಳಿಸಿದ್ದಾರೆ. ಅವರ ಅತಿ ಹೆಚ್ಚಿನ ಸ್ಕೋರ್ 120 ರನ್. ಆದರೆ ಅಹ್ಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಅಕ್ಷರ್ ಪಟೇಲ್ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ. ಐದು ಇನ್ನಿಂಗ್ಸ್‌ಗಳಲ್ಲಿಯೇ ಅಕ್ಷರ್ ಪಟೇಲ್ 264 ರನ್‌ಗಳಿಸಿ ಮಿಂಚಿದ್ದಾರೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಉಸ್ಮಾನ್ ಖವಾಜ 7 ಇನ್ನಿಂಗ್ಸ್‌ಗಳಲ್ಲಿ 333 ರನ್‌ಗಳಿಸಿ ಮೊದಲ ಸ್ಥಾನದಲ್ಲಿದ್ದರೆ 6 ಇನ್ನಿಂಗ್ಸ್‌ಗಳಲ್ಲಿ 297 ರನ್‌ಗಳಿಸಿರುವ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಅಹ್ಮದಾಬಾದ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಆಸ್ಟ್ರೇಲಿಯಾ ಪರವಾಗಿ ಉಸ್ಮಾನ್ ಖವಾಜಾ 180 ರನ್‌ಗಳಿಸಿದರೆ ಕ್ಯಾಮರೂನ್ ಗ್ರೀನ್ 114 ರನ್‌ಗಳ ಕೊಡುಗೆ ನೀಡಿದ ಕಾರಣ ಆಸಿಸ್ ಪಡೆ 480 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಭಾರತ ತಂಡ ಕೂಡ ಅಮೋಘ ಪ್ರದರ್ಶನ ನೀಡಿದ್ದು ಶುಬ್ಮನ್ ಗಿಲ್ 128, ವಿರಾಟ್ ಕೊಹ್ಲಿ 186 ಹಾಗೂ ಅಕ್ಷರ್ ಪಟೇಲ್ ಅವರ 79 ರನ್‌ಗಳ ಕಾರಣದಿಂದಾಗಿ 571 ರನ್‌ಗಳಿಸಿದ್ದು ಮೊದಲ ಇನ್ನಿಂಗ್ಸ್‌ನಲ್ಲಿ 91 ರನ್‌ಗಳ ಮುನ್ನಡೆ ಪಡೆದಿದೆ.
ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಶ್ರೀಕರ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್, ಮೊಹಮ್ಮದ್ ಶಮಿ
ಬೆಂಚ್: ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಇಶಾನ್ ಕಿಶನ್, ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್, ಕುಲದೀಪ್ ಯಾದವ್
ಆಸ್ಟ್ರೇಲಿಯಾ ಆಡುವ ಬಳಗ: ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್ (ನಾಯಕ), ಪೀಟರ್ ಹ್ಯಾಂಡ್ಸ್ಕಾಂಬ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಮ್ಯಾಥ್ಯೂ ಕುಹ್ನೆಮನ್, ಟಾಡ್ ಮರ್ಫಿ, ನಾಥನ್ ಲಿಯಾನ್
ಬೆಂಚ್: ಸ್ಕಾಟ್ ಬೋಲ್ಯಾಂಡ್, ಮ್ಯಾಟ್ ರೆನ್ಶಾ, ಮಿಚೆಲ್ ಸ್ವೆಪ್ಸನ್, ಲ್ಯಾನ್ಸ್ ಮೋರಿಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications