ಅದ್ಭುತ ಕ್ಯಾಚ್‌ನಿಂದ ಮ್ಯಾಕ್ಸ್‌ವೆಲ್ ಔಟ್ ಮಾಡಿದ ಭುವಿ: ವೈರಲ್ ವಿಡಿಯೋ

ಮೆಲ್ಬರ್ನ್, ಜನವರಿ 18: ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿನ ಭಾರತ-ಆಸ್ಟ್ರೇಲಿಯಾ 3ನೇ ಏಕದಿನ ಪಂದ್ಯದಲ್ಲಿ ಭಾರತದ ವೇಗಿ ಭುವನೇಶ್ವರ್ ಕುಮಾರ್ ಮಾರಕ ಬೌಲಿಂಗ್ ದಾಳಿಗೆ ಗಮನ ಸೆಳೆದಿದ್ದಷ್ಟೇ ಅಲ್ಲ, ಅದ್ಭುತ ಕ್ಯಾಚ್‌ಗಾಗಿಯೂ ಭುವಿ ಪ್ರೇಕ್ಷಕರ ಚಿತ್ತ ತನ್ನತ್ತ ಹರಿಯುವಂತೆ ಮಾಡಿದರು.
ಶುಕ್ರವಾರದ (ಜನವರಿ 18) ಪಂದ್ಯದಲ್ಲಿ ಭುನೇಶ್ವರ್ ಹಿಡಿದ ಕಷ್ಟಕರ ಕ್ಯಾಚ್, ಆಸೀಸ್ ಸ್ಫೋಟಕ ಬ್ಯಾಟ್ಸ್ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಔಟ್ ಆಗಿಸಿತು. ಮೊಹಮ್ಮದ್ ಶಮಿಯ 34.5ನೇ ಓವರ್‌ನಲ್ಲಿ ಗ್ಲೆನ್ ನಿರ್ಗಮಿಸಿರು. ಆಗ ಮ್ಯಾಕ್ಸ್‌ವೆಲ್ ಗಳಿಸಿದ್ದಿದ್ದು ಕೇವಲ 26 ರನ್.
ಈ ಪಂದ್ಯದಲ್ಲಿ ಭುವಿ 28 ರನ್ನಿಗೆ 2 ವಿಕೆಟ್ ಕೂಡ ಪಡೆದಿದ್ದರು. ಆಸೀಸ್ ನಾಯಕ ಆ್ಯರನ್ ಫಿಂಚ್ ಅವರನ್ನು ಮೂರೂ ಏಕದಿನ ಪಂದ್ಯಗಳಲ್ಲಿ ಬಲಿ ಪಡೆದಿದ್ದು ಭುನವೇಶ್ವರ್ ಕುಮಾರ್ ಅನ್ನೋದು ವಿಶೇಷ. ಈ ಪಂದ್ಯದಲ್ಲೂ ಭುವಿ ಆಸೀಸ್ ಆರಂಭಿಕ ಆಟಗಾರರಾದ ಫಿಂಚ್ ಮತ್ತು ಅಲೆಕ್ಸ್ ಕ್ಯಾರಿಯ ವಿಕೆಟನ್ನು ಕೆಡವಿದ್ದರು.
ಟೀಮ್ ಇಂಡಿಯಾ ಬೌಲರ್‌ಗಳ ಮಾರಕ ದಾಳಿ ಮತ್ತು ನಾಯಕ ಕೊಹ್ಲಿ (46 ರನ್), ಎಂಸ್ ಧೋನಿ (87) ಮತ್ತು ಕೇದಾರ್ ಜಾಧವ್ (61) ದಿಟ್ಟ ಬ್ಯಾಟಿಂಗ್ ನೆರವಿನಿಂದ ಭಾರತ ಈ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದುಕೊಂಡಿತಲ್ಲದೆ ಏಕದಿನ ಸರಣಿಯನ್ನೂ 2-1ರಿಂದ ವಶಪಡಿಸಿಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications