ಭಾರತ-ಆಸ್ಟ್ರೇಲಿಯಾ ಸರಣಿಗೆ ಅಭಿಮಾನಿಗಳಿಗೆ ವೀಕ್ಷಣೆಗೆ ಅವಕಾಶ?!

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಭಾರತ vs ಆಸ್ಟ್ರೇಲಿಯಾ ತಂಡಗಳ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ವೇಳೆ ಕ್ರಿಕೆಟ್ ಅಭಿಮಾನಿಗಳಿಗೆ ವೀಕ್ಷಣೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಇತ್ತಂಡಗಳ ಮಧ್ಯೆ ನಾಲ್ಕು ಪಂದ್ಯಗಳ ಬಾಕ್ಸಿಂಗ್ ಡೇ ಟೆಸ್ಟ್ ನಡೆಯಲಿದೆ.
ಭಾರತ-ಆಸ್ಟ್ರೇಲಿಯಾ ಬಾಕ್ಸಿಂಗ್ ಡೇ ಟೆಸ್ಟ್‌ಗೆ ವೀಕ್ಷಕರಿಗೆ ಅವಕಾಶ ನೀಡಲು ಯೋಚಿಸುತ್ತಿರುವ ವಿಚಾರವನ್ನು ಆಸ್ಟ್ರೇಲಿಯಾ ಕ್ರಿಕೆಟ್‌ನ ಅಧಿಕಾರಿಗಳು ಸೋಮವಾರ (ಅಕ್ಟೋಬರ್ 26) ತಿಳಿಸಿದ್ದಾರೆ. ಇದು ಕ್ರಿಕೆಟ್‌ಗೆ ಶುಭಸುದ್ದಿ ಎಂದೂ ಅವರು ಹೇಳಿದ್ದಾರೆ.
ಕೊರೊನಾ ವಿಶ್ವವನ್ನು ಕಾಡಲಾರಂಭಿಸಿದಾಗ ಹಲವಾರು ತಿಂಗಳುಗಳ ಕಾಲ ಲಾಕ್‌ಡೌನ್ ವಿಧಿಸಲಾದ ದೊಡ್ಡ ದೇಶಗಳಲ್ಲಿ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿತ್ತು. ಹೀಗಾಗಿ ಆಸ್ಟ್ರೇಲಿಯಾದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗಿವೆ. ಕೊರೊನಾ ನಿವಾರಣೆಗೆ ಅಲ್ಲಿನ ಸರ್ಕಾರ ಸೂಕ್ತ ಕ್ರಮಗಳನ್ನೂ ಕೈಗೊಳ್ಳುತ್ತಿರುವ ಕಾರಣ ಈ ಸಾಧನೆ ಸಾಧ್ಯವಾಗಿದೆ.
ಆಸ್ಟ್ರೇಲಿಯಾದಲ್ಲಿ ದಿನನಿತ್ಯದ ಕೊರೊನಾ ಸೋಂಕಿತರ ಸಾವಿನ ಹೊಸ ಪ್ರಕರಣಗಳು ಕಾಣಿಸಿಕೊಳ್ಳದಿರುವುದರಿಂದ ಸ್ಟೇಡಿಯಂಗಳ ತೆರೆಯುವಿಕೆಗೆ ಮುಂದಾಗಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 'ಬಾಕ್ಸಿಂಗ್ ಡೇ ಟೆಸ್ಟ್ ವೇಳೆ ವೀಕ್ಷಕರು ಇರುತ್ತಾರೆ ಅನ್ನೋದನ್ನು ನಾನು ಬಹಳ ವಿಶ್ವಾಸದಿಂದ ಹೇಳುತ್ತೇನೆ,' ಎಂದು ವಿಕ್ಟೋರಿಯಾ ರಾಜ್ಯ ಪ್ರಧಾನಿ ಡೇನಿಯಲ್ ಆಂಡ್ರ್ಯೂಸ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications