For Quick Alerts
ALLOW NOTIFICATIONS  
For Daily Alerts
 

ಪಂಜರದ ಸಿಂಹ ಎರಗಲು ಸಜ್ಜಾಗಿದೆ: ಸ್ಮಿತ್ ಬಗ್ಗೆ ಎಚ್ಚರಿಸಿದ ಮೂಡಿ

India vs Australia: Caged lion ready to burst out, Tom Moody warned on Steve Smith

ಸಿಡ್ನಿ: ಭಾರತದ ವಿರುದ್ಧ ಏಕದಿನ ಸರಣಿಯಲ್ಲಿ ಬ್ಯಾಕ್‌ ಟು ಬ್ಯಾಕ್‌ ಶತಕ ಚಚ್ಚಿದ್ದ ಆಸ್ಟ್ರೇಲಿಯಾದ ಅಪಾಯಕಾರಿ ಬ್ಯಾಟ್ಸ್‌ಮನ್‌ ಸ್ಟೀವ್ ಸ್ಮಿತ್, ಅವರ ಪೇವರಿಟ್ ಟೆಸ್ಟ್‌ ಸರಣಿಯಲ್ಲಿ ಮಾತ್ರ ಮಂಕಾಗಿದ್ದಾರೆ. ಎರಡು ಪಂದ್ಯಗಳಲ್ಲಿ ಆಡಿರುವ ಸ್ಮಿತ್ ಎರಡರಲ್ಲೂ ನೀರಸ ಬ್ಯಾಟಿಂಗ್‌ ಪ್ರದರ್ಶಿಸಿದ್ದರು.

ಆರಂಭಿಕ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಸ್ಟೀವ್ ಸ್ಮಿತ್ ಕೇವಲ 1 ರನ್‌ಗೆ ವಿಕೆಟ್ ಒಪ್ಪಿಸಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 1 ರನ್‌ ಬಾರಿಸಿದ್ದರು. ದ್ವಿತೀಯ ಟೆಸ್ಟ್‌ನಲ್ಲಿ 0, 8 ರನ್‌ಗೆ ವಿಕೆಟ್ ನೀಡಿದ್ದರು. ಅಂತೂ ಆಸ್ಟ್ರೇಲಿಯಾಕ್ಕೆ ಪ್ರಮುಖ ಆಧಾರವಾಗಬೇಕಿದ್ದ ಸ್ಮಿತ್ ಕಳಪೆ ಫಾರ್ಮ್‌ ತೋರಿಕೊಂಡಿದ್ದರು.

3 ಇನ್ನಿಂಗ್ಸ್‌ಗಳಲ್ಲಿ ನೀರಸ ಬ್ಯಾಟಿಂಗ್ ಮಾಡಿರುವ ಸ್ಮಿತ್ ಅವರ ಬಗ್ಗೆ ಟೀಕೆಗಳೂ ಕೇಳಿ ಬರುತ್ತಿವೆ. ಆದರೆ ಸ್ಮಿತ್ ಮೂರನೇ ಪಂದ್ಯದಲ್ಲಿ ಆಡುತ್ತಾರೆ. ಅವರನ್ನು ಕೇವಲವಾಗಿ ಪರಿಗಣಿಸಬೇಡಿ ಎಂದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟರ್ ಟಾಮ್ ಮೂಡಿ ಹೇಳಿದ್ದಾರೆ. ಟೆಸ್ಟ್‌ನಲ್ಲಿ ಮಾಜಿ ವಿಶ್ವ ನಂ.1 ಶ್ರೇಯಾಂಕಿತರಾಗಿರುವ ಸ್ಮಿತ್ ನಿಜಕ್ಕೂ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ ಅನ್ನೋದರಲ್ಲಿ ಎರಡು ಮಾತಿಲ್ಲ.

ಸ್ಮಿತ್ ಬಗ್ಗೆ ಮಾತನಾಡಿರುವ ಮೂಡಿ, 'ನೀವು ಆತನ ದಾಖಲೆಗಳನ್ನು ನೋಡಬೇಕು. ಅದು ನಿಮಗೆ ಯಾವುದೇ ಭರವಸೆ ನೀಡಲಾರದು. ಆದರೆ ಪಂಜರದಲ್ಲಿರುವ ಸಿಂಹ ಯಾವ ಕ್ಷಣದಲ್ಲಾದರೂ ಸಿಡಿದು ಎರಗಬಹುದು ಎನ್ನೋ ಎಚ್ಚರಿಕೆಯನ್ನು ಆ ದಾಖಲೆಗಳು ನೀಡುತ್ತವೆ. ಹೊಸ ವರ್ಷದಲ್ಲಿ ರನ್ ಗಳಿಸುತ್ತಾರೆ ಅನ್ನೋ ಭರವಸೆ ನೀಡುವವರಲ್ಲಿ ಸ್ಮಿತ್‌ಗೆ ಹೊರತಾಗಿ ಬೇರಾರೂ ಇಲ್ಲ,' ಎಂದಿದ್ದಾರೆ.

Story first published: Wednesday, January 6, 2021, 20:41 [IST]
Other articles published on Jan 6, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+