IND vs AUS: ನಡೆಯದ ಹೆಡ್ ಆಟ, ಸ್ಮಿತ್ ನೀಡಿದ್ರು ಕಾಟ: ಭಾರತೀಯ ಸ್ಪಿನ್ ಬೌಲರ್‌ಗಳ ಮೆರೆದಾಟ
ದುಬೈನ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಚಾಂಪಿಯನ್ಸ್ ಟ್ರೋಫಿ 2025ರ ಮೊದಲ ಸೆಮಿಫೈನಲ್ ಪಂದ್ಯ ನಡೆಯುತ್ತಿದೆ. ಟೀಮ್ ಇಂಡಿಯಾ ಎದುರು ಆಸ್ಟ್ರೇಲಿಯಾ ಸರ್ಧಾತ್ಮಕ ಮೊತ್ತ ಕಲೆ ಹಾಕಿದೆ. ಟೀಮ್ ಭಾರತದ ಬೌಲರ್‌ಗಳು ಶಿಸ್ತಿನ ಬೌಲಿಂಗ್ ಪ್ರದರ್ಶನ ಮಾಡಿದರು. ಭಾರತದ ಬೌಲರ್‌ಗಳ ಎದುರು ಆಸ್ಟ್ರೇಲಿಯಾ ಸ್ಪೋಟಕ ಬ್ಯಾಟರ್ ಟ್ರಾವಿಸ್ ಹೆಡ್ ಅಬ್ಬರ ನಡೆಯಲಿಲ್ಲ. ಆಸ್ಟ್ರೇಲಿಯಾ ತಂಡಕ್ಕೆ ನಾಯಕ ಸ್ಟೀವ್ ಸ್ಮಿತ್ ಆಸರೆಯಾದರು.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 49.2 ಓವರ್‌ಗಳಲ್ಲೇ 264 ರನ್‌ಗಳಿಗೆ ಆಲೌಟ್ ಆಗಿದೆ. ಚಾಂಪಿಯನ್ಸ್ ಟ್ರೋಫಿ ಫೈನಲ್ ತಲುಪಲು ಭಾರತ ತಂಡ 265 ರನ್‌ಗಳ ಗುರಿಯನ್ನು ಬೆನ್ನಟ್ಟಬೇಕಾಗಿದೆ.

ಆಸ್ಟ್ರೇಲಿಯಾ ಪರ ಕೂಪರ್ ಕಾನೊಲಿ ಮತ್ತು ಟ್ರಾವಿಸ್ ಹೆಡ್ ಇನ್ನಿಂಗ್ಸ್ ಆರಂಭಿಸಿದರು. ಆದರೆ ಆಸೀಸ್ ಉತ್ತಮ ಆರಂಭ ಪಡೆಯಲಿಲ್ಲ. ಮೊಹಮ್ಮದ್ ಶಮಿ ಎಸೆತದಲ್ಲಿ ಕೂಪರ್ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರೆ, ಸ್ಪೋಟಕ ಬ್ಯಾಟರ್ ಹೆಡ್ (39) ಅವರನ್ನು ವರುಣ್ ಚಕ್ರವರ್ತಿ ಔಟ್ ಮಾಡಿದರು. ಸಂಕಷ್ಟದ ಸಮಯದಲ್ಲಿ ಆಸೀಸ್ ಪಡೆಗೆ ನಾಯಕ ಸ್ಟೀವ್ ಸ್ಮಿತ್ ಒಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಮಾಡುವ ಮೂಲಕ ಆಸರೆಯಾದರು.
ಆದರೆ ಇನ್ನೊಂದು ತುದಿಯಲ್ಲಿ ರವೀಂದ್ರ ಜಡೇಜಾ ಸತತ ಎರಡು ವಿಕೆಟ್ ಪಡೆಯುವ ಮೂಲಕ ಆಸೀಸ್‌ಗೆ ಆಘಾತ ನೀಡಿದರು. ಜಡೇಜಾ 23ನೇ ಓವರ್‌ನ ಮೂರನೇ ಎಸೆತದಲ್ಲಿ 29 ರನ್ ಗಳಿಸಿದ ಮಾರ್ನಸ್ ಲ್ಯಾಬುಶೇನ್ ಅವರನ್ನು ಎಲ್‌ಬಿಡಬ್ಲ್ಯೂ ಮೂಲಕ ಔಟ್ ಮಾಡಿದರು. ನಂತರ 27ನೇ ಓವರ್‌ನ ಕೊನೆಯ ಎಸೆತದಲ್ಲಿ 11 ರನ್ ಗಳಿಸಿದ ಜೋಶ್ ಇಂಗ್ಲಿಸ್ ವಿಕೆಟ್ ಪಡೆದರು.
ಸ್ಮಿತ್-ಕ್ಯಾರಿ ಅರ್ಧಶತಕ
ಅಲೆಕ್ಸ್ ಕ್ಯಾರಿ ಮತ್ತು ಸ್ಟೀವ್ ಸ್ಮಿತ್ ಜೊತೆಯಾಗಿ ಆಸೀಸ್ ತಂಡದ ಸ್ಕೋರ್ ಅನ್ನು 200 ರ ಗಡಿ ದಾಟಿಸಿದರು. ಆದರೆ ಅಷ್ಟರಲ್ಲಿ, 69 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 73 ರನ್ ಗಳಿಸಿ ಆಟವಾಡುತ್ತಿದ್ದ ನಾಯಕ ಸ್ಮಿತ್ ಅವರು ಮೊಹಮ್ಮದ್ ಶಮಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಮುಂದಿನ ಓವರ್‌ನಲ್ಲಿಯೇ ಗ್ಲೆನ್ ಮ್ಯಾಕ್ಸ್‌ವೆಲ್ (7) ಅವರನ್ನು ಅಕ್ಸರ್ ಔಟ್ ಮಾಡಿದರು. ಒಂದು ಕಡೆ ವಿಕೆಟ್‌ಗಳು ಬೀಳುತ್ತಿದರೆ, ಅಲೆಕ್ಸ್ ಕ್ಯಾರಿ ತಮ್ಮ ಅರ್ಧಶತಕವನ್ನು ಪೂರೈಸಿದರು. ಕ್ಯಾರಿ 45 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 50 ರನ್ ಗಳಿಸಿದರು.
ಬೆನ್ ದ್ವಾರಶಿಸ್ 19 ರನ್ ಗಳಿಸಿ ಔಟಾದರು. ಇದಾದ ಬಳಿಕ ಅಲೆಕ್ಸ್ ಕ್ಯಾರಿ (60) 2 ರನ್ ಕದಿಯಲು ಪ್ರಯತ್ನಿಸುವಾಗ ಶ್ರೇಯಸ್ ಅಯ್ಯರ್ ಅವರ ನೇರ ಹಿಟ್ ಥ್ರೋನಲ್ಲಿ ರನೌಟ್ ಆದರು. ನಾಥನ್ ಎಲ್ಲಿಸ್ 10 ರನ್, ಆಡಮ್ ಜಮ್ಮಾ 7 ರನ್ ಮತ್ತು ತನ್ವೀರ್ ಸಂಘ 1 ರನ್ ಗಳಿಸುವುದರೊಂದಿಗೆ ಆಸ್ಟ್ರೇಲಿಯಾ 49.3 ಓವರ್‌ಗಳಲ್ಲಿ 264 ರನ್‌ಗಳಿಗೆ ಆಲೌಟ್ ಆಯಿತು.
ಭಾರತದ ಬೌಲರ್ಸ್ ಮಿಂಚು
ಭಾರತದ ಪರ ಮೊಹಮ್ಮದ್ ಶಮಿ 3 ವಿಕೆಟ್ ಕಬಳಿಸಿದರೆ, ರವೀಂದ್ರ ಜಡೇಜಾ ಮತ್ತು ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದರು. ಅಕ್ಸರ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಉರುಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications