IND vs AUS ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್: ಆಸ್ಟ್ರೇಲಿಯಾ 30 ಓವರ್‌ಗಳಲ್ಲಿ 4 ವಿಕೆಟ್‌ಗೆ 152 ರನ್
ಆಸ್ಟ್ರೇಲಿಯಾದ ಪರ ಇನಿಂಗ್ಸ್ ಆರಂಭಿಸಿದ ಟ್ರಾವಿಸ್ ಹೆಡ್ ತಮ್ಮ ಘನತೆಗೆ ತಕ್ಕ ಆಟವನ್ನೇ ಆರಂಭದಲ್ಲಿ ಆಡಿದರು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುವ ನಾಯಕ ಸ್ಟೀವನ್ ಸ್ಮಿತ್ ಅವರ ನಿರ್ಧಾರವನ್ನು ಸಮರ್ಥಿಸಿಕೊಂಡರು. ಆರಂಭದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಟ್ರಾವಿಸ್ ಹೆಡ್, ಆರಂಭದಲ್ಲಿ ಭಾರತಕ್ಕೆ ತಲೆ ನೋವಾದರು. ಈ ವೇಳೆ ಟೀಮ್ ಇಂಡಿಯಾದ ವೇಗದ ಬೌಲರ್‌ಗಳು ಹಾಗೂ ಸ್ಪಿನ್ ಬೌಲರ್‌ಗಳನ್ನು ಕಾಡಿದ್ದರು. ಅಲ್ಲದೆ ಮೊಹಮ್ಮದ್ ಶಮಿ ತಮ್ಮ ಮೊದಲ ಓವರ್‌ನಲ್ಲೇ ಟ್ರಾವಿಸ್ ಹೆಡ್ ಅವರ ಕ್ಯಾಚ್ ಕೈ ಚೆಲ್ಲಿದ್ದರು.
ಟಾಸ್ ಗೆದ್ದು ಬ್ಯಾಟ್ ಮಾಡಿದ ಆಸೀಸ್ ಪರ ಮ್ಯಾಥ್ಯು ಶಾರ್ಟ್ ಬದಲಿಗೆ ಕೂಪರ್ ಕಾನೊಲಿಗೆ ಆಡುವ ಅವಕಾಶ ಸಿಕ್ಕಿತು. ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಕೂಪರ್ ಕಾನೊಲಿ ವಿಫಲರಾದರು. ಇವರು
ಸೆಮಿಫೈನಲ್ ಪಂದ್ಯದಲ್ಲಿ 9 ಎಸೆತದಲ್ಲಿ ರನ್ ಬಾರಿಸುವಲ್ಲಿ ವಿಫಲರಾದರು. ಇವರಿಗೆ ಮೊಹಮ್ಮದ್ ಶಮಿ ಅವರು ಖೆಡ್ಡಾ ತೋಡುವಲ್ಲಿ ವಿಫಲರಾದರು.

ಟ್ರಾವಿಸ್ ಹೆಡ್ ದೊಡ್ಡ ಇನಿಂಗ್ಸ್ ಕಟ್ಟುವ ಸೂಚನೆಯನ್ನು ನೀಡಿದರು. ಈ ಅವಧಿಯಲ್ಲಿ ಇವರು ಕುಲ್‌ದೀಪ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಅವರಿಗೆ ಸಿಕ್ಸರ್ ಬಾರಿಸಿ ಅಬ್ಬರಿಸಿದ್ದರು. ಆದರೆ ಈ ವೇಳೆಯಲ್ಲಿ ಇವರ ಆರ್ಭಟಕ್ಕೆ ಭಾರತ ಕೊಂಚ ಚಿಂತೆಯನ್ನು ಮೂಡಿಸಿತ್ತು. ಈ ವೇಳೆ 9ನೇ ಓವರ್ ಬೌಲ್ ಮಾಡಲು ಬಂದ ಟ್ರಾವಿಸ್ ಹೆಡ್ ಅವರ ಎಸೆತವನ್ನು ತಪ್ಪಾಗಿ ಗ್ರಹಿಸಿ, ಶುಭಮನ್ ಗಿಲ್‌ಗೆ ಕ್ಯಾಚ್ ನೀಡಿದರು. ಆಸ್ಟ್ರೇಲಿಯಾ 10 ಓವರ್‌ಗಳಲ್ಲಿ 2 ವಿಕೆಟ್‌ಗೆ 63 ರನ್ ಸೇರಿಸಿದೆ.
ಆಸ್ಟ್ರೇಲಿಯಾ ಮಾಸ್ಟರ್ ಪ್ಲ್ಯಾನ್
ಭಾರತದ ಬ್ಯಾಟರ್‌ಗಳಿಗೆ ಕಾಟ ನೀಡಲು ಆಸ್ಟ್ರೇಲಿಯಾ ಭಾರತೀಯ ಮೂಲದ ತನ್ವೀರ್ ಸಂಘ ಅವರಿಗೆ ಅವಕಾಶ ನೀಡಲಾಗಿದೆ. ಇವರು ಈಗಾಗಲೇ ಆಸ್ಟ್ರೇಲಿಯಾ ಪರ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಈಗ ಇವರು ಭಾರತ ತಂಡವನ್ನು ಕಾಡಲು ಸಿದ್ಧರಾಗಿದ್ದಾರೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲ್‌ದೀಪ್ ಯಾದವ್, ವರುಣ್ ಚಕ್ರವರ್ತಿ.
ಆಸ್ಟ್ರೇಲಿಯಾ ತಂಡ: ಕೂಪರ್ ಕಾನೊಲಿ, ಟ್ರಾವಿಸ್ ಹೆಡ್, ಸ್ಟೀವನ್ ಸ್ಮಿತ್ (ನಾಯಕ), ಮಾರ್ನಸ್ ಲಂಬುಶೇನ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಅಲೆಕ್ಸ್ ಕ್ಯಾರಿ, ಗ್ಲೆನ್ ಮ್ಯಾಕ್ಸ್‌ವೆಲ್, ಬೆನ್ ದ್ವಾರ್ಶುಯಿಸ್, ನಾಥನ್ ಎಲ್ಲಿಸ್, ಆಡಮ್ ಜಂಪಾ, ತನ್ವೀರ್ ಸಂಘ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications