Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಆಸ್ಟ್ರೇಲಿಯಾ: ಇತಿಹಾಸ ಬರೆಯಲು ಕ್ಲೇರ್ ಪೊಲೊಸಾಕ್ ಸಜ್ಜು

India vs Australia: Claire Polosak set to become first female match official in mens Test match

ಸಿಡ್ನಿ: ಆಸ್ಟ್ರೇಲಿಯಾದ ಕ್ಲೇರ್ ಪೊಲೊಸಾಕ್ ಟೆಸ್ಟ್ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಲಿದ್ದಾರೆ. ಪುರುಷರ ಟೆಸ್ಟ್ ಕ್ರಿಕೆಟ್‌ನಲ್ಲಿ ಜವಾಬ್ದಾರಿ ನಿರ್ವಹಿಸಿದ ಮೊದಲ ಮಹಿಳಾ ಅಧಿಕಾರಿಯಾಗಿ ಕ್ಲೇರ್ ಮೈಲಿಗಲ್ಲು ಸ್ಥಾಪಿಸಲಿದ್ದಾರೆ. ಭಾರತ vs ಆಸ್ಟ್ರೇಲಿಯಾ ಮೂರನೇ ಟೆಸ್ಟ್‌ನಲ್ಲಿ ಪೊಲೊಸಾಕ್ ಈ ದಾಖಲೆಗೆ ಕಾರಣರಾಗಲಿದ್ದಾರೆ.

ಗುರುವಾರ (ಜನವರಿ 7) ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಕ್ಲೇರ್ ಪೊಲೊಸಾಕ್ ಅವರು ಫೋರ್ತ್ ಅಂಪೈರ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಪುರುಷರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮಹಿಳಾ ಅಧಿಕಾರಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲ ಬಾರಿಯೆನಿಸಲಿದೆ.

32ರ ಹರೆಯದ ನ್ಯೂ ಸೌತ್‌ವೇಲ್ಸ್ ನಿವಾಸಿ ಪೊಲೊಸಾಕ್ ಅವರು ಈಗಾಗಲೇ ಪುರುಷರ ಕ್ರಿಕೆಟ್‌ನಲ್ಲಿ ಆನ್ ಫೀಲ್ಡ್ ಅಂಪೈರ್ ಜವಾಬ್ದಾರಿ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. 2019ರ ಏಕದಿನ ಐಸಿಸಿ ಡಿವಿಶನ್ 2 ಲೀಗ್‌ನಲ್ಲಿ ನಮೀಬಿಯಾದ ವಿಂಡ್‌ಹೋಕ್‌ನಲ್ಲಿ ನಡೆದಿದ್ದ ನಮೀಬಿಯಾ ಮತ್ತು ಓಮನ್ ನಡುವಿನ ಪಂದ್ಯದಲ್ಲಿ ಜವಾಬ್ದಾರಿ ನಿರ್ವಹಿಸಿದ್ದರು.

ಗುರುವಾರ ನಡೆಯುವ ಭಾರತ-ಆಸ್ಟ್ರೇಲಿಯಾ 3ನೇ ಟೆಸ್ಟ್ ಪಂದ್ಯದಲ್ಲಿ ಆನ್ ಫೀಲ್ಡ್ ಅಂಪೈರ್‌ ಆಗಿ ಮಾಜಿ ವೇಗಿ ಪಾಲ್ ರೀಫೆಲ್, ಪಾಲ್ ವಿಲ್ಸನ್ ಮತ್ತು ಟಿವಿ ಅಂಪೈರ್‌ ಆಗಿ ಬ್ರೂಸ್ ಆಕ್ಸೆನ್‌ಫೋರ್ಡ್ ಜವಾಬ್ದಾರಿ ನಿರ್ವಹಿಸಲಿದ್ದಾರೆ.

Story first published: Wednesday, January 6, 2021, 22:54 [IST]
Other articles published on Jan 6, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+