India vs Australia: ದ್ವಿತೀಯ ಏಕದಿನ ಪಂದ್ಯದಿಂದ ರಿಷಬ್ ಪಂತ್ ಹೊರಕ್ಕೆ!

ರಾಜ್‌ಕೋಟ್, ಜನವರಿ 16: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಿಂದ ಯುವ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ರಿಷಬ್ ಪಂತ್ ಹೊರ ಬಿದ್ದಿದ್ದಾರೆ. ಮೊದಲ ಏಕದಿನ ಪಂದ್ಯದ ವೇಳೆ ಹೆಲ್ಮೆಟ್‌ಗೆ ಚೆಂಡು ಬಡಿದು ಪಂತ್ ಗಾಯಗೊಂಡಿದ್ದರು. ಪಂತ್ ಈಗ ಸಂಪೂರ್ಣ ಚೇತರಿಸಿಕೊಂಡಿಲ್ಲ. ಹೀಗಾಗಿ ದ್ವಿತೀಯ ಪಂದ್ಯದಲ್ಲಿ ಆಡುತ್ತಿಲ್ಲ.
ಭಾರತ-ಆಸ್ಟ್ರೇಲಿಯಾ ಆರಂಭಿಕ ಪಂದ್ಯದಲ್ಲಿ ಭಾರತದ ಇನ್ನಿಂಗ್ಸ್ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ರಿಷಬ್ ಪಂತ್, ಹೆಲ್ಮೆಟ್‌ಗೆ ಚೆಂಡು ಬಡಿದು ಗಾಯಕ್ಕೀಡಾಗಿದ್ದರು. ಹೀಗಾಗಿ ಆಸ್ಟ್ರೇಲಿಯಾ ಇನ್ನಿಂಗ್ಸ್‌ನಲ್ಲಿ ಪಂತ್ ಫೀಲ್ಡಿಂಗ್‌ಗೆ ಇಳಿದಿರಲಿಲ್ಲ. ಪಂತ್ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಕನ್ನಡಿಗ ಕೆಎಲ್ ರಾಹುಲ್ ವಹಿಸಿಕೊಂಡಿದ್ದರು.
ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯಕ್ಕಾಗಿ ಟೀಮ್ ಇಂಡಿಯಾ ರಾಜ್‌ಕೋಟ್‌ಗೆ ತಲುಪಿದೆ. ಆದರೆ ಪಂತ್, ಗಾಯ ಸುಧಾರಣೆ ಮತ್ತು ಪರೀಕ್ಷೆಗೊಳಪಡುವುದಕ್ಕಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.
'ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಿಂದ ರಿಷಬ್ ಪಂತ್ ಹೊರಬಿದ್ದಿದ್ದಾರೆ. ಅಂತಿಮ ಏಕದಿನದಲ್ಲಿ ಪಂತ್ ಆಡುತ್ತಾರೋ ಇಲ್ಲವೊ ಅನ್ನೋದು ಅವರು ರಿಹ್ಯಾಬಿಲಿಟೇಶನ್ ಪ್ರೋಟೋಕಾಲ್ ವೇಳೆ ಹೇಗೆ ಸ್ಪಂದಿಸಲಿದ್ದಾರೆ ಅನ್ನೋದರ ಮೇಲೆ ನಿರ್ಧಾರವಾಗಲಿದೆ,' ಎಂದು ಬಿಸಿಸಿಐ ತಿಳಿಸಿದೆ.
ಆರಂಭಿಕ ಪಂದ್ಯದಲ್ಲಿ ಪಂತ್ 28 ರನ್ ಬಾರಿಸಿ ಪ್ಯಾಟ್ ಕಮಿನ್ಸ್‌ಗೆ ವಿಕೆಟ್ ನೀಡಿದ್ದರು. ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ 10 ವಿಕೆಟ್‌ಗಳ ಹೀನಾಯ ಸೋಲನುಭವಿಸಿತ್ತು. ಸದ್ಯ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಸೀಸ್ 1-0ಯ ಮುನ್ನಡೆಯಲ್ಲಿದ್ದು, ಸರಣಿ ಉಳಿವಿಗಾಗಿ ಭಾರತ ದ್ವಿತೀಯ ಪಂದ್ಯದಲ್ಲಿ ಗೆಲ್ಲಲೇಬೇಕಿದೆ. 2ನೇ ಪಂದ್ಯ 1.30 pmಗೆ ಆರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications