ಭಾರತ vs ಆಸ್ಟ್ರೇಲಿಯಾ: ವೀಕ್ಷಕರಿಗೆ ಬಾಗಿಲು ತೆರೆಯಲಿದೆ ಸ್ಟೇಡಿಯಂ

ಸಿಡ್ನಿ: ಕೊರೊನಾ ವೈರಸ್ ಭೀತಿಯಿಂದಾಗಿ ವೀಕ್ಷಕರಿಗೆ ಕದ ಮುಚ್ಚಿದ್ದ ಸ್ಟೇಡಿಯಂಗಳು ಮೆಲ್ಲಗೆ ಒಂದೊಂದಾಗಿ ತೆರೆಯುವ ಮುನ್ಸೂಚನೆ ಲಭಿಸಿದೆ. ಭಾರತ vs ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದ ವೇಳೆ ವೀಕ್ಷಕರು ಮೈದಾನಕ್ಕೆ ಬರಲು ಅನುಮತಿ ನೀಡಲಾಗಿದೆ.
ನವೆಂಬರ್ 27ರಿಂದ ಬಹು ನಿರೀಕ್ಷಿತ ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ ಆರಂಭಗೊಳ್ಳಲಿದೆ. ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಮೊದಲನೇ ಏಕದಿನ ಪಂದ್ಯ ನಡೆಯಲಿದ್ದು, ಅರ್ಧ ಸ್ಟೇಡಿಯಂನಷ್ಟು ವೀಕ್ಷಕರಿಗೆ ಅನುಮತಿ ನೀಡಲಾಗಿದೆ. ಸರಣಿಗೆ ಸಂಬಂಧಿಸಿದ ಟಿಕೆಟ್‌ಗಳು ಪೂರ್ತಿ ಮಾರಾಟವಾಗಿವೆ.
ಕೊರೊನಾ ಬಳಿಕ ವಿರಾಟ್ ಕೊಹ್ಲಿ ಪಡೆ ಅಂತಾರಾಷ್ಟ್ರೀಯ ಪಂದ್ಯ ಆಡದೆ ಸುಮಾರು 9 ತಿಂಗಳು ಕಳೆದಿವೆ. ಕೊಹ್ಲಿ ಪಡೆ ಕಡೇ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದು ಫೆಬ್ರವರಿ 29ರಿಂದ ಮಾರ್ಚ್ 2ರ ವರೆಗೆ ಹೆಡ್ಡಿಂಗ್ಲಿಯಲ್ಲಿ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ. ಈ ಸರಣಿಯಲ್ಲಿ ಕಿವೀಸ್ ಗೆದ್ದಿತ್ತು.
ಆಸ್ಟ್ರೇಲಿಯಾದಲ್ಲಿ ಭಾರತ vs ಆಸ್ಟ್ರೇಲಿಯಾ ತಂಡಗಳು 51 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ 13 ಪಂದ್ಯಗಳಲ್ಲಿ ಭಾರತ ಗೆದ್ದಿದ್ದರೆ, 36 ಪಂದ್ಯಗಳಲ್ಲಿ ಕಾಂಗರೂ ಪಡೆ ಗೆದ್ದಿತ್ತು. 2 ಪಂದ್ಯಗಳಲ್ಲಿ ಫಲಿತಾಂಶ ಬಂದಿರಲಿಲ್ಲ. ಇತ್ತಂಡಗಳ ಸರಣಿಯು ಸುಮಾರು 2 ತಿಂಗಳ ಕಾಲ ನಡೆಯಲಿದ್ದು, ಸರಣಿಯು 3 ಏಕದಿನ, 3 ಟಿ20ಐ ಮತ್ತು 4 ಟೆಸ್ಟ್ ಪಂದ್ಯಗಳನ್ನು ಒಳಗೊಂಡಿರಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications