ಭಾರತ ವಿರುದ್ಧ ಹೊಸ ದಾಖಲೆ ಬರೆದ ಡೇವಿಡ್ ವಾರ್ನರ್, ಆ್ಯರನ್ ಫಿಂಚ್!

ಮುಂಬೈ, ಜನವರಿ 15: ಭಾರತ vs ಆಸ್ಟ್ರೇಲಿಯಾ ನಡುವಿನ ಮುಖಾಮುಖಿ ಜಿದ್ದಾಜಿದ್ದಿಯದ್ದೆನಿಸಲಿದೆ ಅನ್ನಿಸಿತ್ತು. ಆದರೆ ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ಪ್ರವಾಸಿಗರ ಕೈ ಮೇಲಾಯಿತು. ಆತಿಥೇಯ ಭಾರತ ತಂಡ ಹೀನಾಯ ಸೋಲಿನ ಮುಖಭಂಗ ಅನುಭವಿಸಿತು. ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ನಿರಾಯಾಸ ಗೆಲುವಿನೊಂದಿಗೆ ಬೀಗಿದ್ದ ಟೀಮ್ ಇಂಡಿಯಾಕ್ಕೆ ಈ ಸೋಲು ಎಂಥದ್ದೋ ಪಾಠ ಹೇಳಿಕೊಟ್ಟಂತಿದೆ.
ಮಂಗಳವಾರ (ಜನವರಿ 14) ನಡೆದ ಭಾರತ-ಆಸ್ಟ್ರೇಲಿಯಾ ಮೊದಲನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ 10 ವಿಕೆಟ್‌ಗಳ ಸೋಲನುಭವಿಸಿದೆ. ಇದಕ್ಕೆ ಪ್ರಮುಖ ಕಾರಣ ಆಸೀಸ್ ಆರಂಭಿಕ ಬ್ಯಾಟ್ಸ್‌ಮನ್‌ಗಳ ಭರ್ಜರಿ ಆಟ.
ಡೇವಿಡ್ ವಾರ್ನರ್, ನಾಯಕ ಆ್ಯರನ್ ಫಿಂಚ್ ದಿಟ್ಟ ಬ್ಯಾಟಿಂಗ್ ಇಬ್ಬರ ಹೆಸರಿನಲ್ಲಿ ಮತ್ತೊಂದು ಶತಕ ಸೇರಿಸಿತಲ್ಲದೆ ಆಸ್ಟ್ರೇಲಿಯಾ ದಾಖಲೆಯ ಗೆಲುವನ್ನಾಚರಿಸಿದೆ.

ಭಾರತ ಬ್ಯಾಟಿಂಗ್ ವೈಫಲ್ಯ
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲಿಲ್ಲ. ಶಿಖರ್ ಧವನ್ 74, ಕೆಎಲ್ ರಾಹುಲ್ 47, ರಿಷಬ್ ಪಂತ್ 28, ರವೀಂದ್ರ ಜಡೇಜಾ 25 ರನ್‌ನೊಂದಿಗೆ 49.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 255 ರನ್ ಮಾಡಿತ್ತು. ಈ ರನ್ ಗುರಿ ಬಲಿಷ್ಠ ಆಸ್ಟ್ರೇಲಿಯಾಕ್ಕೆ ಸಾವಾಲೇ ಅನ್ನಿಸಲಿಲ್ಲ.

ವಾರ್ನರ್-ಫಿಂಚ್ ದಾಖಲೆಯಾಟ
ಭಾರತ ನೀಡಿದ್ದ 255 ರನ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾದಿಂದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಡೇವಿಡ್ ವಾರ್ನರ್ ಮತ್ತು ಆ್ಯರನ್ ಫಿಂಚ್ ಸ್ಫೋಟಕ ಬ್ಯಾಟಿಂಗ್ ತೋರಿಸಿದರು. ವಾರ್ನರ್ 128 (112 ಎಸೆತ), ಫಿಂಚ್ 110 (114 ಎಸೆತ) ರನ್ ಸೇರ್ಪಡೆ ಪ್ರವಾಸಿಗರಿಗೆ 37.4 ಓವರ್‌ನಲ್ಲೇ ದಾಖಲೆಯ ಗೆಲುವಿನ ಉಡುಗೊರೆ ನೀಡಿತು.

ವಿಕೆಟ್ ನಷ್ಟವಿಲ್ಲದೆ ಗೆದ್ದ ದಾಖಲೆ
ಭಾರತದ ವಿರುದ್ಧ ವಿಕೆಟ್ ನಷ್ಟವೇ ಇಲ್ಲದೆ ಆಸ್ರೇಲಿಯಾ ಗೆಲ್ಲಿಸಿದ ದಾಖಲೆಗೆ ವಾರ್ನರ್ ಫಿಂಚ್ ಕಾರಣರಾಗಿದ್ದಾರೆ. ಅದೂ ಚೇಸಿಂಗ್ ವೇಳೆ ವಿಕೆಟ್ ನಷ್ಟವಿಲ್ಲದೆ ಆಸೀಸ್ ಜೋಡಿ ಬಾರಿಸಿದ ಅತ್ಯಧಿಕ ರನ್ ದಾಖಲೆಗೆ ಫಿಂಚ್-ವಾರ್ನರ್ ಬ್ಯಾಟಿಂಗ್ ಕಾರಣವಾಗಿದೆ. ಅಲ್ಲದೆ ಒಟ್ಟಾರೆ ಚೇಸಿಂಗ್ ವೇಳೆ ದಾಖಲಾದ 3ನೇ ಅತ್ಯಧಿಕ ರನ್ ಜೊತೆಯಾಟವಾಗಿ ಈ ರನ್ ಗುರುತಿಸಿಕೊಂಡಿದೆ.

4 ವರ್ಷಗಳ ಹಿಂದಿನ ದಾಖಲೆ ಬದಿಗೆ
ಏಕದಿನದಲ್ಲಿ ಭಾರತ ನೀಡಿದ್ದ ಉತ್ತಮ ರನ್ ಗುರಿಯನ್ನು ವಿಕೆಟ್ ನಷ್ಟವಿಲ್ಲದೆ ಮುಟ್ಟಿದ ದಾಖಲೆಯನ್ನು ಆಸ್ಟ್ರೇಲಿಯಾ 2016ರಲ್ಲಿ ನಿರ್ಮಿಸಿತ್ತು. ಆಸೀಸ್ ಪರ ಜಾರ್ಜ್ ಬೈಲಿ ಮತ್ತು ಸ್ಟೀವ್ ಸ್ಮಿತ್ 242 ರನ್ ಬಾರಿಸಿ ಈ ದಾಖಲೆ ನಿರ್ಮಿಸಿದ್ದರು. ವಾರ್ನರ್-ಫಿಂಚ್ ದಾಖಲೆ ಹಿಂದಿನ ದಾಖಲೆಯನ್ನು ಮೀರಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications