ಭಾರತ ವಿರುದ್ಧದ ಆರಂಭಿಕ ಟೆಸ್ಟ್‌ನಿಂದ ಡೇವಿಡ್ ವಾರ್ನರ್ ಹೊರಕ್ಕೆ

ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಟಾರ್ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಅವರು ಭಾರತ ವಿರುದ್ಧದ ಆರಂಭಿಕ ಟೆಸ್ಟ್‌ನಿಂದ ಹೊರ ಬಿದ್ದಿದ್ದಾರೆ. ಆದರೆ ದ್ವಿತೀಯ ಟೆಸ್ಟ್ ವೇಳೆ ತಂಡಕ್ಕೆ ಮರಳಲು ವಾರ್ನರ್ ಯತ್ನಿಸಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.
ಗಾಯಕ್ಕೀಡಾಗಿರುವ ಡೇವಿಡ್ ವಾರ್ನರ್ ಚೇತರಿಸಿಕೊಳ್ಳುತ್ತಿದ್ದಾರೆ. ಪ್ರವಾಸಿ ಭಾರತದ ವಿರುದ್ಧದ ದ್ವಿತೀಯ ಏಕದಿನ ಪಂದ್ಯದ ವೇಳೆ ವಾರ್ನರ್ ತೊಡೆ ಭಾಗದ ಸ್ನಾಯುಗಳ ಬೇನೆಗೆ ತುತ್ತಾಗಿದ್ದರು. ಅಂದಿನ ಪಂದ್ಯದಲ್ಲಿ ವಾರ್ನರ್ 83 ರನ್‌ಗೆ ರನ್‌ಔಟ್ ಆಗಿದ್ದರು.
'ಅತೀ ಕಡಿಮೆ ಅವಧಿಯಲ್ಲಿ ನಾನು ಚೇತರಿಸಿಕೊಳ್ಳುತ್ತಿರುವುದಕ್ಕೆ ನನಗೆ ಖುಷಿಯಾಗಿದೆ. ಸಿಡ್ನಿಯಲ್ಲೇ ಉಳಿದು ಸಂಪೂರ್ಣ ಫಿಟ್‌ನೆಸ್‌ಗೆ ಮರಳು ಯತ್ನಿಸುವುದು ಒಳ್ಳೆದು ಎಂದು ನನಗನ್ನಿಸುತ್ತಿದೆ,' ಎಂದು ಹೇಳಿಕೆಯ ಮೂಲಕ ವಾರ್ನರ್ ತಿಳಿಸಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1ರಿಂದ ಕಳೆದುಕೊಂಡಿತ್ತು. ಟಿ20ಐ ಸರಣಿಯಲ್ಲಿ 2-1ರ ಜಯ ಕಂಡಿತ್ತು. ಇನ್ನು ನಾಲ್ಕು ಪಂದ್ಯಗಳ ಕುತೂಹಲಕಾರಿ ಟೆಸ್ಟ್ ಸರಣಿ ಡಿಸೆಂಬರ್ 17ರಿಂದ ಆರಂಭಗೊಳ್ಳಲಿದೆ. ಡಿಸೆಂಬರ್ 11ರಂದು ಎರಡನೇ ಅಭ್ಯಾಸ ಪಂದ್ಯ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications